ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ಚೀನಾಗೆ ಸೇರಿದೆ ಎಂದು ತೋರಿದ ಟ್ವಿಟರ್ ನಿಂದ ಕ್ಷಮೆ

|
Google Oneindia Kannada News

ನವದೆಹಲಿ, ನವೆಂಬರ್.18: ಭಾರತ ಮತ್ತು ಚೀನಾ ಗಡಿಯಲ್ಲಿರುವ ಲೇಹ್ ಮತ್ತು ಲಡಾಖ್ ಪ್ರದೇಶಗಳು ಚೀನಾ ವ್ಯಾಪ್ತಿಗೆ ಬರುತ್ತವೆ ಎಂದು ತೋರಿಸುವ ಮೂಲಕ ಪ್ರಮಾದವೆಸಗಿದ್ದ ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್ ಕೇಂದ್ರ ಸರ್ಕಾರದ ಕ್ಷಮಾಪಣೆ ಕೋರಿದೆ.

ಕೇಂದ್ರ ಸರ್ಕಾರದ ಜಂಟಿ ಸಂಸದೀಯ ಸಮಿತಿಗೆ ಟ್ವಿಟರ್ ಕ್ಷಮಾಪಣೆ ತಿಳಿಸಿದ್ದು, ನವೆಂಬರ್.30ರೊಳಗೆ ತನ್ನ ದೋಷವನ್ನು ಸರಿಪಡಿಸುವುದಾಗಿ ಹೇಳಿದೆ. ಈ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಲೇಖಿ ಸ್ಪಷ್ಟನೆ ನೀಡಿದ್ದಾರೆ.

'ಉದ್ದೇಶಪೂರ್ವಕ ಕೃತ್ಯ': ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ನೋಟಿಸ್'ಉದ್ದೇಶಪೂರ್ವಕ ಕೃತ್ಯ': ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ನೋಟಿಸ್

ಲಡಾಖ್ ಮತ್ತು ಲೇಹ್ ಪ್ರದೇಶಗಳನ್ನು ಚೀನಾದ ಗಡಿಗೆ ಸೇರಿದೆ ಎಂದು ತೋರಿಸಿದ ಟ್ವಿಟರ್ ತನ್ನ ತಪ್ಪಿಗೆ ಲಿಖಿತ ರೂಪದಲ್ಲಿ ಕ್ಷಮಾಪಣೆಯನ್ನು ಕೋರಿದೆ. ಭಾರತದ ನಕ್ಷೆಯನ್ನು ತಪ್ಪಾಗಿ ಜಿಯೋ-ಟ್ಯಾಗಿಂಗ್ ಮಾಡಿದ್ದಕ್ಕಾಗಿ ಟ್ವಿಟರ್‌ನ ಮುಖ್ಯ ಗೌಪ್ಯತಾ ಅಧಿಕಾರಿ ಡೇಮಿಯನ್ ಕರಿಯನ್ ಸಹಿ ಮಾಡಿದ ಟ್ವಿಟರ್‌ನ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಮೀನಾಕ್ಷಿ ಲೇಖಿ ಮಾಹಿತಿ ನೀಡಿದ್ದಾರೆ.

Twitter Apologises For Hurting Indian Sentiment By Showing Ladakh In China Border

ನ.30ರೊಳಗೆ ತಪ್ಪು ಸರಿಪಡಿಸಿಕೊಳ್ಳುವುದಾಗಿ ಹೇಳಿಕೆ:

ಭಾರತದ ಭೌಗೋಳಿಕ ಪ್ರದೇಶವನ್ನು ತೋರಿಸುವ ವಿಚಾರದಲ್ಲಿ ಟ್ವಿಟ್ಟರ್ ಪದೇ ಪದೇ ಯಡವಟ್ಟುಗಳನ್ನು ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಲೇಹ್ ಅನ್ನು ಚೀನಾದ ಭಾಗ ಎಂದು ತೋರಿಸುವ ಮೂಲಕ ಇತ್ತೀಚೆಗೆ ಪ್ರಮಾದ ಎಸಗಿತ್ತು. ತೀವ್ರ ಆಕ್ಷೇಪದ ಬಳಿಕ ಟ್ವಿಟ್ಟರ್ ಅದನ್ನು ಸರಿಪಡಿಸಿತ್ತು. ಆದರೆ ಲೇಹ್ ಅನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗ ಎಂದು ತೋರಿಸುವಂತೆ ಸರಿಪಡಿಸಿಲ್ಲ. ಬದಲಾಗಿ ಅದನ್ನು ಜಮ್ಮು ಮತ್ತು ಕಾಶ್ಮೀರದ ಭಾಗ ಎಂದು ತೋರಿಸುತ್ತಿತ್ತು. ಕೇಂದ್ರದ ನೋಟಿಸ್ ಜಾರಿ ನಂತರ ಎಚ್ಚೆತ್ತುಕೊಂಡಿರುವ ಮೈಕ್ರೊಬ್ಲಾಗಿಂಗ್ ಸಂಸ್ಥೆಯು ನವೆಂಬರ್.30ರೊಳಗೆ ತನ್ನ ತಪ್ಪು ಸರಿಪಡಿಸಿಕೊಳ್ಳುವುದಾಗಿ ಹೇಳುತ್ತಿದೆ.

English summary
Twitter Apologises For Hurting Indian Sentiment By Showing Ladakh In China Border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X