ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈದ್ಧಾಂತಿಕ ಭಿನ್ನಾಭಿಪ್ರಾಯ ಓಕೆ! ವಿಗ್ರಹ ಧ್ವಂಸವಾಗಬೇಕೆ..?!

|
Google Oneindia Kannada News

ವೆಲ್ಲೂರ್, ಮಾರ್ಚ್ 07: ಭಾರತದಲ್ಲೀಗ ಸ್ಟಾಚ್ಯೂ ಪೊಲಿಟಿಕ್ಸ್ ಶುರುವಾಗಿದೆ! ಎಲ್ಲೆ ಕೇಳಿದರೂ ವಿಗ್ರಹ ಧ್ವಂಸದ್ದೇ ಸುದ್ದಿ! ಮೊದಲು ತ್ರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ರಷ್ಯಾದ ಕ್ರಾಂತಿಕಾರಿ ಲೆನಿನ್ ವಿಗ್ರಹ ಧ್ವಂಸ ಮಾಡಿದ್ದಾಯ್ತು.

ನಂತರ ತಮಿಳುನಾಡಿನ ವೆಲ್ಲೂರಿನಲ್ಲಿ ಸಾಮಾಜಿಕ ಹೋರಾಟಗಾರ ಪೆರಿಯಾರ್(ಇವಿಆರ್ ರಾಮಸಾಮಿ) ವಿಗ್ರಹ ಧ್ವಂಸವಾಯ್ತು. ನಂತರ ಕೋಲ್ಕತ್ತಾದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ವಿಗ್ರಹ ಧ್ವಂಸವೂ ಆಯ್ತು!

ತಮಿಳುನಾಡು: ಪೆರಿಯಾರ್ ವಿಗ್ರಹ ಧ್ವಂಸ, ಇಬ್ಬರ ಬಂಧನ ತಮಿಳುನಾಡು: ಪೆರಿಯಾರ್ ವಿಗ್ರಹ ಧ್ವಂಸ, ಇಬ್ಬರ ಬಂಧನ

ಒಟ್ಟಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆಯೇ ದೇಶದಲ್ಲಿ ಏನೇನೋ ಬದಲಾವಣೆಯಾಗುತ್ತಿದೆ! ಆದರೆ ಈ ವಿಗ್ರಹ ಧ್ವಂಸದಿಂದ ಯಾರಿಗೆ ಲಾಭ? ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದನ್ನು ಬಿಟ್ಟರೆ ಇದರಿಂದ ಇನ್ನೇನಾದರೂ ಸಾಧಿಸುವುದಕ್ಕೆ ಸಾಧ್ಯಾನಾ ಎಂಬುದು ಟ್ವಿಟ್ಟರ್ ನಲ್ಲಿ ಹಲವರು ಎತ್ತಿರುವ ಪ್ರಶ್ನೆ. ಕೆಲವರು ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ ಸಹ.

Array

ಭಗತ್ ಸಿಂಗ್ ಸಹ ಲೆನಿನ್ ಅನುಯಾಯಿ!

ಬಿಜೆಪಿಯವರು ತ್ರಿಪುರದಲ್ಲಿ ಲೆನಿನ್ ವಿಗ್ರಹವನ್ನು ಧ್ವಂಸಗೊಳಿಸಿದರು, ತಮಿಳು ನಾಡಿನಲ್ಲೂ ಅಂಥದೇ ಘಟನೆ ಪೆರಿಯಾರ್ ವಿಗ್ರಹದ ವಿಷಯದಲ್ಲೂ ಮರುಕಳಿಸಿತು. ಆದರೆ ಭಗತ್ ಸಿಂಗ್ ಸಹ ಲೆನಿನ್ ಅನುಯಾಯಿ ಎಂಬುದನ್ನು ಬಿಜೆಪಿಯವರು ಮರೆತಂತಿದೆ ಎಂದು ಮಾಧುರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪೆರಿಯಾರ್ ವಿಗ್ರಹ ಧ್ವಂಸವನ್ನು ಕಟುವಾಗಿ ಖಂಡಿಸಿದ ಮೋದಿ ಪೆರಿಯಾರ್ ವಿಗ್ರಹ ಧ್ವಂಸವನ್ನು ಕಟುವಾಗಿ ಖಂಡಿಸಿದ ಮೋದಿ

ಪೆರಿಯಾರ್ ಮತ್ತು ಅಂಬೇಡ್ಕರ್

ಪೆರಿಯಾರ್ ಹೇಳಿದ್ದರು, ನೀವು ಒಬ್ಬ ಬ್ರಾಹ್ಮಣ ಮತ್ತು ಹಾವನ್ನು ಒಟ್ಟಿಗೇ ನೋಡಿದರೆ ಮೊದಲು ಬ್ರಾಹ್ಮಣನನ್ನು ಸಾಯಿಸಿ ಅಂತ. ಆದರೆ ನನ್ನ ಬಳಿ ಅಂಬೇಡ್ಕರ್ ಮತ್ತು ಪೆರಿಯಾರ್ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಿ ಎಂದರೆ ನಾನು 'ಅಂಬೇಡ್ಕರ್' ಎನ್ನುತ್ತೇನೆ. ಏಕೆಂದರೆ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದರು ಎಂದಿದ್ದಾರೆ ವಿವಿಧ್ ದಲ್ಲಾಲ್ ಎಂಬುವವರು.

Array

ಸಮಾಜದ ಶಾಂತಿ ಕದಡುತ್ತಿದೆ

ಇತಿಹಾಸದ ನಾಯಕರ ವಿಗ್ರಹಗಳನ್ನು ಕೆಢುವುದು, ಅಥವಾ ಧ್ವಂಸಗೊಳಿಸುವುದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಸ್ವಾಗತಾರ್ಹ. ಆದರೆ ಅದಕ್ಕಾಗಿ ವಿಗ್ರಹ ಧ್ವಂಸ ಮಾಡುವಂತೆ ಕರೆನೀಡುವುದು ಒಪ್ಪುವ ವಿಷಯವಲ್ಲ ಎಂದಿದ್ದಾರೆ ಸುಮಂತ್ ರಾಮನ್.

ಬಿಜೆಪಿ ವಿರುದ್ಧ ಹೋರಾಟಕ್ಕೆ ಸಕಾಲ

ಮದ್ರಾಸ್ ಪ್ರಾಂತ್ಯವು ಬ್ರಿಟಿಶರ ವಿರುದ್ಧ ಭಾರತದ ಉಳಿದೆಲ್ಲ ಪ್ರಾಂತ್ಯಗಳಿಹೂ ಮೊದಲೇ ಹೋರಾಟ ನಡೆಸಿತ್ತು. ಈಗ ಮತ್ತೆ ಹೋರಾಡುವುದಕ್ಕೆ ಕಾಲ ಬಂದಿದೆ. ತಮಿಳು ಜನತೆ ಬಿಜೆಪಿ ವಿರುದ್ಧ ಹೋರಾಡಬೇಕಿದೆ. ಈ ಹೋರಾಟ ಕೇವಲ ತಮಿಳುನಾಡಿನ ಉಳಿವಿಗಲ್ಲ, ಇಡೀ ಭಾರತದ ಉಳಿವಿಗೆ ಎಂದಿದ್ದಾರೆ ಗಜೇಂದ್ರ.

ವಿಗ್ರಹ ಆರಾಧನೆ ವಿರೋಧಿಸುವವರ ವಿಗ್ರಹ ಧ್ವಂಸ!

ವಿಗ್ರಹ ಧ್ವಂಸ ನಡೆಯಬಾರದಿತ್ತು. ಆದರೆ ಪೆರಿಯಾರ್ ವಿಗ್ರಹವನ್ನು ಸ್ಥಾಪಿಸಿದ್ದೇಕೆ? ವಿಗ್ರಹ ಆರಾಧನೆಯನ್ನು ವಿರೋಧಿಸುವ ಪೆರಿಯಾರ್ ರಂಥ ಹಲವು ಹಿಂದು ವಿರೋಧಿಗಳು ಭಾರತದ ಬಹುಸಂಖ್ಯಾತರ ನಂಬಿಕೆಗಳ ಬಗ್ಗೆ ವಿರೋಧ ಹೊಂದಿದ್ದರು. ಇದೇ ಪೆರಿಯಾರ್ ತಮಿಳುನಾಡನ್ನು ಭಾರತದಿಂದ ಬೇರೆ ಮಾಡಲು ನೋಡಿದ್ದರು ಎಂದಿದ್ದಾರೆ ಸೋನಂ ಮಹಾಜನ್.

Array

ಕರ್ಮ ಸಿದ್ಧಾಂತ!

ಪೆರಿಯಾರ್ ಭಗವಂತ ಗಣೇಶ ವಿಗ್ರಹವನ್ನು ಧ್ವಂಸಗೊಳಿಸಿದ್ದರು. ಈಗ ಅವರ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಈ ಇಸ್ಲಾಮೋ-ಲೆಫ್ಟಿಸ್ಟ್ ಗಳು ದ್ವೇಷಿಸುವ ಒಂದೇ ನಿಯಮ ಅಂದರೆ ಅದು ಕರ್ಮ ಸಿದ್ಧಾಂತ! ಎಂದು ಎಮಿನೆಂಟ್ ಇಂಟಲೆಕ್ಚ್ಯುವಲ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ತಮಿಳುನಾಡು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿತಮಿಳುನಾಡು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

English summary
A statue of social activist and politician EV Ramasamy, popularly known as Periyar, was on Tuesday evening vandalised in Vellore, Tamil Nadu. Many twitterians reacted against the incident. Here are few twitters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X