ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಪು ಅಲ್ಲ, 'ಅತ್ಯಾಚಾರಿ ಎನ್ನಿ': ಅಸಾರಾಮ್ ವಿರುದ್ಧ ಭುಗಿಲೆದ್ದ ಆಕ್ರೋಶ

|
Google Oneindia Kannada News

ಜೋಧಪುರ, ಏಪ್ರಿಲ್ 25: "ಕೊನೆಗೂ ನ್ಯಾಯ ಗೆದ್ದಿದೆ", "ಇದು ಪ್ರಜಾಪ್ರಭುತ್ವಕ್ಕೆ ಕರಾಳ ದಿನ" ಈ ಎರಡೂ ಪ್ರತಿಕ್ರಿಯೆಗಳು ಅಸಾರಾಮ್ ಬಾಪು ತೀರ್ಪಿನ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡವು!

ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಇಂದು(ಏ.25) ತೀರ್ಪು ನೀಡಿದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದೆ.

ಅಸಾರಾಮ್ ಬಾಪು ದೋಷಿ: ಜೋಧಪುರ ನ್ಯಾಯಾಲಯದಿಂದ ಮಹತ್ವದ ತೀರ್ಪುಅಸಾರಾಮ್ ಬಾಪು ದೋಷಿ: ಜೋಧಪುರ ನ್ಯಾಯಾಲಯದಿಂದ ಮಹತ್ವದ ತೀರ್ಪು

ಅಸಾರಾಮ್ ಜೊತೆಗೆ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳೂ ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ. 2013 ರಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಅವರ ವಿರುದ್ಧ ವಿಚಾರಣೆ ನಡೆಸಲಾಗಿತ್ತು. ಇದೀಗ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದರುವುದರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಕೆಲವರು ಅಸಾರಾಂ ನನ್ನು ಇನ್ನು ಮೇಲೆ ಬಾಪು ಎನ್ನಬೇಡಿ, ಅತ್ಯಾಚಾರಿ ಎನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Array

ಅವರ ಬೆಂಬಲಿಗರೂ ಶಿಕ್ಷಾರ್ಹರೇ!

ಕೇವಲ ಅಸಾರಾಮ್ ಬಾಪು ಮಾತ್ರವೇ ಅಲ್ಲ, ಅಂಥ ಅಪರಾಧಿಗಳಿಗೆ ಬೆಂಬಲ ನೀಡುವ ಎಲ್ಲರೂ ತಪ್ಪಿತಸ್ಥರೇ. ಅವರೂ ಶಿಕ್ಷಾರ್ಹರೇ ಎಂದಿದ್ದಾರೆ ಅಶೋಕ್ ಪಂಡಿತ್.

ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್

ಪ್ರಜಾಪ್ರಭುತ್ವಕ್ಕೆ ಕರಾಳದಿನ!

ಅಸಾರಾಮ್ ಬಾಪು ದೋಷಿ ಎಂದು ತೀರ್ಪು ನೀಡಲಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಅತ್ಯಂತ ಕರಾಳದಿನ. ನ್ಯಾಯಾಂಗ ಸಂಪೂರ್ಣವಾಗಿ ರಾಜಿಮಾಡಿಕೊಂಡಿದೆ. ಭಾರತೀಯ ನ್ಯಾಯಾಂಗದ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ ಎಂದು ತರಾ ಬಿಯಸ್ ಎಂ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ನ್ಯಾಯಾಂಗದ ಮೇಲೆ ಗೌರವ

ಅಸಾರಾಮ್ ಬಾಪು ಮೇಲೆ ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಅವರಿಗೆ ಜೀವಾವಧಿ ಶಿಕ್ಷೆಯಾದರೂ ಅಚ್ಚರಿಯಿಲ್ಲ. ನ್ಯಾಯಾಂಗದ ಮೇಲೆ ತುಂಬ ನಂಬಿಕೆ ಇದೆ. ಸಂಗತ್ರಸ್ಥೆಗೆ ನ್ಯಾಯ ಸಿಕ್ಕುತ್ತದೆ ಮತ್ತು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ ಅನಿತ್ ಘೋಷ್.

ಬಾಪು ಅಲ್ಲ, ಅತ್ಯಾಚಾರಿ ಎಂದು ಕರೆಯಿರಿ

ಜೋದ್ಪುರ ನ್ಯಾಯಾಲಯ ಅಸಾರಾಂನನ್ನು ದೋಷಿ ಎಂದು ಪರಿಗಣಿಸಿದೆ. ಇನ್ನು ಮೇಲೆ ಆತನನ್ನು ಬಾಪು ಎಂದು ಕರೆಯುವುದನ್ನು ನಿಲ್ಲಿಸಿ. ಅತ್ಯಾಚಾರಿ ಎಂದು ಕರೆಯಿರಿ ಎಂದಿದ್ದಾರೆ ಜಾಗೃತಿ ಶುಕ್ಲಾ.

ಹಿಂದುತ್ವದ ಘನತೆ ಕಡಿಮೆ ಮಾಡುತ್ತಿದ್ದಾರೆ

ಅಸಾರಾಮ್ ರಂಥ ಸ್ವಯಂಘೋಷಿತ ದೇವಮಾನವರು ಹಿಂದುತ್ವದ ಘನತೆಯನ್ನು ಕಡಿಮೆಮಾಡುತ್ತಿದ್ದಾರೆ. ಅಂಥವರನ್ನು ಬೆಂಬಲಿಸುವ ಜನರು ಚರ್ಚಿನಲ್ಲೂ ಇರುವ ಶಿಶುಕಾಮುಕರಂತೆ. ಜನರು ಅಂಥವರನ್ನು ಯಾಕೆ ಬೆಂಬಲಿಸುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ ಎಂದಿದ್ದಾರೆ ರಜತ್.

ಭಕ್ತರಿಗೆ ನಾಚಿಕೆಯಾಗಬೇಕು

ಅಸಾರಾಮ್ ಬಾಪು ಬಿಡುಗಡೆಗಾಗಿ ಪೂಜೆ ಮಾಡುತ್ತ, ಪ್ರಾರ್ಥನೆ ಸಲ್ಲಿಸುತ್ತಿರುವ ಅವರ ಅಂಧ ಅನುಯಾಯಿಗಳಿಗೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದ್ದಾರೆ ಶರಣು ಜವಲ್ಗಿ.

English summary
Rajasthan's Jodhpur SC/ST court pronounced verdict on rape case against self-styled godman Asaram Bapu. Asaram along with five other accused has been convicted by court. Here are twitter comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X