ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಟ್ವಿಟ್ಟರ್ ಫೋಟೊಕ್ಕೆ ಕಾಪಿರೈಟ್ ಸಮಸ್ಯೆ

|
Google Oneindia Kannada News

ನವದೆಹಲಿ, ನವೆಂಬರ್ 13: ಗೃಹ ಸಚಿವ ಅಮಿತ್ ಶಾ ಅವರ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಫೋಟೊವನ್ನು ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ತೆರವುಗೊಳಿಸಲಾಗಿತ್ತು. ಬಳಿಕ ಅದನ್ನು ಮತ್ತೆ ಪ್ರಕಟಿಸಲಾಗಿದೆ. ಕಾಪಿ ರೈಟ್ ಸಮಸ್ಯೆಯ ಕಾರಣದಿಂದ ಈ ಫೋಟೊವನ್ನು ತೆಗೆದುಹಾಕಿದ್ದಾಗಿ ಟ್ವಿಟ್ಟರ್ ಹೇಳಿತ್ತು.

ಆ ಫೋಟೊದ ಕಾಪಿರೈಟ್ ಹೊಂದಿರುವ ವ್ಯಕ್ತಿ ಅಮಿತ್ ಶಾ ಪ್ರೊಫೈಲ್ ಫೋಟೊದ ವಿರುದ್ಧ ರಿಪೋರ್ಟ್ ಮಾಡಿದ್ದರು. ಹೀಗಾಗಿ ಆ ಫೋಟೊವನ್ನು ಪ್ರೊಫೈಲ್‌ನಿಂದ ಟ್ವಿಟ್ಟರ್ ತೆರವುಗೊಳಿಸಿತ್ತು. ಆದರೆ ಕೆಲವು ಸಮಯದಲ್ಲಿಯೇ ಅದನ್ನು ಮರುಸ್ಥಾಪಿಸಲಾಯಿತು.

'ಉದ್ದೇಶಪೂರ್ವಕ ಕೃತ್ಯ': ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ನೋಟಿಸ್'ಉದ್ದೇಶಪೂರ್ವಕ ಕೃತ್ಯ': ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ನೋಟಿಸ್

'ಆಕಸ್ಮಿಕ ಪ್ರಮಾದಗಳಿಂದಾಗಿ ನಮ್ಮ ಜಾಗತಿಕ ಕಾಪಿರೈಟ್ ನೀತಿಗಳಿಗೆ ಅನುಸಾರವಾಗಿ ನಾವು ಈ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿದ್ದೆವು. ಆದರೆ ಕೂಡಲೇ ಈ ನಿರ್ಧಾರವನ್ನು ಹಿಂಪಡೆದುಕೊಳ್ಳಲಾಗಿದ್ದು, ಖಾತೆಯು ಈಗ ಸಂಪೂರ್ಣ ಕಾರ್ಯಾಚರಣೆಗೆ ಲಭ್ಯವಾಗಿದೆ' ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.

 Twitter Removes And Restores Amit Shahs Profile Picture Over Copyright Issue

ಟ್ವಿಟ್ಟರ್ ಕಾಪಿರೈಟ್ ನಿಯಮಗಳ ಪ್ರಕಾರ ಫೋಟೊಗ್ರಾಫರ್ ಒಂದು ಫೋಟೊದ ಮೇಲೆ ಹಕ್ಕುಸ್ವಾಮ್ಯ ಹೊಂದಿರಬಹುದು. ಆದರೆ ವಿಷಯದ ಮೇಲೆ ಅಲ್ಲ. ಅಮಿತ್ ಶಾ ಅವರ ಪ್ರೊಫೈಲ್ ಫೋಟೊವನ್ನು ತೆರವುಗೊಳಿಸುತ್ತಿದ್ದಂತೆಯೇ ಟ್ವಿಟ್ಟರ್‌ನಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಅಮಿತ್ ಶಾ 23 ಮಿಲಿಯನ್‌ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದು, ಅವರು 296 ಮಂದಿಯನ್ನು ಹಿಂಬಾಲಿಸುತ್ತಿದ್ದಾರೆ.

ಲಡಾಖ್ಅನ್ನು ಚೀನಾದಲ್ಲಿ ತೋರಿಸಿದ ವಿವಾದಕ್ಕೆ ಅಸಮರ್ಪಕ ಉತ್ತರ ನೀಡಿದ ಟ್ವಿಟ್ಟರ್ಲಡಾಖ್ಅನ್ನು ಚೀನಾದಲ್ಲಿ ತೋರಿಸಿದ ವಿವಾದಕ್ಕೆ ಅಸಮರ್ಪಕ ಉತ್ತರ ನೀಡಿದ ಟ್ವಿಟ್ಟರ್

ಇನ್ನೊಂದೆಡೆ ಲೇಹ್ ಪ್ರದೇಶವನ್ನು ಒಮ್ಮೆ ಚೀನಾಕ್ಕೆ ಸೇರಿದ್ದು ಎಂದು ತೋರಿಸಿದ್ದ ಟ್ವಿಟ್ಟರ್, ಈಗ ಲಡಾಖ್ ಕೇಂದ್ರಾಡಳಿತ ಪ್ರದೇಶದ ಬದಲು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದೆ ಎಂದು ತೋರಿಸುತ್ತಿದೆ. ಇದರಿಂದ ಅಸಮಾಧಾನಗೊಂಡಿರುವ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ನೋಟಿಸ್ ಜಾರಿಮಾಡಿದೆ.

English summary
Twitter had removed Union Home Minister Amit Shah's profile picture over copyright issue, but restored soon after.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X