ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪಾದ ಭಾರತದ ಭೂಪಟವನ್ನು ತೆಗೆದ ಟ್ವಿಟರ್

|
Google Oneindia Kannada News

ನವದೆಹಲಿ, ಜೂನ್ 28; ಟ್ವಿಟರ್ ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿ ಪೇಚಿಗೆ ಸಿಲುಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Recommended Video

ಟ್ವಿಟರ್ ಭೂಪಟದ ವಿಚಾರದಲ್ಲಿ ಮಾಡುತ್ತಿರುವ ಎಡವಟ್ಟು ಇದೇ ಮೊದಲೇನಲ್ಲ | Oneindia Kannada

ತಪ್ಪಾದ ಭಾರತದ ಭೂಪಟವಿದ್ದ ವಿಶ್ವದ ಭೂಪಟದ ಚಿತ್ರವನ್ನು ತನ್ನ ಜಾಲತಾಣದಿಂದ ಟ್ವಿಟರ್ ತೆಗೆದುಹಾಕಿದೆ. ಭೂಪಟದಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತ್ಯೇಕ ದೇಶಗಳು ಎಂದು ತೋರಿಸುತ್ತಿತ್ತು.

ತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್ ಅಭಿಯಾನತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್ ಅಭಿಯಾನ

ಟ್ವಿಟರ್‌ನ ಕೆರಿಯರ್ ವಿಭಾಗದ 'ಟ್ವೀಪ್ ಲೈಫ್‌'ನಲ್ಲಿ ಕಾರ್ಯ ನಿರ್ವಹಣಾ ಕಚೇರಿಗಳನ್ನು ಸೂಚಿಸುವ ಭೂಪಟದಲ್ಲಿ ತಪ್ಪಾಗಿತ್ತು. ಇದನ್ನು ಗಮನಿಸಿದ್ದ ಜನರು ಟ್ವಿಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಲಡಾಖ್ ಚೀನಾಗೆ ಸೇರಿದೆ ಎಂದು ತೋರಿದ ಟ್ವಿಟರ್ ನಿಂದ ಕ್ಷಮೆ ಲಡಾಖ್ ಚೀನಾಗೆ ಸೇರಿದೆ ಎಂದು ತೋರಿದ ಟ್ವಿಟರ್ ನಿಂದ ಕ್ಷಮೆ

Twitter Removed Wrong Map Of India

ಸೋಮವಾರ ರಾತ್ರಿ ಟ್ವಿಟರ್ ಭೂಪಟವನ್ನು ತೆಗೆದು ಹಾಕಿದೆ. ತನ್ನ ಕಚೇರಿಗಳು ಇರುವ ದೇಶಗಳ ಹೆಸರುಗಳನ್ನು ಮಾತ್ರ ಪ್ರಕಟಿಸಿದೆ. ಟ್ವಿಟರ್ ವಿರುದ್ಧ ಭಾರತಲ್ಲಿ ಕಾನೂನು ಸಮರ ಸಹ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಕೇಸ್ ದಾಖಲಾಗಿದೆ.

US ಮಾಜಿ ಅಧ್ಯಕ್ಷ ಒಬಾಮಾ, ಬಿಲ್ ಗೇಟ್ಸ್ ಟ್ವಿಟರ್ ಖಾತೆಗಳೇ ಹ್ಯಾಕ್! US ಮಾಜಿ ಅಧ್ಯಕ್ಷ ಒಬಾಮಾ, ಬಿಲ್ ಗೇಟ್ಸ್ ಟ್ವಿಟರ್ ಖಾತೆಗಳೇ ಹ್ಯಾಕ್!

ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ತಂತ್ರಜ್ಞಾನ ಮಾಹಿತಿ ತಂತ್ರಜ್ಞಾನ ನಿಯಮ ಪಾಲನೆ ಬಗ್ಗೆ ಜಟಾಪಟಿ ನಡೆದಿತ್ತು. ಇದರ ನಡುವೆಯೇ ತಪ್ಪಾದ ಭೂಪಟ ಪ್ರಕಟಿಸಿ ಟ್ವಿಟರ್ ಆಕ್ರೋಶಕ್ಕೆ ಕಾರಣವಾಗಿದೆ.

ತಪ್ಪಾದ ಭಾರತದ ಭೂಪಟ ಪ್ರಕಟಿಸಿದ ಬಗ್ಗೆ ಸ್ಪಷ್ಟನೆ ಕೇಳಿ ಇ-ಮೇಲ್ ಕಳಿಸಲಾಗಿತ್ತು. ಆದರೆ ಅದಕ್ಕೆ ಸಹ ಉತ್ತರ ನೀಡದೆ ಜನರ ಆಕ್ರೋಶಕ್ಕೆ ಟ್ವಿಟರ್ ಗುರಿಯಾಗಿತ್ತು. ಆದ್ದರಿಂದ ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿತ್ತು.

ಭಾರತದ ತಪ್ಪು ಭೂಪಟವನ್ನು ತಪ್ಪಾಗಿ ಟ್ವಿಟರ್ ಪ್ರಕಟಿಸಿರುವುದು ಇದು 3ನೇ ಬಾರಿ. 2020ರಲ್ಲಿ ಲಡಾಖ್‌ನ ಒಂದು ಭಾಗ ಚೀನಾಕ್ಕೆ ಸೇರಿದ್ದು ಎಂದು ತೋರಿಸುವ ಭೂಪಟವನ್ನು ಟ್ವಿಟರ್ ಪ್ರಕಟಿಸಿತ್ತು.

ಹಿಂದೆ ತಪ್ಪು ಭೂಪಟ ಪ್ರಕಟಿಸಿದ್ದಾಗ ಕೇಂದ್ರ ಸರ್ಕಾರ ಟ್ವಿಟರ್‌ಗೆ ನೋಟಿಸ್ ನೀಡಿತ್ತು. ದೇಶದ ಸಾರ್ವಭೌಮತೆಗೆ ಧಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

ಕೇಂದ್ರ ಸರ್ಕಾರ ಟ್ವಿಟರ್ ಜೊತೆ ಜಟಾಪಟಿ ನಡೆಸುತ್ತಲೇ ಇದೆ. ಕೇಂದ್ರ ಕಾನೂನು ಸಚಿವರ ಖಾತೆಯನ್ನೇ ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಅನ್ವಯ ಕುಂದುಕೊರತೆ ಅಧಿಕಾರಿಯ ನೇಮಕ ಮಾಡಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆ ಟ್ವಿಟರ್ ಜಟಾಪಟಿ ಜಾರಿಯಲ್ಲಿದೆ.

English summary
Twitter has removed wrong map of India that showed Jammu and Kashmir and Ladakh as a separate country. Twitter sparked controversy after displaying the wrong map.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X