• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೋಕನ್ನೆಲ್ಲ ಕೇಳಿ ನವಿಲುಗಳು ಅಳಲು ಪ್ರಾರಂಭಿಸಿದರೆ!

By Prasad
|

ಬೆಂಗಳೂರು, ಜೂನ್ 01 : ರಾಷ್ಟ್ರಪಕ್ಷಿ ನವಿಲಿಗೆ ಮಾನವನಂತೆ ವ್ಯವಹರಿಸಲು ಸಾಧ್ಯವಾಗುತ್ತಿದ್ದರೆ, ತಮ್ಮನ್ನು ಅಪಹಾಸ್ಯದ ಸರಕನ್ನಾಗಿ ಮಾಡಿ ಅವಮಾನಕ್ಕೀಡು ಮಾಡಿರುವ ವ್ಯಕ್ತಿಯ ಮೇಲೆ, ತಮ್ಮ ಮೈಲೇರಿರುವ ಬಣ್ಣಗಳಿಗಿಂತ ಹೆಚ್ಚು ಕೋಟಿ ರುಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದವೇನೋ?

ಮಳೆಯ ಸಿಂಚನವಾದಾಗಲೆಲ್ಲ ಸಾವಿರ ಕಣ್ಣುಗಳಿರುವ ಗರಿಗಳನ್ನು ಹರಡಿಕೊಂಡು ತನ್ನಷ್ಟಕ್ಕೆ ತಾನು ನಲಿಯುವ, ನೋಟದಿಂದಲೇ ನೋಡುಗರಿಗೆ ಅನಿರ್ವಚನೀಯ ಆನಂದ ಕೊಡುವ, ತನ್ನ ನಡಿಗೆಯಿಂದ ಮಯೂರಿ ಎಂದು ಹೆಸರು ಪಡೆದಿರುವ ನವಿಲು ತನ್ನ ಜೀವಮಾನದಲ್ಲಿ ಇಷ್ಟು ಅಪಹಾಸ್ಯಕ್ಕೆ ಈಡಾಗಿರಲಿಲ್ಲ.

"ನವಿಲುಗಳು ಆಜನ್ಮ ಬ್ರಹ್ಮಚಾರಿ, ಗಂಡು ಹೆಣ್ಣು ನವಿಲುಗಳು ಎಂದೂ ಕೂಡಿಕೊಳ್ಳುವುದಿಲ್ಲ. ಗಂಡು ಸುರಿಸುವ ಕಣ್ಣೀರಿನಿಂದಲೇ ಹೆಣ್ಣು ಬಸಿರಾಗುತ್ತದೆ" ಎಂಬಿತ್ಯಾದಿ ಅಸಂಬದ್ಧ ಮಾತುಗಳಿಂದ ನಿಜಕ್ಕೂ ನವಿಲುಗಳ ಮಾನನಷ್ಟವಾಗಿದೆ. ಸಾಮಾಜಿಕ ತಾಣದಲ್ಲಿ ಅನಗತ್ಯವಾಗಿ ಹಾಸ್ಯದ ಸರಕಾಗಿವೆ. [ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]

ನವಿಲುಗಳು ಸುರಿಸುವ ಕಣ್ಣೀರಿನ ಬಗ್ಗೆ ತಥ್ಯಮಿಥ್ಯಗಳೇನೇ ಇರಲಿ, ಮಳೆ ಸುರಿದಾಗ ಗಂಡು ನವಿಲು ಗರಿಗೆದರಿದಾಗ ಮಿಲನ ಮಹೋತ್ಸವವನ್ನು ಆಚರಿಸುತ್ತವೋ ಬಿಡುತ್ತವೋ, ಶ್ರೀಕೃಷ್ಣ ಪಾವಿತ್ರ್ಯತೆಯ ಸಂಕೇತವಾಗಿ ತನ್ನ ನವಿಲುಗರಿಯನ್ನು ಇಟ್ಟುಕೊಂಡಿದ್ದಾನೋ ಇಲ್ಲವೋ... ವಿನಾಕಾರಣ ನವಿಲುಗಳು ಕಣ್ಣೀರು ಸುರಿಸುವಂತಾಗಿದೆ.

ಇದಕ್ಕೆಲ್ಲ ಕಾರಣವಾಗಿದ್ದು, ಮಹೇಂದ್ರ ಸಿಂಗ್ ಶರ್ಮಾ ಎಂಬ ರಾಜಸ್ತಾನ ಹೈಕೋರ್ಟಿನ ನ್ಯಾಯಮೂರ್ತಿಗಳು ತಮ್ಮ ಜ್ಞಾನವನ್ನು ಮಾಧ್ಯಮದವರೆದಿರುವ ಹರಿಯಬಿಟ್ಟಿರುವುದರಿಂದ. ನವಿಲುಗಳು ಒಂದನ್ನೊಂದು ಕೂಡುವುದಿಲ್ಲ, ಗಂಡು ನವಿಲಿನ ಕಣ್ಣೀರೇ, ಹೆಣ್ಣು ನವಿಲಿಗೆ ವೀರ್ಯ ಎಂಬ ಮಾತನ್ನು ಒಪ್ಪುತ್ತೀರಾ? ಟ್ವಿಟ್ಟಿಗರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಮುಂದೆ ಓದಿರಿ. [ಹೇ... ನವಿಲೇ... ಹೆಣ್ಣವಿಲೇ...]

 ನವಿಲುಗಳ ಪ್ರೇಮ ಸಂಭಾಷಣೆ

ನವಿಲುಗಳ ಪ್ರೇಮ ಸಂಭಾಷಣೆ

ಗಂಡು ನವಿಲು : ಬಾರೇ ನನ್ ರಾಣಿ ಕಾಮಕೇಳಿಯಾಡೋಣ.

ಹೆಣ್ಣು ನವಿಲು : ಹೊಗಲೋ, ನಾವಿಬ್ರೂ ಸ್ನೇಹಿತರಾಗೇ ಇರೋಣ.

ಪ್ರೇಮಪರಿತ್ಯಕ್ತ ಗಂಡು ನವಿಲು ನಿರಾಶೆಯಿಂದ ಕಣ್ಣೀರುಗರೆಯಲು ಪ್ರಾರಂಭಿಸುತ್ತದೆ, ಆ ಕಣ್ಣೀರಿನಿಂದ ಹೆಣ್ಣು ನವಿಲು ಗರ್ಭಿಣಿಯಾಗುತ್ತದೆ.

ನವಿಲು ಜಾನ್ಸನ್ ಬೇಬಿ ಶಾಂಪೂ ಬಳಸಿದರೆ?

ನವಿಲು ಜಾನ್ಸನ್ ಬೇಬಿ ಶಾಂಪೂ ಬಳಸಿದರೆ?

ಒಂದು ವೇಳೆ ಗಂಡು ನವಿಲು ಜಾನ್ಸನ್ ಬೇಬಿ ಶಾಂಪೂವನ್ನು ಬಳಸಿದರೆ ಅದು ನಪುಂಸಕವಾಗಿಬಿಡುತ್ತದೆ, ಬ್ರಹ್ಮಚಾರಿಯಾಗಿದ್ದರೂ ಮಕ್ಕಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಜಾನ್ಸನ್ ಬೇಬಿ ಶಾಂಪೂ ಮೇಲೆ 'ನೊ ಮೋರ್ ಟಿಯರ್ಸ್' ಅಂತ ಬರೆದಿದೆ

ನವಿಲು ರಾಷ್ಟ್ರಪಕ್ಷಿಯಾಗಿದ್ದು ಹೇಗೆ?

ನವಿಲು ರಾಷ್ಟ್ರಪಕ್ಷಿಯಾಗಿದ್ದು ಹೇಗೆ?

ಹೆಸರಿನಲ್ಲಿ 'ಕಾಕ್' ಎಂದು ಇದ್ದರೂ ಸ್ವಯಂ ನಿಯಂತ್ರಣದಿಂದಾಗಿ ತನ್ನ ಜೀವನಪರ್ಯಂತ ಬ್ರಹ್ಮಚಾರಿಯಾಗಿದ್ದರಿಂದಲೇ ನವಿಲನ್ನು ರಾಷ್ಟ್ರಪಕ್ಷಿಯನ್ನಾಗಿ ಘೋಷಿಸಲಾಗಿದೆ! ಹೇಗಿದೆ ವಾದ?

ನಾನು ಮಳೆಯಲ್ಲಿ ಏಕೆ ಅಡ್ಡಾಡುತ್ತೇನೆಂದರೆ!

ನಾನು ಮಳೆಯಲ್ಲಿ ಏಕೆ ಅಡ್ಡಾಡುತ್ತೇನೆಂದರೆ!

ನವಿಲಿನ ನೋವಿನ ಸ್ವಗತ : ನಾನು ಯಾವಾಗಲೂ ಮಳೆಯಲ್ಲಿಯೇ ಅಡ್ಡಾಡಲು ಬಯಸುತ್ತೇನೆ. ಏಕೆಂದರೆ, ಮಳೆ ಸುರಿಯುತ್ತಿದ್ದಾಗ ನಾನು ಲೈಂಗಿಕ ಕ್ರಿಯೆ ನಡೆಸುತ್ತಿದ್ದೇನೆಂದು ಯಾರಿಗೂ ಗೊತ್ತಾಗುವುದಿಲ್ಲ!

ಇಂಥ ಜೋಕುಗಳನ್ನಾಡುವುದನ್ನು ನಿಲ್ಲಿಸಿ

ಇಂಥ ಜೋಕುಗಳನ್ನಾಡುವುದನ್ನು ನಿಲ್ಲಿಸಿ

ನವಿಲಿನ ಲೈಂಗಿಕತೆಯ ಬಗ್ಗೆ ಅಸಂಬದ್ಧ ಮಾತುಗಳನ್ನು, ಜೋಕುಗಳನ್ನು ಆಡುವುದನ್ನು ತಕ್ಷಣ ಕೂಡ ನಿಲ್ಲಿಸಿ. ಇದನ್ನೆಲ್ಲ ಕೇಳಿ ನವಿಲುಗಳೆಲ್ಲ ಅಳಲು ಪ್ರಾರಂಭಿಸಿದರೆ ನವಿಲುಗಳ ಸಂಖ್ಯೆ ದೇಶದ ಜನಸಂಖ್ಯೆಯನ್ನು ಮೀರಿಸಿಬಿಡುತ್ತದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What will happen if peacock uses Johnson baby shampoo? Why peacocks enjoy walking in the rain? Why one should stop joking about peacock? Twitter jokes make mockery of our national bird Peacock. Peacock would have filed defamation case had the national bird could act and think like a man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more