• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಕಾವ್ಯ ದಿನ: ಬದುಕನ್ನು ಸುಂದರವಾಗಿಸಿರುವ ಕವನಗಳಿಗೆ ನಮನ

|

'ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೆ...' ದಾಂಪತ್ಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಆ ಕವನವನ್ನು, ಸಿ ಅಶ್ವಥ್ ಅವರ ಕಂಚಿನ ಕಂಠದಿಂದ ಕೇಳಬೇಕು... ಆಗಷ್ಟೇ ಮಣ್ಣನ್ನು ತೋಯ್ದು ಪರಿಮಳ ಬರಿಸುತ್ತಿರುವ ಮಳೆ, ಸುತ್ತ ಹಿತವಾದ ಮೌನ ಕಲ್ಪಿಸಿಟ್ಟ ಸುಂದರ ಸಂಜೆ... ಮನದಲ್ಲಿ ಕಚಗುಳಿ ಇಡುವ ಈ ಹಾಡು ಹಿನ್ನೆಲೆಯಲ್ಲಿ ಉಲಿಯುತ್ತಿರಬೇಕು... ಆ ಕ್ಷಣ ನೀಡುವ ಮಧುರ ಅನುಭೂತಿಯ ಮುಂದೆ ಇನ್ನೇನು ಬೇಕು..?!

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹ ಸ್ವಾಮಿ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಎಚ್ ಎಸ್ ವೆಂಕಟೇಶಮೂರ್ತಿ, ಗೋಪಾಲಕೃಷ್ಣ ಅಡಿಗ ಮುಂತಾದ ಕನ್ನಡದ ಮಹಾನ್ ಕವಿಗಳ ಕವನಕ್ಕಿರುವ ಶಕ್ತಿ ಅದು. ಖಿನ್ನ ಮನಸ್ಸಿಲ್ಲೂ ಬದುಕಿನ ಪ್ರೀತಿಯನ್ನು ಒಸರಿಸುವ ಇವರೆಲ್ಲರ(ಕನ್ನಡದ ಎಲ್ಲ ಕವಿಗಳ) ಕವನಗಳೆಲ್ಲ ಕನ್ನಡ ಸಾಹಿತ್ಯ ಕ್ಷೇತ್ರದ ಘನತೆಯನ್ನು ಹೆಚ್ಚಿಸಿವೆ. ಬಾಡಿದ ಮನಸ್ಸಿಗೆ ಹಿಡಿ ಸಾಂತ್ವನ ನೀಡಿವೆ.

ಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ

ಇಂದು ವಿಶ್ವ ಕಾವ್ಯ ದಿನವಂತೆ! ಕಾವ್ಯಾಭಿವ್ಯಕ್ತಿಯ ಮೂಲಕ ಭಾಷಾ ವೈವಿಧ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದಾಗಿ ಪ್ರತಿವರ್ಷ ಮಾರ್ಚ್ 21 ನ್ನು ವಿಶ್ವ ಕಾವ್ಯ ದಿನ(World Poetry Day)ವನ್ನಾಗಿ ಆಚರಿಸಲಾಗುತ್ತದೆ. 1999 ರಲ್ಲಿ ಯುನೆಸ್ಕೋ ಸಹ ಇದಕ್ಕೆ ಒಪ್ಪಿಗೆ ನೀಡಿದೆ.

ಮತ್ತೆ ಮರೆಯಾಗುತ್ತೇನೆಂದು

ವಿಶ್ವ ಕಾವ್ಯ ದಿನಕ್ಕೆ ಹಲವು ಸೆಲೆಬ್ರಿಟಿಗಳು ಶುಭಹಾರೈಸಿದ್ದಾರೆ. ನಮ್ಮ ಬದುಕನ್ನು ಮತ್ತಷ್ಟು ಸುಂದರವಾಗಿಸಿರುವ ಸ್ಫೂರ್ತಿದಾಯಕ ಕವನಗಳನ್ನು ನೆನಪಿಸಿಕೊಂಡಿದ್ದಾರೆ.

ಸುಂದರ ಅಭಿವ್ಯಕ್ತಿ ಮಾಧ್ಯಮ

ಕವಿತೆ ಎಂದರೆ ಅತ್ಯಂತ ಸುಂದರ ಅಭಿವ್ಯಕ್ತಿ ಮಾಧ್ಯಮ. ಅದು ಅನುಭವದ ಅಗಾಧತೆ ಮತ್ತು ಭಾವನೆಗಳ ಸುಕುಮಾರತೆ... ನಾವದನ್ನು ಬದುಕಬೇಕು ಮತ್ತು ಬೆಳೆಸಬೇಕು... ಎಂದಿದ್ದಾರೆ ಅಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ.

ಕಾವ್ಯದಿನ ಸ್ಮರಿಸಿದ ರಮ್ಯಾ

"ಕಾಡಿನಲ್ಲಿ ಎರಡು ದಾರಿಗಳು ವಿಭಜಿಸಿದ್ದರೆ ನಾನು ಅದರಲ್ಲಿ ಒಂದು ದಾರಿಯನ್ನು ಆರಿಸಿಕೊಳ್ಳುತ್ತೇನೆ... ಅದು ಯಾರೂ ಓಡಾಡದ ಹಾದಿ... ಅದೇ ನನ್ನನ್ನು ಭಿನ್ನನನ್ನಾಗಿ ಮಾಡುತ್ತದೆ" ಎಂಬ ರಾಬರ್ಟ್ ಫ್ರಾಸ್ಟ್ ಎಂಬ ಕವಿಯ ಕವನದ ಸಾಲುಗಳ ಮೂಲಕ ಕಾವ್ಯ ದಿನವನ್ನು ಸ್ಮರಿಸಿಕೊಂಡಿದ್ದಾರೆ, ಕಾಮಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ, ಕನ್ನಡ ನಟಿ ರಮ್ಯಾ.

ಕಾವ್ಯ ಎಂದರೆ ಅದೇ...

ಅಕ್ಷರಗಳು ಅಭಿವ್ಯಕ್ತಿಪಡಿಸಲಾಗದ್ದು, ಕವಿಯ ಅಕ್ಷರಗಳ ನಡುವಲ್ಲಿ ಅಡಗಿ ಕುಳಿತಿದ್ದು, ಕವಿಯ ಕವನದ ಸಾಲುಗಳ ನಡುವೆ ಅಂತರ ಉಳಿಸಿದ್ದು, ಅಕ್ಷರಗಳಾಚೆಗೆ ಕಲ್ಪನೆ ಮೂಡಿಸಿದ್ದು, ಭಾಷೆಯನ್ನು ಮೀರಿದ ಹಂಬಲ ಮೂಡಿಸಿದ್ದು... ಅದೇ ಕಾವ್ಯ, ಅದೇ ನಿಜವಾದ ಕವಿತೆ ಎಂದಿದ್ದಾರೆ ಶೇಖರ್ ಕಪೂರ್.

ಅದು ಆಕರ್ಷಕ ಪದವಲ್ಲ, ನೈಜ ಭಾವನೆ

ನಿಜವಾದ ಕವಿತೆ ಎಂದರೆ ಆಕರ್ಷಕ ಪದಪುಂಜವಲ್ಲ. ಅದು ಕವಿಯ ನೈಜ ಭಾವನೆಯಾಗಿದ್ದರೆ ಮಾತ್ರವೇ ಮನಸ್ಸನ್ನು ತಟ್ಟುತ್ತದೆ. ಓದುಗರು ಮತ್ತು ಕವಿಯೊಂದಿಗೆ ಭಾವಬೆಸುಗೆಯನ್ನು ಮೂಡಿಸುತ್ತದೆ ಎಂದಿದ್ದಾರೆ ಕರುಣಾ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Poetry reaffirms our common humanity by revealing to us that individuals, everywhere in the world, share the same questions and feelings. In celebrating World Poetry Day, March 21, UNESCO recognizes the unique ability of poetry to capture the creative spirit of the human mind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more