ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಟ್ವಿಟ್ಟರ್‌ ನನ್ನ ಖಾತೆಯನ್ನು ಒಂದು ಗಂಟೆ ನಿರ್ಬಂಧಿಸಿದೆ': ರವಿ ಶಂಕರ್‌ ಪ್ರಸಾದ್‌

|
Google Oneindia Kannada News

ನವದೆಹಲಿ, ಜೂ. 25: ''ಯುಎಸ್ಎಯ ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಆರೋಪದಲ್ಲಿ ಟ್ವಿಟರ್ ಸುಮಾರು ಒಂದು ಗಂಟೆ ನನ್ನ ಖಾತೆಯನ್ನು ನಿರ್ಬಂಧಿಸಿದೆ, ಬಳಿಕ ಟ್ವಿಟ್ಟರ್‌ ಬಳಕೆಗೆ ಅವಕಾಶ ನೀಡಿದೆ,'' ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಶುಕ್ರವಾರ ಹೇಳಿದ್ದಾರೆ.

ಈ ಬಗ್ಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ನಲ್ಲಿ ಪೋಸ್ಟ್‌ ಮಾಡಿರುವ ಐಟಿ ಸಚಿವ ರವಿಶಂಕರ್ ಪ್ರಸಾದ್, "ಸ್ನೇಹಿತರೇ! ಇಂದು ಬಹಳ ವಿಚಿತ್ರವಾದದ್ದು ಸಂಭವಿಸಿದೆ. ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸುಮಾರು ಒಂದು ಗಂಟೆ ನನ್ನ ಖಾತೆಗೆ ಪ್ರವೇಶವನ್ನು ಟ್ವಿಟ್ಟರ್‌ ನಿರಾಕರಿಸಿದೆ. ಬಳಿಕ ನನಗೆ ಖಾತೆಯ ಬಳಕೆಗೆ ಅವಕಾಶ ನೀಡಿದ್ದಾರೆ," ಎಂದು ತಿಳಿಸಿದ್ದಾರೆ.

'ಸಾಮಾನ್ಯ ವಾಟ್ಸಾಪ್ ಬಳಕೆದಾರರು ಹೊಸ ಐಟಿ ನಿಯಮಗಳ ಬಗ್ಗೆ ಭಯಪಡಬೇಕಾಗಿಲ್ಲ' : ರವಿಶಂಕರ್'ಸಾಮಾನ್ಯ ವಾಟ್ಸಾಪ್ ಬಳಕೆದಾರರು ಹೊಸ ಐಟಿ ನಿಯಮಗಳ ಬಗ್ಗೆ ಭಯಪಡಬೇಕಾಗಿಲ್ಲ' : ರವಿಶಂಕರ್

ಕೇಂದ್ರ ಸಚಿವರು ಮತ್ತು ಸಚಿವರ ತಂಡವು ಪ್ರಸಾದ್ ಅಧಿಕೃತ ಟ್ವಿಟ್ಟರ್ ಖಾತೆಗೆ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ, ಅದರಲ್ಲಿ ನಿಮ್ಮ ಖಾತೆಯನ್ನು ಲಾಕ್‌ ಮಾಡಲಾಗಿದೆ ಎಂದು ತೋರಿಸಿದೆ. ಈ ಬಗ್ಗೆ ಸ್ಕ್ರೀನ್‌ ಶಾಟ್‌ನೊಂದಿಗೆ ಕೂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದ ಸಚಿವರು, ತಮ್ಮ ಟ್ವಿಟ್ಟರ್‌ ಖಾತೆ ಸರಿಯಾದ ಬಳಿಕ ಅದರಲ್ಲೂ ಟ್ವೀಟ್‌ ಮಾಡಿದ್ದಾರೆ.

Twitter denied access to my account for almost an hour said Ravi Shankar Prasad

ಕೇಂದ್ರ ಸಚಿವರು ಮತ್ತು ತಂಡ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅಧಿಕೃತ ಟ್ವಿಟ್ಟರ್ ಖಾತೆಗೆ ಲಾಗ್ ಇನ್ ಮಾಡಲು ಪ್ರಯತ್ನಿಸಿದ ಸಂದರ್ಭ, ''ನಿಮ್ಮ ಟ್ವಿಟ್ಟರ್ ಖಾತೆಗೆ ಪೋಸ್ಟ್ ಮಾಡಲಾದ ವಿಷಯಕ್ಕೆ ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್ (ಡಿಎಂಸಿಎ) ಸೂಚನೆಯಡಿ ದೂರು ಬಂದ ಹಿನ್ನೆಲೆ ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ. ಬಳಕೆದಾರರು ತಮ್ಮ ಹಕ್ಕುಸ್ವಾಮ್ಯದ ಕೃತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಡಿಎಂಸಿಎ ಹಕ್ಕುಸ್ವಾಮ್ಯ ಮಾಲೀಕರು ಟ್ವಿಟರ್‌ಗೆ ತಿಳಿಸಿದೆ. ಮಾನ್ಯ ಸೂಚನೆ ಬಂದ ನಂತರ, ಟ್ವಿಟರ್ ಗುರುತಿಸಿದ ವಿಷಯವನ್ನು ತೆಗೆದುಹಾಕಲಿದೆ. ಈ ಉಲ್ಲಂಘನೆ ಪುನಾರವರ್ತನೆಯಾದರೆ, ಟ್ವಿಟ್ಟರ್‌ ನಿಮ್ಮ ಖಾತೆಯನ್ನು ಅಮಾನತುಗೊಳಿಸಬಹುದು,'' ಎಂಬ ಸಂದೇಶ ಲಭಿಸಿದೆ.

ಟ್ವಿಟ್ಟರ್ ಉದ್ದೇಶಪೂರ್ವಕವಾಗಿಯೇ ನಿಯಮ ಪಾಲಿಸುತ್ತಿಲ್ಲ: ರವಿಶಂಕರ್ ಪ್ರಸಾದ್ಟ್ವಿಟ್ಟರ್ ಉದ್ದೇಶಪೂರ್ವಕವಾಗಿಯೇ ನಿಯಮ ಪಾಲಿಸುತ್ತಿಲ್ಲ: ರವಿಶಂಕರ್ ಪ್ರಸಾದ್

ಸುಮಾರು ಒಂದು ಗಂಟೆಯ ನಂತರ, ಟ್ವಿಟ್ಟರ್‌ ಖಾತೆ ಬಳಕೆಗೆ ಅವಕಾಶ ನೀಡಿದ ಬಳಿಕ, ''ನಿಮ್ಮ ಖಾತೆ ಈಗ ಬಳಕೆಗೆ ಲಭ್ಯವಿದೆ. ನಿಮ್ಮ ಖಾತೆಯ ವಿರುದ್ಧ ಯಾವುದೇ ಬೇರೆ ನಿಯಮ ಉಲ್ಲಂಘನೆ ಆರೋಪ ಬಂದರೂ ನಿಮ್ಮ ಖಾತೆಯನ್ನು ಮತ್ತೆ ಲಾಕ್ ಮಾಡಬೇಕಾಗುತ್ತದೆ ಅಥವಾ ಅಮಾನತುಗೊಳಿಸಬೇಕಾಗುತ್ತದೆ ಎಂಬುದನ್ನು ದಯವಿಟ್ಟು ಗಮನದಲ್ಲಿರಿಸಿ. ಇದನ್ನು ತಪ್ಪಿಸಲು, ನಮ್ಮ ಕೃತಿಸ್ವಾಮ್ಯ ನೀತಿಯನ್ನು ಉಲ್ಲಂಘಿಸಿ ಯಾವುದೇ ಪೋಸ್ಟ್ ಮಾಡಬೇಡಿ. ನಿಮಗೆ ಪೋಸ್ಟ್ ಮಾಡಲು ಅಧಿಕಾರವಿಲ್ಲದ ವಿಷಯವನ್ನು ನೀವು ಪೋಸ್ಟ್‌ ಮಾಡಿದ್ದರೆ, ತಕ್ಷಣ ತೆಗೆದುಹಾಕಿ,'' ಎಂದು ತಿಳಿಸಲಾಗಿದೆ.

ಇನ್ನು ಈ ಬಗ್ಗೆ ತಮ್ಮ ಖಾತೆ ಅನ್‌ಬ್ಲಾಕ್‌ ಆದ ಬಳಿಕ ಟ್ವೀಟ್‌ ಮಾಡಿರುವ ಸಚಿವರು, ''ಟ್ವಿಟ್ಟರ್‌ನ ಈ ಕ್ರಮವು ವಾಕ್‌ ಸ್ವಾತಂತ್ಯ್ರಕ್ಕೆ ಅವಕಾಶ ನೀಡದೆ, ನಮ್ಮ ನಿಯಮ ಪಾಲಿಸದಿದ್ದರೆ ನಿಮ್ಮ ಖಾತೆಯನ್ನು ತೆಗೆದುಹಾಕಲಾಗುವುದು ಎಂಬ ಬೆದರಿಕೆ ನೀಡಿ, ತಮ್ಮದೇ ಆದ ಕಾರ್ಯಸೂಚಿಯನ್ನು ನಡೆಸಲು ಮಾತ್ರ ಆಸಕ್ತಿ ಹೊಂದಿದೆ ಎಂದು ಸೂಚಿಸುತ್ತದೆ,'' ಎಂದು ಆರೋಪಿಸಿದ್ದಾರೆ.

ಹಾಗೆಯೇ, ''ಯಾವುದೇ ಪ್ಲಾಟ್‌ಫಾರ್ಮ್ ಇರಲಿ ಅದು ದೇಶದ ಹೊಸ ಐಟಿ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕಾಗುತ್ತದೆ. ಅದರಲ್ಲಿ ಯಾವುದೇ ರಾಜಿ ಇರುವುದಿಲ್ಲ,'' ಎಂದು ಕೂಡಾ ಹೇಳಿದ್ದಾರೆ.

English summary
Union Minister Ravi Shankar Prasad said on Friday that Twitter denied access to my account for almost an hour on the alleged ground that there was a violation of Digital Millennium Copyright Act of the USA and subsequently they allowed me to access the account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X