ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿ ತರೂರ್ ಸಾಹೇಬ್ರ ಇಂಗ್ಲಿಷ್ ಪಾಂಡಿತ್ಯಕ್ಕೆ ಬೇಸ್ತುಬಿದ್ದ ಟ್ವಿಟ್ಟಿಗರು!

ಶಶಿ ತರೂರ್ ಸಾಮಾಜಿಕ ಜಾಲತಾಣದಲ್ಲಿ ಬಳಸುತ್ತಿರುವ 'ಹೈಫೈ ಇಂಗ್ಲಿಷ್' ಈಗ ಚರ್ಚೆಯ ವಿಷಯವಾಗಿದೆ ಮತ್ತು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಲೇವಡಿ ಮಾಡಲಾಗುತ್ತಿದೆ.

By Balaraj Tantry
|
Google Oneindia Kannada News

ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸಂಸದ ಶಶಿ ತರೂರ್ ಸಾಮಾಜಿಕ ಜಾಲತಾಣದಲ್ಲಿ ಬಳಸುತ್ತಿರುವ 'ಹೈಫೈ ಇಂಗ್ಲಿಷ್' ಈಗ ಚರ್ಚೆಯ ವಿಷಯವಾಗಿದೆ.

ಕೈಯಲ್ಲಿ ನಿಘಂಟು ಇಲ್ಲದಿದ್ದರೆ ಶಶಿ ತರೂರ್ ಬಳಸುವ ಪದಪುಂಜಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಲೇವಡಿ ಮಾಡಲಾಗುತ್ತಿದೆ. (ತರೂರ್ ಪತ್ನಿ ಸಾವು, ರಿಪಬ್ಲಿಕ್ ಟಿವಿ ಸಿಡಿಸಿದ ಬಾಂಬ್)

ದಿವಂಗತ ಪತ್ನಿ ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವಿನ ಸುತ್ತ ರಿಪಬ್ಲಿಕ್ ಟಿವಿ ಬಿಡುಗಡೆಗೊಳಿಸಿದ್ದ ಟೇಪಿಗೆ ಸಿಟ್ಟಾಗಿ ಶಶಿ ತರೂರ್ ಬಳಸಿದ ಒಂದೊಂದು ಪದಗಳಿಗೆ ಟ್ವಿಟ್ಟರ್ ನಲ್ಲಿ ತಮಾಷೆಯಾಡಲಾಗುತ್ತಿದೆ.

ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತವಿರುವ ತರೂರ್, ಅರ್ನಬ್ ಗೋಸ್ವಾಮಿ ವಿರುದ್ದ ಟ್ವಿಟ್ಟರ್ ನಲ್ಲಿ ಹರಿಹಾಯ್ದಿದ್ದರು. ಇದ್ಯಾವ ದೇಶದ ಇಂಗ್ಲಿಷ್, ಇದನ್ನು ಅರ್ಥ ಮಾಡಿಕೊಳ್ಳಲು ಮತ್ತೆ ತರೂರ್ ಟ್ವೀಟ್ ಗೆ ರಿಪ್ಲೈ ಮಾಡಬೇಕು ಇಲ್ಲದಿದ್ದರೆ ಕೈಯಲ್ಲಿ ಡಿಕ್ಷೆನರಿ ಇರಬೇಕೆನ್ನುವ ಟ್ವೀಟ್ ಗಳು ಹರಿದಾಡುತ್ತಿವೆ.

ದೆಹಲಿಯ ಲೀಲಾ ಪ್ಯಾಲೇಸ್ ಹೋಟೇಲಿನ ಕೊಠಡಿ ಸಂಖ್ಯೆ 307 ರಿಂದ 345ಕ್ಕೆ ಸುನಂದಾ ಪುಷ್ಕರ್ ಮೃತ ದೇಹವನ್ನು ಸಾಗಿಸಲಾಗಿತ್ತು, ಪೊಲೀಸರು ವಿಚಾರಣೆಗೆ ಬರುವ ಮುನ್ನ ಸಾಕಷ್ಟು ಸಾಕ್ಷಿಗಳನ್ನು ನಾಶಮಾಡಲಾಗಿತ್ತು ಎಂದು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಶಶಿ ತರೂರ್, ಅರ್ನಬ್ ವಿರುದ್ದ ಕೆಂಡಕಾರಿದ್ದರು. ಕೆಲವೊಂದು ಹಾಸ್ಯಾಸ್ಪದ ಟ್ವೀಟಿನ್ ಸ್ಯಾಂಪಲ್.. ಮುಂದೆ ಓದಿ..

ಅರ್ನಬ್ ವಿರುದ್ದ ಹರಿಹಾಯ್ದ ಶಶಿ ತರೂರ್

ಅರ್ನಬ್ ವಿರುದ್ದ ಹರಿಹಾಯ್ದ ಶಶಿ ತರೂರ್

ಟೇಪಿಗೆ ಪ್ರತಿಕ್ರಿಯಿಸಿದ್ದ ಶಶಿ ತರೂರ್, ಇದೊಂದು ಸುಳ್ಳಿನ ಪರಮಾವಧಿ. ನೀತಿರಹಿತ ಪತ್ರಕರ್ತನೊಬ್ಬನ ಮುಖವಾಡವಿದು ಎಂದು ತರೂರ್ ಟ್ವೀಟ್ ಮಾಡಿದ್ದರು.

ತರೂರ್ ಇಂಗ್ಲಿಷ್ ಅರ್ಥಮಾಡಿಕೊಳ್ಳಲು ಪರದಾಡುತ್ತಿರುವ ಶ್ರೇಷ್ಠ ವಿದ್ವಾಂಸರು

ಸಂಸದ ಶಶಿ ತರೂರ್ ಇಂಗ್ಲಿಷ್ ಅರ್ಥಮಾಡಿಕೊಳ್ಳಲು ಪರದಾಡುತ್ತಿರುವ ಶ್ರೇಷ್ಠ ವಿದ್ವಾಂಸರು.

ಭಾರತದ ಇಂಗ್ಲಿಷ್ ಬಳಸಿ

ಸರ್, ನೀವು ಬಳಸಿದ ಪದ ಅರ್ಥವಾಗಲಿಲ್ಲ, ದಯವಿಟ್ಟು ಭಾರತದ ಇಂಗ್ಲಿಷ್ ಬಳಸಿ.

ಶಶಿ ಕಾಲೆಳೆಯುವ ಟ್ವೀಟ್

ಅಮಿತಾಬ್ ಸೆಲ್ಯೂಟ್ ಮಾಡುವ ಚಿತ್ರ ಬಳಸಿ, ಹಾಸ್ಯಾಸ್ಪದ ಟ್ವೀಟ್

ಶಶಿ ಬಳಸಿದ್ದ ಪದವನ್ನೇ ಮರುಬಳಸಿ ಹಾಸ್ಯ

ಶಶಿ ಬಳಸಿದ್ದ ಪದವನ್ನೇ ಮರುಬಳಸಿ ಹೀಗೊಂದು ಹಾಸ್ಯದ ಟ್ವೀಟ್

English summary
Twitter finds amusement as Congress Leader and MP Shashi Tharoor hits back at Republic Editor-in-Chief Arnab Goswami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X