• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರ್ಧಾರ ಸ್ವಾಗತಾರ್ಹ, ಆದರೂ... ಎಲ್ಲಾ ಅತ್ಯಾಚಾರಿಗಳೂ ಗಲ್ಲಿಗೇರಲಿ!

|

ನವದೆಹಲಿ, ಏಪ್ರಿಲ್ 21: "ಅತ್ಯಾಚಾರ ಸಂತ್ರಸ್ಥೆಗೆ ಇದೊಂದು ಆಶಾಕಿರಣ. ಈ ನಿಯಮ ಕೇವಲ 12 ವರ್ಷ ವಯಸ್ಸಿನೊಳಗಿನವರಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯವಾಗಬೇಕು. ಅತ್ಯಾಚಾರಿಗೂ ಆಗ ಶಿಕ್ಷೆಗೆ ಭಯ ಉಳಿಯುತ್ತದೆ" ಇದು ಟ್ವಿಟ್ಟಿಗರೊಬ್ಬರ ಪ್ರತಿಕ್ರಿಯೆ.

12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ

ಕೇಮದ್ರ ಸರ್ಕಾರ ಪೋಕ್ಸೋ(Protection of Children from Sexual Offences) ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವರ್ಷ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣದ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡುವ ಮಹತ್ವದ ನಿರ್ಣಯಕ್ಕೆ ಇಂದು(ಏ.21) ಒಪ್ಪಿಗೆ ಸೂಚಿಸಿದೆ.

ಪೋಕ್ಸೋ ಕಾಯ್ದೆ ತಿದ್ದುಪಡಿಗೆ ನಿರ್ಧಾರ: ಅತ್ಯಾಚಾರ ಆರೋಪಿಗೆ ಗಲ್ಲು

ಕತುವಾ ಅತ್ಯಾಚಾರ ಪ್ತರಕರಣದ ನಂತರ ದೇಶದಾದ್ಯಂತ ಎದ್ದ ಆಕ್ರೋಶಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದ್ದು, ದೇಶದಾದ್ಯಂತ ಜನರು ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಕೇವಲ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಮಾತ್ರವಲ್ಲ, ಯಾರದೇ ಮೇಲೆ ಅತ್ಯಾಚಾರ ಎಸಗಿದರೂ ಆ ಅಪರಾಧಕ್ಕೆ ಗಲ್ಲು ಶಿಕ್ಷೆ ವಿಧಿಸಬೇಕು, ಶಿಕ್ಷೆಯ ಭಯಕ್ಕಾದರೂ ಇಂಥ ಕ್ರೌರ್ಯಗಳು, ಅಸಹ್ಯಕರ ಕೃತ್ಯಗಳು ಕೊನೆಯಾದಾವು ಎಂಬುದು ಜನರ ನಿರೀಕ್ಷೆ.

ಪ್ರತಿ ಮಹಿಳೆಗೂ ಆತ್ಮ ಗೌರವವಿದೆ

ಕೇವಲ 12 ವರ್ಷ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರವಾದರೆ ಮಾತ್ರವೇ? ಎಲ್ಲ ಅತ್ಯಾಚಾರಿಗಳನ್ನೂ ಗಲ್ಲಿಗೇರಿಸಬೇಕು. ಮಕ್ಕಳ ಮೇಲೆ ಅತ್ಯಾಚಾರ ಎಸಗುವವರನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು. ದಯವಿಟ್ಟು ಎಲ್ಲಾ ಅತ್ಯಾಚಾರಿಗಳಿಗೂ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ. ಪ್ರತಿ ಹೆಣ್ಣು ಮಗಳು, ಮಹಿಳೆಗೂ ಆತ್ಮಗೌರವ, ಘನತೆ ಎಂಬುದಿದೆ ಎಂದಿದ್ದಾರೆ ಶಾರಿಖ್.

ಸಮಾಧಾನ ತಂದಿಲ್ಲ!

ನನಗೆ ಈ ನಿರ್ಧಾರ ಸಮಾಧಾನ ತಂದಿಲ್ಲ. 18 ವರ್ಷದೊಳಗಿನ ಅಪ್ರಾಪ್ತ ಬಾಲಕ, ಬಾಲಕಿಯರ ಮೇಲೆ ನಡೆಯುವ ಎಲ್ಲಾ ಅತ್ಯಾಚಾರ ಪ್ರಕರಣಗಳ ಅತ್ಯಾಚಾರಿಗಳಿಗೂ ಮರಣದಂಡನೆ ವಿಧಿಸಬೇಕು. ಆಗ ಮಾತ್ರವೇ ಈ ಕಾಯ್ದೆಯ ಬಗ್ಗೆ ಸಮಾಧಾನವಾಗುತ್ತದೆ ಎಂದಿದ್ದಾರೆ ನಿತೇಶ್ ಅಗರ್ವಾಲಾ.

ಎಲ್ಲ ಅತ್ಯಾಚಾರಿಗಳಿಗೂ ಅನ್ವಯವಾಗಲಿ

ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕೇವಲ 12 ವರ್ಷ ವಯಸ್ಸಿನೊಳಗಿನ ಮಕ್ಕಳ ಮೇಲೆ ಮಾತ್ರವಲ್ಲ, ಯಾರ ಮೇಲೆ ಅತ್ಯಾಚಾರವಾದರೂ ಅವರಿಗೆ ಮರಣದಂಡನೆ ವಿಧಿಸಬೇಕು. 12 ವರಷದವರೇ ಇರಲಿ, ಅದಕ್ಕಿಂತ ಚಿಕ್ಕವರಿರಲಿ, ದೊಡ್ಡವರಿರಲಿ, ಹೆಣ್ಣು ಮಕ್ಕಳು ಹೆಣ್ಣು ಮಕ್ಕಳೇ ತಾನೇ ಎಂದಿದ್ದಾರೆ ಮೊಹ್ಮದ್ ಉಮರ್.

ಎಲ್ಲ ಅತ್ಯಾಚಾರಿಗಳಿಗೂ ಗಲ್ಲು, ಸರ್ಕಾರದ ಮುಂದಿನ ನಡೆ

ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯ ನಿರ್ಣಯ ಸ್ವಾಗತಾರ್ಹ. ಇದು ಸರ್ಕಾರದ ಮೇಲಿನ ನಮ್ಮ ನಂಬಿಕೆಯನ್ನು ಉಳಿಸಿದೆ. ಸರ್ಕಾರ ಉತ್ತಮ ಸಮಾಜದತ್ತ ತನ್ನ ಲಕ್ಷ್ಯ ವಹಿಸುತ್ತಿದೆ. ಎಲ್ಲ ಅತ್ಯಾಚಾರಿಗಳಿಗೂ ಗಲ್ಲು ಶಿಕ್ಷೆ ವಿಧಿಸುವುದು ಸರ್ಕಾರದ ಮುಂದಿನ ನಡೆಯಾಗಲಿ ಎಂದಿದ್ದಾರೆ ವಿವೇಕ್ ರಾಯ್ಪತ್.

ಕಾಂಗ್ರೆಸ್ ಲಾಭ ಪಡೆಯಬಹುದು!

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಉತ್ತಮ ನಿರ್ಧಾರ. ಆದರೆ ನನಗೆ ಗೊತ್ತು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ತಮ್ಮ ಹೋರಾಟದಿಂದಲೇ ಇದು ಸಾಧ್ಯವಾಗಿದ್ದು ಎಂದು ಇದರ ಎಲ್ಲಾ ಶ್ರೇಯಸ್ಸನ್ನು ತಾವೇ ಪಡೆಯುತ್ತಾರೆ. 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಈ ನಿರ್ಧಾರ ಕೈಗೊಳ್ಳುವುದಕ್ಕೆ ಏಕೆ ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿಯ ವಿಷಯ ಎಂದಿದ್ದಾರೆ ನಿಪುಂ.

ಐತಿಹಾಸಿಕ ನಿರ್ಧಾರ

ಮುಗ್ಧ ಮಕ್ಕಳ ಪಾಲಿಗೆ ಕೊನೆಗೂ ನ್ಯಾಯ ಉಳಿಯಿತು. ಇದು ಐತಿಹಾಸಿಕ ನಿರ್ಧಾರ. ಆದರೂ ದೇಶದ ಮಹಿಳೆಯರಿಗಾಗಿ ಮಾಡಬೇಕಾದ ಕೆಲಸಗಳು ಇನ್ನೂ ಸಾಕಷ್ಟಿವೆ ಎಂದಿದ್ದಾರೆ ವಸುಂಧರಾ ತಿವಾರಿ.

ಕ್ಷಮಾದಾನಕ್ಕೂ ಅವಕಾಶವಿರಬಾರದು

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು. ಸ್ವಾಗತಾರ್ಹ ನಿರ್ಧಾರ. ಇಮಥ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು. ಅತ್ಯಾಚಾರಿಗಳಿಗೆ ಯಾವುದೇ ರೀತಿಯ ಕ್ಷಮಾದಾನಕ್ಕೂ ಅವಕಾಶ ನೀಡಬಾರದು ಎಂದಿದ್ದಾರೆ ಸ್ನೇಹಾ ಸೇನ್.

ಸ್ವಾಗತಾರ್ಹ ನಿರ್ಧಾರ

12 ವರ್ಷದೊಳಗಿನ ಮಕ್ಕಳ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ನೀದುವ ಮತ್ತು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಬಿನೇಟ್ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

English summary
The Centre on Saturday approved the ordinance to award death sentence to the rapists of children below the age of 12. Following a meeting of the Union Cabinet here, the government cleared the amendment in the Protection of Children from Sexual Offences (POCSO) Act. Here are Twitter reactions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X