ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ, ಮುಂಬೈ, ಗೋವಾ ಮೇಲೆ ಎರಡೆರಡು ಭಯೋತ್ಪಾದನಾ ದಾಳಿ ಎಚ್ಚರಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 25: ದೆಹಲಿ, ಮುಂಬೈ ಮತ್ತು ಗೋವಾದಲ್ಲಿ ಇಸ್ಲಾಮಿಕ್ ಸ್ಟೇಟ್ ಹಾಗೂ ಅಲ್ ಖೈದಾ ಭಯೋತ್ಪಾದನಾ ಸಂಘಟನೆಗಳಿಂದ ಎರಡೆರಡು ದಾಳಿಗಳು ನಡೆಯುವ ಬೆದರಿಕೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನ್ಯೂಜಿಲೆಂಡ್‌ನಲ್ಲಿ ನಡೆದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಯಹೂದಿ ಕಟ್ಟಡಗಳ ಮೇಲೆ ದಾಳಿ ನಡೆಸುವ ಅಪಾಯವಿದೆ ಎಂದು ಎರಡು ವರದಿಗಳು ಎಚ್ಚರಿಸಿವೆ.

ಜೈಷೆ ಸದಸ್ಯ, ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಸಹಚರನ ಸೆರೆಜೈಷೆ ಸದಸ್ಯ, ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಸಹಚರನ ಸೆರೆ

ದಾಳಿಯಲ್ಲಿ ಉಗ್ರರು ವಾಹನ ಅಥವಾ ಚಾಕುವನ್ನು ಬಳಸುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಮುಂಬೈನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ, ಕಾನ್ಸುಲೇಟ್ ಜನರಲ್, ಸಭಾಮಂದಿರಗಳು ಮತ್ತು ಚಬಾಡ್ ಮನೆಗಳ ಸುತ್ತಮುತ್ತ ತೀವ್ರ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಸಲಹೆ ನೀಡಿವೆ.

twin threats to Delhi, Mumbai and Goa by islamic state and al-Qaida intelligence agencies alert

ಮಾರ್ಚ್ 20 ರಂದು ನೀಡಿರುವ ಮೊದಲ ಎಚ್ಚರಿಕೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಮತ್ತು ಅದಕ್ಕೆ ಸಂಬಂಧಿಸಿದ ಘಟಕಗಳು ಕ್ರೈಸ್ಟ್‌ಚರ್ಚ್ ದಾಳಿಯಲ್ಲಿ 50 ಮುಸ್ಲಿಮರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿರುವುದಾಗಿ ತಿಳಿಸಲಾಗಿದೆ.

'ವಿವಿಧ ಮೂಲಗಳಿಂದ ಪಡೆದುಕೊಂಡಿರುವ ಮಾಹಿತಿಗಳ ಪ್ರಕಾರ, ಐಎಸ್ ವಕ್ತಾರ ಅಬು ಹಸನ್ ಅಲ್ ಮುಜಾಹಿರ್ ಮಾಡಿರುವ ಭಾಷಣವು ಅಂತರ್ಜಾಲ ಗುಂಪುಗಳು ಮತ್ತು ಚಾಟ್ ಪ್ಲಾಟ್‌ಫಾರಂಗಳಲ್ಲಿ ಹಡಿದಾಡುತ್ತಿವೆ. ಮಸೀದಿಗಳ ಮೇಲೆ ನಡೆದ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಮುಜಾಹಿರ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾನೆ. ಈ ಆಡಿಯೋ ಮತ್ತು ಇತರೆ ಸಂಭಾಷಣೆಗಳು ಘಟನೆಯ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶವನ್ನು ಸೂಚಿಸುತ್ತದೆ' ಎಂದು ವರದಿ ತಿಳಿಸಿದೆ.

 ಉಗ್ರರನ್ನು ಹತ್ತಿಕ್ಕುವಷ್ಟು ನಾಯಕತ್ವ ಸಮರ್ಥವಾಗಿದೆ: ಅಜಿತ್ ದೋವಲ್ ಉಗ್ರರನ್ನು ಹತ್ತಿಕ್ಕುವಷ್ಟು ನಾಯಕತ್ವ ಸಮರ್ಥವಾಗಿದೆ: ಅಜಿತ್ ದೋವಲ್

ಪ್ರಾರ್ಥನಾ ಮಂದಿರಗಳ ಹೊರಭಾಗಗಳಲ್ಲಿ ಭದ್ರತಾ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 23ರಂದು ನೀಡಲಾಗಿರುವ ಮತ್ತೊಂದು ವರದಿಯಲ್ಲಿ, ಯಹೂದಿಗಳ ನಿವಾಸ ಕಟ್ಟಡಗಳು ಅಥವಾ ಸಭಾಭವನಗಳು, ಪ್ರಾರ್ಥನಾ ಮಂದಿರಗಳ ಮೇಲೆ ಅಲ್ ಖೈದಾ ಘಟಕ ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ಕೊಡಲಾಗಿದೆ.

ನ್ಯೂಜಿಲೆಂಡ್ ಶೂಟೌಟ್ : ಹತ್ಯೆಯಾದ 50 ಜನರಲ್ಲಿ ಐವರು ಭಾರತೀಯರುನ್ಯೂಜಿಲೆಂಡ್ ಶೂಟೌಟ್ : ಹತ್ಯೆಯಾದ 50 ಜನರಲ್ಲಿ ಐವರು ಭಾರತೀಯರು

ಅಸಂಪ್ರದಾಯಿಕ ಆಯುಧ ಬಳಸಿ ದಾಳಿ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ದಾಳಿಯು ಒಬ್ಬ ವ್ಯಕ್ತಿ ಚಾಕು ಅಥವಾ ವಾಹನ ಬಳಸಿ ನಡೆಸುವ ಸಾಧ್ಯತೆ ಇದೆ. ಗೋವಾದಲ್ಲಿ ದಾಳಿ ನಡೆಸಬಹುದಾದ ಕೆಲವು ಸ್ಥಳಗಳನ್ನು ಅದು ಉಲ್ಲೇಖಿಸಿದೆ.

ಗುಪ್ತಚರ ಇಲಾಖೆಗಳು ನೀಡಿರುವ ಸ್ಥಳಗಳಲ್ಲದೆ ಇತರೆ ಪ್ರಮುಖ ಸ್ಥಳಗಳಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ. ಇಸ್ರೇಲ್ ರಾಯಭಾರ ಕಚೇರಿ ಮುಂಭಾಗದ ಭದ್ರತೆಯನ್ನು ಪರಿಶೀಲಿಸಲಾಗಿದೆ. ಅನುಮಾನಾಸ್ಪದ ವಾಹನಗಳ ಮೇಲೆ ಕಣ್ಣಿಡಲಾಗುತ್ತಿದೆ.

English summary
Intelligence Agencies have alerted police in Delhi, Mumbai and Goa on twin threats from Islamic state and Al-Qaida.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X