ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನೈತಿಕ ಸಂಬಂಧ ಅಪರಾಧವಲ್ಲ, ವ್ಯಭಿಚಾರಕ್ಕೂ ಸಿಕ್ತು ಸಮಾನತೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27 : ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವ ಪಂಚ ಸದಸ್ಯರ ನ್ಯಾಯಪೀಠವು ಗುರುವಾರದಂದು ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 497 ಅಸಂವಿಧಾನಿಕ್ ಎಂದು ತೀರ್ಪು ನೀಡಿದೆ.

ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 497 ಅನ್ನು ಪ್ರಶ್ನಿಸಿ ಜೋಸೆಫ್ ಶೈನ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಆದೇಶದಂತೆ ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ, ಕಾನೂನಿನ ಪ್ರಕಾರ ಮಹಿಳೆಯರಿಗೂ ಸಮಾನ ಗೌರವ ನೀಡಬೇಕು. ಗಂಡನೇ ಎಲ್ಲದ್ದಕ್ಕೂ ಮುಖ್ಯವಲ್ಲ. ಪತ್ನಿಗೆ ಗಂಡನೇ ಮಾಲೀಕನಲ್ಲ. ಇಬ್ಬರೂ ಸಮಾನರು ಎಂದು ಹೇಳಲಾಗಿದೆ.

ವ್ಯಭಿಚಾರ ಅಪರಾಧವಲ್ಲ: ಸುಪ್ರೀಂ ಐತಿಹಾಸಿಕ ತೀರ್ಪುವ್ಯಭಿಚಾರ ಅಪರಾಧವಲ್ಲ: ಸುಪ್ರೀಂ ಐತಿಹಾಸಿಕ ತೀರ್ಪು

ಸುಮಾರು 158 ವರ್ಷಗಳ ನಂತರ ಕಾನೂನು ಬದಲಾಯಿಸಲಾಗಿದೆ. ಭಾರತದ ಸಾಮಾಜಿಕ ವ್ಯವಸ್ಥೆ ಕೂಡಾ ಬದಲಾಗಿದೆ. ಆದರೆ, ಮದುವೆ, ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕಾನೂನು ಹಾಗೂ ಸಾಂಪ್ರದಾಯಿಕ ಪ್ರಕ್ರಿಯೆ ಬದಲಾಗಿಲ್ಲ. ಅನೈತಿಕ ಸಂಬಂಧ ಹೊಂದಿದವರು ಶಿಕ್ಷೆಯ ಭೀತಿಯಿಲ್ಲದೆ ಇರಬಹುದು ಎಂಬ ತಪ್ಪು ಸಂದೇಶ ರವಾನೆಯಾಗುತ್ತಿದೆ. ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಬೇಕಿದೆ ಎಂಬ ಚರ್ಚೆ ಸದ್ಯಕ್ಕೆ ಟ್ವಿಟ್ಟರ್ ನಲ್ಲಿ ನಡೆಯುತ್ತಿದೆ.

ಐಪಿಸಿ ಸೆಕ್ಷನ್ 497 ಇನ್ನಿಲ್ಲ

ಐಪಿಸಿ ಸೆಕ್ಷನ್ 497 ಅಸಂವಿಧಾನಿಕ ಎಂದು ಹೇಳಿರುವ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಉತ್ತಮವಾಗಿದೆ. ಅದರಲ್ಲೂ ಪತ್ನಿಗೆ ಗಂಡನೇ ಮಾಲೀಕನಲ್ಲ, ಕಾನೂನಿನ ಮುಂದೆ ಎಲ್ಲರೂ ಸಮಾನರು.

ತೀರ್ಪನ್ನು ತಪ್ಪಾಗಿ ಅರ್ಥೈಸಬೇಡಿ

ಇದು ಅನೈತಿಕ ಸಂಬಂಧಕ್ಕೆ ಬಲ ನೀಡುವುದಲ್ಲ. ಇಂಥ ಕೃತ್ಯದಲ್ಲಿ ತೊಡಗಿರುವ ಗಂಡು ಹೆಣ್ಣು ಇಬ್ಬರಿಗೂ ಕಾನೂನು ಒಂದೇ, ವಿಚ್ಛೇದನ ವಿಷಯಕ್ಕೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಿದೆ.

ಅನೈತಿಕ ಸಂಬಂಧಗಳ ಕೇಸ್

ಅನೈತಿಕ ಸಂಬಂಧಗಳ ಕೇಸ್ ಗಳ ಕಥೆ ಏನು? ಇಂಥ ಕೇಸ್ ಗಳಲ್ಲಿ ಅಪರಾಧಿ ಎನಿಸಿ , ಜೈಲು ಸೇರಿದವರನ್ನು ಬಿಡುಗಡೆ ಮಾಡುತ್ತೀರಾ. ತನ್ನ ಪತಿ/ಪತ್ನಿ ಅನೈತಿಕ ಸಂಬಂಧದಲ್ಲಿರುವುದನ್ನು ಕಂಡು ಚಾಕು ತೆಗೆದುಕೊಂಡು ಚುಚ್ಚಿದರೆ ಅದು ಅಪರಾಧವಲ್ಲವೆ?

ಇವರಿಬ್ಬರು ಸ್ವಾಗತಿಸಿರಬಹುದಲ್ವಾ

ಸುಪ್ರೀಂಕೋರ್ಟ್ ಇಂದು ನೀಡಿರುವ ಆದೇಶವನ್ನು ಈ ಚಿತ್ರದಲ್ಲಿರುವ ಇವರಿಬ್ಬರು ಸ್ವಾಗತಿಸಿರಬಹುದಲ್ವಾ ಎಂದು ಸಾರ್ವಜನಿಕರು ಟ್ವೀಟ್ ಮಾಡಿದ್ದಾರೆ.

ಕೋವಿಂದನೇ ಗತಿ

ಅನೈತಿಕ ಸಂಬಂಧ ಅಪರಾಧವಲ್ಲ ಎನ್ನುವ ಮೂಲಕ ಸುಪ್ರೀಂಕೋರ್ಟ್ ತುಂಬಾ ಗೊಂದಲದ ಆದೇಶ ನೀಡಿದೆ. ಈಗ ರಾಷ್ಟ್ರಪತಿ ಕೋವಿಂದ ಅವರು ಕಣಕ್ಕಿಳಿದು ನಮ್ಮ ಸಮಾಜಿಕ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ.

English summary
Twitter reactions : Supreme Court rules Section 497 of IPC to ease #Adultery as an offence from 158 year old penal code.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X