ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ತೀರ್ಪು : ಅಳಿಯ ಅಲ್ಲ ಮಗಳ ಗಂಡ ಎಂದ ಟ್ವಿಟ್ಟಿಗರು

|
Google Oneindia Kannada News

Recommended Video

ಆಧಾರ್ ಕಾರ್ಡ್ ತೀರ್ಪಿನ ಬಗ್ಗೆ ಜನತಾ ದರ್ಬಾರ್ ನಲ್ಲಿ ಚರ್ಚೆ ಜೋರು | Oneindia Kannada

ಬೆಂಗಳೂರು, ಸೆಪ್ಟೆಂಬರ್ 26: ಆಧಾರ್ ಸಿಂಧುತ್ವ, ಕಡ್ಡಾಯ ಕುರಿತಂತೆ ಸುಪ್ರೀ ಕೋರ್ಟಿನಲ್ಲಿ ಇಂದು ಹೊರ ಬಂದ ಮಹತ್ವದ ತೀರ್ಪಿನಲ್ಲಿ ಜನತಾ ದರ್ಬಾರ್ ಟ್ವಿಟ್ಟರ್ ನಲ್ಲಿ ಜೋರು ಚರ್ಚೆ ಆರಂಭವಾಗಲಿದೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ನಡೆಸಿದ ವಿಚಾರಣೆಯನ್ನು ಆಧಾರ್ ಮಾಹಿತಿ ಸೋರಿಕೆಯ ಕುರಿತು ಬಂದಿರುವ ತೀರ್ಪು ಹಾಗೂ ಅದರ ಬಗ್ಗೆ ಇರುವ ಗೊಂದಲಗಳಿಗೆ ಟ್ವಿಟ್ಟರಿನಲ್ಲೇ ಉತ್ತರ ಕಂಡುಕೊಳ್ಳಲಾಗುತ್ತಿದೆ.

ಆಧಾರ್ ಕಾರ್ಡ್ ಕಡ್ಡಾಯ ಪ್ರಶ್ನಿಸಿ ಸುಪ್ರಿಂ ಕೋರ್ಟ್ ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ಪೈಕಿ ಆಧಾರ್ ಕಡ್ಡಾಯ, ಮಾನ್ಯತೆ ಬಗ್ಗೆ ಏನು ತೀರ್ಪು ಹೊರ ಬರಲಿದೆ ಎಂಬುದು ಮುಖ್ಯವಾಗಿತ್ತು. ಇದು ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂದು ಅರ್ಜಿದಾರರು ಹೇಳಿದ್ದರು.

ಈಗಾಗಲೇ ಈ ಯೋಜನೆಯ ಪ್ರಯೋಜನ ಒಂದು ಶತ ಕೋಟಿ ಜನರಿಗೆ ತಲುಪಿದೆ. ಇದರಿಂದಾಗಿ ಫಲಾನುಭವಿಗಳ ಸೋಗಿನಲ್ಲಿ ವಂಚನೆ ಮಾಡುತ್ತಿದ್ದವರನ್ನು ಗುರುತಿಸಿ, ವಂಚನೆಯನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಜರುಗಿಸಬಹುದು, ಹಣಕಾಸು ಮಸೂದೆಯಾಗಿ ಇದನ್ನು ಮಂಡಿಸಬಹುದು ಎಂದು ಸುಪ್ರೀಂಕೋರ್ಟಿನ ಪಂಚಪೀಠ ಅಭಿಪ್ರಾಯಪಟ್ಟಿದೆ.

ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ: ಸುಪ್ರೀಂ

ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್, ಆದರೆ, ಪ್ಯಾನ್ ಕಾರ್ಡ್ ಗೆ ಆಧಾರ್ ಕಡ್ಡಾಯ ! ಅಂದರೆ, ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಕಡ್ಡಾಯ ! ಆಹಾ ಏನು ತೀರ್ಪು ಇದು

ಎರಡನೇ ಸುದೀರ್ಘ ವಿಚಾರಣೆಯ ಕೇಸ್

ಎರಡನೇ ಸುದೀರ್ಘ ವಿಚಾರಣೆಯ ಕೇಸ್

ಸುಪ್ರೀಂಕೋರ್ಟಿನಲ್ಲಿ ಆಧಾರ್ ಮಾನ್ಯತೆ ಕುರಿತಂತೆ ಸುಮಾರು 38 ದಿನಗಳ ಕಾಲ ವಿಚಾರಣೆ ನಡೆಸಲಾಗಿದೆ. ಕೇಶವಾನಂದ ಭಾರ್ತಿ ಕೇಸ್ ನಂತರ ಸತತವಾಗಿ ಸುದೀರ್ಘವಾಗಿ ವಿಚಾರಣೆ ನಡೆದ ಪ್ರಕರಣ ಇದಾಗಿದೆ.

ರಿಲಯನ್ಸ್ ಅವರ ಕಥೆ ಏನು?

ರಿಲಯನ್ಸ್ ಜಿಯೋ ಸಂಪರ್ಕ ಪಡೆಯಲು ಆಧಾರ್ ಸಂಖ್ಯೆ ಪಡೆಯಲಾಗಿತ್ತು. ಈ ಬಗ್ಗೆ ಏನಾದರೂ ಆದೇಶ ಬಂದಿದೆಯೇ? ನನ್ನ ಮೊಬೈಲ್ ಸಂಖ್ಯೆ ಕತೆ ಏನು? ಎಂದು ಪ್ರಶ್ನಿಸಿದ್ದಾರೆ.

ಡಿಮ್ಯಾಟ್ ಖಾತೆಗಳ ಬಗ್ಗೆ ಗೊಂದಲ

ಬ್ಯಾಂಕ್ ವ್ಯವಹಾರಕ್ಕೆ ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹೀಗಾಗಿ, ಡಿಮ್ಯಾಟ್ ಖಾತೆ ಅಸಂವಿಧಾನಿಕವಾಗಲಿದೆ. ಹಾಗಾದರೆ, ಈಗಾಗಲೇ ಜೋಡಣೆಯಾಗಿರುವ ಖಾತೆಗಳ ಕತೆ ಏನು?

ಎಎನ್ಐ ಸಂಸ್ಥೆಗೂ ಗೊಂದಲ ಮೂಡಿಸಿದ್ದ ತೀರ್ಪು

ಯಾವುದಕ್ಕೆ ಕಡ್ಡಾಯ ಎಂಬುದರ ಬಗ್ಗೆ ಟ್ವೀಟ್ ಮಾಡಿರುವ ಎಎನ್ಐ, ಪ್ಯಾನ್ ಜತೆ ಜೋಡಣೆ ಕಡ್ಡಾಯ, ಯುಜಿಸಿ, ನೀಟ್, ಸಿಬಿಎಸ್ ಇ, ಶಾಲಾ ಪ್ರವೇಶ, ಬ್ಯಾಂಕ್ ವ್ಯವಹಾರ, ಮೊಬೈಲ್ ಸಿಮ್ ಖರೀದಿಗೆ ಕಡ್ಡಾಯವಲ್ಲ. ಖಾಸಗಿ ಕಂಪನಿಗಳು ಆಧಾರ್ ಡೇಟಾ ಕೇಳುವಂತಿಲ್ಲ.

English summary
Twitter Reaction : Aadhaar Mandatory for PAN :SC verdict. Banks accounts and mobile linking does not need Aadhaar. Linking of PAN has however been upheld.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X