ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಫೇಲ್ ತೀರ್ಪು : ರಾಹುಲ್ ಗಾಂಧಿಯವರು ದೇಶದ ಕ್ಷಮೆಯಾಚಿಸಲಿ'

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 30 ಸಾವಿರ ಕೋಟಿ ರೂ. ಅಕ್ರಮವಾಗಿದೆ, ಪ್ರಧಾನಿ ಮೋದಿ ಸರ್ಕಾರ ಹಾಗೂ ಅವರ ಆಪ್ತರಿಗೆ ಇದರಿಂದ ಲಾಭವಾಗಿದೆ' ಎಂದು ಆರೋಪಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈಗ ಏನು ಹೇಳುತ್ತಾರೆ. ಮೋದಿ ವಿರುದ್ಧ ವೃಥಾರೋಪ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರು ದೇಶದ ಕ್ಷಮೆಯಾಚಿಸಲಿ ಎಂದು ಟ್ವಿಟ್ಟರ್ ನಲ್ಲಿ ಕೂಗೆದ್ದಿದೆ.

LIVE: ರಫೇಲ್ ಡೀಲ್ ತನಿಖೆಗೆ ಸುಪ್ರೀಂ ನಕಾರ: ಕೇಂದ್ರ ಸರ್ಕಾರ ನಿರಾಳ LIVE: ರಫೇಲ್ ಡೀಲ್ ತನಿಖೆಗೆ ಸುಪ್ರೀಂ ನಕಾರ: ಕೇಂದ್ರ ಸರ್ಕಾರ ನಿರಾಳ

ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದಾದ ವಿಷಯಗಳ ಪೈಕಿ, ರಫೇಲ್ ಒಪ್ಪಂದ ಕೂಡಾ ಒಂದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಪ್ರಧಾನಿ ಮೋದಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರನ್ನು ಜೈಲಿಗೆ ಕಳಿಸಲು ಕಾಂಗ್ರೆಸ್ ಪಣತೊಟ್ಟಿತ್ತು. ಆದರೆ, ಕಾಂಗ್ರೆಸ್ಸಿಗೆ ಭಾರಿ ಹಿನ್ನಡೆಯುಂಟಾಗಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶುಕ್ರವಾರದಂದು ಮಹತ್ವದ ತೀರ್ಪು ಪ್ರಕಟಿಸಿದೆ.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ವಕೀಲ ಎಂ.ಎಲ್.ಶರ್ಮಾ ಹಾಗೂ ಎನ್​ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿ, ತನಿಖೆಗೆ ಒಪ್ಪಿಸಲು ನಿರಾಕರಿಸಿದೆ.

ಮೋದಿ ವಿರುದ್ಧ ನೇರ ಆರೋಪ ಮಾಡಿದ್ದ ರಾಹುಲ್

ಮೋದಿ ವಿರುದ್ಧ ನೇರ ಆರೋಪ ಮಾಡಿದ್ದ ರಾಹುಲ್

36 ಯುದ್ಧ ವಿಮಾನಗಳ ಕುರಿತಂತೆ ವಿವಾದ ಉಂಟಾಗಿದ್ದು, ಈ ಯುದ್ಧ ವಿಮಾನಗಳ ಖರೀದಿ ಡೀಲ್ ಫ್ರಾನ್ಸಿನ ಡಸಾಲ್ಟ್ ಸಂಸ್ಥೆಗೆ ನೀಡಬೇಕಾದರೆ, ಅನಿಲ್ ಅಂಬಾನಿ ಅವರ ಸಂಸ್ಥೆಗೆ ಗುತ್ತಿಗೆ ನೀಡಬೇಕು ಎಂದು ಪ್ರಧಾನಿ ಮೋದಿ ಅವರು ತಾಕೀತು ಮಾಡಿದ್ದರು ಎಂದು ರಾಹುಲ್ ಆರೋಪಿಸಿದ್ದರು.

ಡಸಾಲ್ಟ್ ಕಂಪನಿಯ ಹೂಡಿಕೆಯನ್ನು ಅನಿಲ್ ಅಂಬಾನಿ ಗುಂಪಿನ ಕಂಪನಿ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ನ ಲಾಭವನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದ್ದರು.

ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ

Array

ರಾಹುಲ್ ಅವರ ವಿರುದ್ಧ ತಿರುಗಿಬಿದ್ದ ಮೋದಿ ಬೆಂಬಲಿಗರು

ಪ್ರಧಾನಿ ಮೋದಿ ಅವರ ವಿರುದ್ಧ ವೃಥಾ ಆರೋಪ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಕ್ಷಮೆಯಾಚಿಸಲಿ ಎಂದ ಟ್ವಿಟ್ಟಗರು.

ರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗ

ತಾನು ಕಳ್ಳ ಪರರನ್ನು ನಂಬ ಎಂಬ ಸ್ಥಿತಿ

ಕಾಂಗ್ರೆಸ್ಸಿನವರು ತಾನು ಕಳ್ಳ, ಪರರನ್ನು ನಂಬ ಎಂಬ ಮನಸ್ಥಿತಿಯವರು ಎಂದು ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.

ಬಿಜೆಪಿಗೆ ಸೋಲಿನ ಕಹಿ ಮರೆಯುವಂತೆ ಮಾಡಿದೆ

ಬಿಜೆಪಿಗೆ ಐದು ರಾಜ್ಯಗಳ ಚುನಾವಣೆಯ ಸೋಲಿನ ಕಹಿಯನ್ನು ಮರೆಯುವಂತೆ ಮಾಡಿದೆ ಈ ಒಂದು ತೀರ್ಪು, ಪಂಚರಾಜ್ಯ ಗೆದ್ದ ಖುಷಿಯಲ್ಲಿದ್ದ ಕಾಂಗ್ರೆಸ್ಸಿಗೆ ತೀವ್ರಮುಖಭಂಗವಾಗಿದೆ.

ಸುಪ್ರೀಂಕೋರ್ಟ್ ವಿರುದ್ಧ ಕಾಂಗ್ರೆಸ್ಸಿಗರು ಟೀಕಿಸದಿರಲಿ

ರಫೇಲ್ ಡೀಲ್ ಬಗ್ಗೆ ತೀರ್ಪು ನೀಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಕೂಡಾ ಕಾಂಗ್ರೆಸ್ಸಿಗರು ಕುಹಕವಾಡಬಹುದು. ನೆನಪಿರಲಿ ಸಿಜೆಐ ಅವರು ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯೊಬ್ಬರ ಪುತ್ರ.

English summary
The Supreme Court of India has found no irregularities in the government's decision making process to procure the 36 Rafale jets from Dassault under the Indo-French intergovernmental agreement. Here are the twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X