• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ: ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಸುಳ್ಳುಸುದ್ದಿ, ನಿಂದನೆಗೆ ಕಡಿವಾಣ

By Nayana
|

ನವದೆಹಲಿ, ಸೆಪ್ಟೆಂಬರ್ 6: ಗೂಗಲ್, ಫೇಸ್‌ಬುಕ್‌, ಟ್ವಿಟ್ಟರ್‌ನಂತಹ ಜಗತ್ತಿನ ಸಾಮಾಜಿಕ ಜಾಲತಾಣಗಳು ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಹಾಗೂ ಎಲ್ಲಾ ರಾಜ್ಯ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನಕಲಿ ಸುದ್ದಿಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ತಡೆಯಲು ಕೇಂದ್ರ ಚುನಾವಣಾ ಆಯೋಗದ ಜತೆ ಕೈಜೋಡಿಸಲಿವೆ.

ಆಯಾ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳುಸುದ್ದಿ ಅಥವಾ ನಕಲಿ ಸುದ್ದಿ ಇಲ್ಲವೇ ಮಾನನಷ್ಟ ಹಾನಿಕಾರಕ ಸುದ್ದಿಗಳ ಮೇಲೆ ಆಯಾ ಸಂಸ್ಥೆಗಳಿಂದಲೇ ನಿಗಾ ಇಡಲು ಕಂಪನಿಗಳು ನಿರ್ಧರಿಸಿವೆ.

ನಿಮ್ಮ ಫೇಸ್ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ?

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮೂರು ಸಾಮಾಜಿಕ ಜಾಲತಾಣಗಳು ಕೇಂದ್ರ ಚುನಾವಣಾ ಆಯೋಗದ ಜತೆ ಚರ್ಚೆ ನಡೆಸಿದ್ದು, ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ 48 ಗಂಟೆಗಳ ಮುಂಚೆ ನಿಶ್ಯಬ್ಧ ಅವಧಿಯನ್ನು ಅನುಸರಿಸಲು ಮೂರು ಕಂಪನಿಗಳು ನಿರ್ಧರಿಸಿವೆ. ಈ ಮತದಾನದ 48 ಗಂಟೆಗಳ ಮುಂಚೆ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳು ಯಾವುದೇ ಪ್ರಚಾರ ಮಾಡದೆ ಇರಲು ಈ ಕಂಪನಿಗಳು ಒಪ್ಪಿಗೆ ಸೂಚಿಸಿವೆ.

ಅಂದರೆ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಗೂಗಲ್‌ನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷ ಕುರಿತಂತೆ ಪ್ರಚಾರ ಮಾಡುವ ಅಂಶವನ್ನು ಪ್ರಕಟ ಮಾಡದೇ ಇರಲು ಈ ಕಂಪನಿಗಳು ನಿರ್ಧರಿಸಿದೆ.

ಫೇಸ್‌ಬುಕ್‌ ಡಿಲೀಟ್ ಮಾಡಿ: ವಾಟ್ಸಾಪ್ ಸಹ ಸ್ಥಾಪಕ

ಚುನಾವಣಾಗೂ ಮುನ್ನ ಸ್ಟೇಟಸ್‌ಗಳನ್ನು ಪ್ರಕಟಿಸುವಾಗ ಒಂದು ವೇಳೆ ಅಂತಹ ಸ್ಟೇಟಸ್‌ಗಳು ವ್ಯಕ್ತಿ ಅಥವಾ ಪಕ್ಷದ ಪರವಾಗಿದ್ದರೆ ಅವುಗಳನ್ನು ಪ್ರಾಯೋಜಿತ ಮಾಹಿತಿ ಎಂದು ಪ್ರಕಟಿಸಲು ಅಂದರೆ ಜಾಹೀರಾತುಗಳೆಂದು ಪರಿಗಣಿಸಲು ಕೂಡ ಈ ಕಂಪನಿಗಳು ಆಯೋಗಕ್ಕೆ ಒಪ್ಪಿಗೆ ಸೂಚಿಸಿವೆ.

ಫೇಸ್‌ಬುಕ್, ಟ್ವಿಟ್ಟರ್, ಗೂಗಲ್‌ನಲ್ಲಿ ಹಾಕುವ ಸ್ಟೇಟಸ್‌ಗಳ ಮೇಲೆ ಹದ್ದಿನ ಕಣ್ಣಿಡಲು ನಿರ್ಧರಿಸಿದ್ದು ಅವಹೇಳನಕಾರಿಯಾಗಿ ಪ್ರಕಟಿಸಬಹುದಾದ ಸುದ್ದಿಗಳ ಮೇಲೆ ಸ್ವಯಂ ನಿಯಂತ್ರಣ ಹೇರಲು ಕಂಪನಿಗಳು ನಿರ್ಧರಿಸಿವೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಪಿ ರಾವತ್ ಸಾಮಾಜಿಕ ಜಾಲತಾಣದೊಂದಿಗೆ ಆಯೋಗ ನಡೆಸಿದ ಮಾತುಕತೆ ಪೂರ್ಣಗೊಂಡಿದೆ.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರಿಕೆಯಿಂದಿರಿ: ಮೋದಿ

ಚುನಾವಣೆ ಸಂದರ್ಭದಲ್ಲಿ ಪ್ರಚಾರ ಕಾರ್ಯದಲ್ಲಿ ಸಾಮಾಜಿಕ ಜಾಲತಾಣಗಳು ಚುನಾವಣಾ ಆಯೋಗದ ನೀತಿಗೆ ಪೂರಕವಾಗಿ ಕೆಲಸ ಮಾಡಲು ಒಪ್ಪಿಕೊಂಡಿದೆ ಎದೊಂದು ಸಕಾರಾತ್ಮಕ ಬೆಳವಣಿಗೆ ಇದರಿಂದ ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ಸಾಧ್ಯವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಫೇಸ್‌ಬುಕ್ ಸ್ವಚ್ಛತಾ ಕಾರ್ಯ

ಫೇಸ್‌ಬುಕ್ ಸ್ವಚ್ಛತಾ ಕಾರ್ಯ

ಫೇಸ್‌ಬುಕ್‌ 104 ಕೋಟಿಗೂ ಅಧಿಕ ಪೋಸ್ಟ್‌ಗಳ ವಿರುದ್ಧ ಕ್ರಮ ತೆಗೆದುಕೊಂಡಿದೆ. ಸಾಕಷ್ಟು ಫೋಸ್ಟ್ ಗಳನ್ನು ಅಳಿಸಿದೆ. ಇದರಲ್ಲಿ 58 ಕೋಟಿ ನಕಲಿ ಖಾತೆಗಳೂ ಇವೆ. ಸಾಕಷ್ಟು ಅಶ್ಲೀಲ, ಲೈಂಗಿಕತೆ, ಹಿಂಸಾತ್ಮಕ ಹಾಗೂ ಭಯೋತ್ಪಾದನೆಗೆ ಪ್ರೇರೇಪಿಸುವ ಪೋಸ್ಟ್‌ಗಳನ್ನು ಅಳಿಸಿದೆ.

ಫೇಸ್‌ಬುಕ್ ಬಳಕೆದಾರರ ನೀತಿ ಏನು?

ಫೇಸ್‌ಬುಕ್ ಬಳಕೆದಾರರ ನೀತಿ ಏನು?

-ವಯಕ್ತಿಕ ತೇಜೋವಧೆ, ಅವಹೇಳನಕಾರಿ ವಿಡಿಯೋ, ಪೋಸ್ಟ್‌ ಬೇಡ

-ಹಿಂಸೆಯನ್ನು ಪ್ರೇರೇಪಿಸುವ, ಸಮಾಜದ ಶಾಂತಿ ಕದಡಬಲ್ಲ, ದ್ವೇಷ ಕಾರುವ ಪೋಸ್ಟ್ ಹಾಕದಿರಿ

-ಸಂಘಟಿತ ಅಪರಾಧ ಕೃತ್ಯಕ್ಕೆ ವೇದಿಕೆಯ ದುರ್ಬಳಕೆ ಬೇಡ

-ಕಾನೂನು ಬಾಹಿರ ವಸ್ತುಗಳನ್ನು ಮಾರಾಟ ಬೇಡ

-ಕಾಪಿರೈಟ್ ಹಕ್ಕುಗಳನ್ನು ಗೌರವಿಸಿ, ಕೃತಿ ಚೌರ್ಯದಿಂದ ದೂರವಿರಿ

- ಅಪ್ರಾಪ್ತರ ಖಾತೆಗಳು ಅನಗತ್ಯ

-ಇತರರ ವಯಕ್ತಿಕ, ಖಾಸಗಿತನಕ್ಕೆ ಧಕ್ಕೆಯಾಗಬಲ್ಲ ಪೋಸ್ಟ್ ಬೇಡ

ಭಯೋತ್ಪಾದಕ ಮಾಹಿತಿಗಳ ನಾಶ

ಭಯೋತ್ಪಾದಕ ಮಾಹಿತಿಗಳ ನಾಶ

ಫೇಸ್‌ಬುಕ್ ನಲ್ಲಿ 2018ರ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಭಯೋತ್ಪಾದಕ ಸಂಘಟನೆ ಐಸಿಸ್ ಮತ್ತು ಅಲ್‌ ಖೈದಾಗೆ ಸಂಬಂಧಿಸಿದ 19 ಲಕ್ಷಕ್ಕೂ ಹೆಚ್ಚು ಮಾಹಿತಿಯನ್ನು ಡಿಲೀಟ್ ಮಾಡಿದೆ. ಭಯೋತ್ಪಾದಕ ಗುಂಪುಗಳು ಸಾಮಾಜಿಕ ಜಾಲತಾಣವನ್ನು ಸುರ್ಬಳಕೆ ಮಾಡಲು ಯತ್ನಿಸುತ್ತಿವೆ ಆದ್ದರಿಂದ ಇನ್ನಷ್ಟು ಜಾಗರೂಕರಾಗುವ ಅಗತ್ಯವಿದೆ.

ಫೇಸ್‌ಬುಕ್‌ನಲ್ಲಿ ಹಲವು ಭಾಷೆಗಳ ತಪಾಸಣೆ

ಫೇಸ್‌ಬುಕ್‌ನಲ್ಲಿ ಹಲವು ಭಾಷೆಗಳ ತಪಾಸಣೆ

ಫೇಸ್‌ಬುಕ್‌ ಕಂಟೆಂಟ್ ಮಾಡರೇಟರ್ ಗಳನ್ನು ನೇರವಾಗಿಯೂ ನೇಮಿಸುತ್ತಿದೆ. ಜತೆಗೆ ಹೊರಗುತ್ತಿಗೆಯನ್ನೂ ನೀಡಿದೆ. 50ಕ್ಕೂ ಹೆಚ್ಚು ಭಾಷೆಗಳ ಪೋಸ್ಟ್ ಗಳ ತಪಾಸಣೆ ನಡೆಸಲಿದ್ದು, ಹಲವು ಕಂಪನಿಗಳಿಗೆ ಗುತ್ತಿಗೆ ನೀಡುತ್ತಿದೆ.

ಪೋಸ್ಟ್‌ಗಳನ್ನು ಅಳಿಸಿ ಹಾಕಲು 10 ಸಾವಿರ ನೌಕರರ ನೇಮಕ

ಪೋಸ್ಟ್‌ಗಳನ್ನು ಅಳಿಸಿ ಹಾಕಲು 10 ಸಾವಿರ ನೌಕರರ ನೇಮಕ

ಬಿಸಿನೆಸ್‌ ಪ್ರೊಸೆಸ್ ಮ್ಯಾನೇಜ್‌ಮೆಂಟ್ ಕಂಪನಿ ಜೆನ್ ಪ್ಯಾಕ್ಟ್ ಈ ವರ್ಷ ಫೇಸ್‌ಬುಕ್‌ಗೆ ಕಂಟೆಂಟ್ ಮ್ಯಾನೇಜ್‌ಮೆಂಟ್ ಸೇವೆ ಒದಗಿಸುವ ಗುತ್ತಿಗೆ ಪಡೆದಿದೆ. ಇದು ಕಂಟೆಂಟ್ ಮಾಡರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕನ್ನಡ, ತಮಿಳು, ತೆಲುಗು, ಮರಾಠಿ ಹೀಗೆ ಪ್ರಾದೇಶಿಕ ಭಾಷೆ ಬಲ್ಲವರಿಗೆ ಉದ್ಯೋಗ ನೀಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
World's biggest social medias Twitter, Google and Facebook have agreed with Chief Election Commission of India to maintain poll code during upcoming parliament and states assembly elections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more