ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಹನ್ ಭಾಗವತ್ ಸೇರಿ ಹಲವು RSS ನಾಯಕರ ಟ್ವಿಟ್ಟರ್‌ನಲ್ಲೂ ಬ್ಲ್ಯೂಟಿಕ್ ಕಾಣೆ

|
Google Oneindia Kannada News

ದೆಹಲಿ, ಜುಲೈ 05: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂಟಿಕ್ ಕಾಣೆಯಾದ ಬೆನ್ನಲ್ಲೇ ಆರ್‌ಎಸ್‌ಎಸ್‌ ಮುಖಂಡ ಮೋಹನ್ ಭಾಗವತ್ ಸೇರಿ ಹಲವು ಆರ್‌ಎಸ್‌ಎಸ್‌ ನಾಯಕರ ಟ್ವಿಟ್ಟರ್ ಖಾತೆಯಲ್ಲೂ ಬ್ಲ್ಯೂಟಿಕ್ ಕಾಣೆಯಾಗಿದೆ.

ಆರ್​​ಎಸ್​​ಎಸ್​ನ ಪ್ರಮುಖ ನಾಯಕರಾದ ಮೋಹನ್​ ಭಾಗವತ್,​​ ಸುರೇಶ್​ ಜೋಶಿ, ಅರುಣ್​ ಕುಮಾರ್​, ಕೃಷ್ಣನ್​ ಗೋಪಾಲ್​ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ಇದ್ದ ಬ್ಲ್ಯೂಟಿಕ್​​​ಗಳು ಇಂದು ಮಾಯವಾಗಿವೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯಿಂದ ಬ್ಲ್ಯೂ ಟಿಕ್ ಮಾರ್ಕ್ ತೆಗೆದ ಟ್ವಿಟ್ಟರ್ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯಿಂದ ಬ್ಲ್ಯೂ ಟಿಕ್ ಮಾರ್ಕ್ ತೆಗೆದ ಟ್ವಿಟ್ಟರ್

ಬೆಳಗ್ಗೆ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಖಾತೆಯೂ ಬ್ಲ್ಯೂಟಿಕ್ ಕಳೆದುಕೊಂಡಿತ್ತು. ಬಳಿಕ ಟ್ವಿಟ್ಟರ್ ಬಳಿ ಮಾತುಕತೆ ನಡೆಸಿದ ಬಳಿಕ ಮರಳಿ ಬಂದಿದೆ. ಟ್ವಿಟರ್​​ನಲ್ಲಿ ಬ್ಲ್ಯೂಟಿಕ್​ ಪಡೆಯಬೇಕು ಎಂದರೆ ಅವರು ಅದರಲ್ಲಿ ಸಕ್ರಿಯರಾಗಿರಬೇಕು.

Twitter Removed Blue Verified Badge From The Twitter Handles Of Prominent RSS Leaders

ಅವರದ್ದೇ ಅಧಿಕೃತ ಖಾತೆ ಎಂದು ದೃಢೀಕರಿಸಬೇಕು. ಆದರೆ ಇತ್ತೀಚೆಗೆ ಟ್ವಿಟರ್​ ಪರಿಶೀಲನೆ ನಡೆಸಿದಾಗ ಕೆಲವು ಖಾತೆಗಳು ಹಲವು ದಿನಗಳಿಂದ ಬಳಕೆಯಾಗಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅಂಥ ಟ್ವಿಟರ್ ಖಾತೆಗಳ ದೃಢೀಕರಣ ಬ್ಯಾಡ್ಜ್​ಗಳನ್ನು ತೆಗೆದುಹಾಕಿದೆ.

ಹಲವು ಗಣ್ಯರು ಟ್ವಿಟರ್​ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು. ಆಕ್ಷೇಪಣೆಗಳು ಸಲ್ಲಿಕೆಯಾದ ಬೆನ್ನಲ್ಲೇ ಮತ್ತೆ ಆ ದೃಢೀಕರಣ ಬ್ಯಾಡ್ಜ್​​ನ್ನು ನೀಡಿತ್ತು.

ಇನ್ನು ಯಾವುದೇ ಅಕೌಂಟ್​​ಗೆ ಬ್ಲ್ಯೂಟಿಕ್​ ಕೊಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಯಾಡ್ಜ್​​ನ್ನು ತೆಗೆದುಹಾಕಲಾಗುವುದು ಎಂದು ಟ್ವಿಟರ್​ ತನ್ನ ವೆರಿಫಿಕೇಶನ್​ ನಿಯಮದಲ್ಲೇ ಉಲ್ಲೇಖಿಸಿದೆ.

English summary
Twitter has now dropped the verified blue tick or blue badge from the handle of Rashtriya Swayamsevak Sangh (RSS) chief Mohan Bhagwat. Mohan Bhagwat has 20.76 lakh followers on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X