ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿಯಾಗಿ ನಂದನ್!

By Mahesh
|
Google Oneindia Kannada News

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಂದನ್ ನಿಲೇಕಣಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ. ಕಾಂಗ್ರೆಸ್ ಟಿಕೆಟ್ ಅವರಿಗೆ ಸಿಗುವುದು ಖಾತ್ರಿಯಾಗಿದೆ ಎಂಬ ಸುದ್ದಿಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಇನ್ಫೋಸಿಸ್ ಸಹಸ್ಥಾಪಕ ಎಂದು ನಿಲೇಕಣಿ ಅವರನ್ನು ಗುರುತಿಸಲಾಗುತ್ತಿತ್ತು ಈಗ ಆಧಾರ್ ಕಾರ್ಡ್ ಖ್ಯಾತಿಯ ನಿಲೇಕಣಿಯಾಗಿಬಿಟ್ಟಿದ್ದಾರೆ. ಈಗ ಜನಪ್ರತಿನಿಧಿ ಸ್ಥಾನ ತುಂಬಲು ನಿಲೇಕಣಿ ರೆಡಿಯಾಗುತ್ತಿದ್ದಾರೆ ಎನ್ನಲಾಗಿದೆ,

ಇನ್ಫೋಸಿಸ್ ಹುದ್ದೆಯಿಂದ ಹೊರಬಂದ ಮೇಲೆ ಕೇಂದ್ರಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನಕ್ಕೆ ಸಮನಾದ Unique Identification Authority of India (UIDAI) ದ ಮುಖ್ಯಸ್ಥರಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿರುವ ನಿಲೇಕಣಿ ಅವರು ಚುನಾವಣೆ ಕಣಕ್ಕಿಳಿಯುವುದರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭರಪೂರ ಚರ್ಚೆ ನಡೆದಿದೆ.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ ಸೇರಿದಂತೆ ಹಲವಾರು ಮಂದಿ ನಿಲೇಕಣಿ ಅವರ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಲವಾರು ಮಂದಿ 'ನಿ'ಲೇಕಣಿ ಆಧಾರ ಇನ್ಮುಂದೆ 'ನಿ'ರಾಧಾರ ಆಗಲಿದೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ನೋಡುತ್ತಿರಿ.. ಮನಮೋಹನ್ ಸಿಂಗ್ ಸ್ಥಾನಕ್ಕೆ ನಿಲೇಕಣಿ ಬರಲಿದ್ದಾರೆ ಎಂದಿದ್ದಾರೆ.ಟ್ವಿಟ್ ಲೋಕ ಏನು ಹೇಳುತ್ತದೆ ನೋಡೋಣ ಬನ್ನಿ..

ಕಿರಣ್ ಮುಜುಂದಾರ್ ಶಾ

ನಂದನ್ ಬರೆದ ಕೃತಿ ನೆನಪಿಸಿಕೊಂಡ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ

ಕುಂಬ್ಳೆ ಸ್ಪರ್ಧೆಗಿಳಿದರೆ

ನಂದನ್ ವಿರುದ್ಧ ಅನಿಲ್ ಕುಂಬ್ಳೆ ಸ್ಪರ್ಧೆಗಿಳಿದರೆ ಹೇಗಿರುತ್ತೆ ಎಂಬುದನ್ನು ಉದ್ಯಮಿ vs ಕ್ರಿಕೆಟರ್ ಶೈಲಿಯಲ್ಲಿ

ಪ್ರಧಾನಿ ಅಭ್ಯರ್ಥಿಯಾಗಿ

ಪ್ರಧಾನಿ ಅಭ್ಯರ್ಥಿಯಾಗಿ ಮನಮೋಹನ್ ಸಿಂಗ್ ಸ್ಥಾನದಲ್ಲಿ ನಂದನ್ ಕಾಣಿಸಬಹುದು ಕಾಯ್ತಾ ಇರಿ.. Cool

ಐಟಿ ಬಿಟಿ ಸಚಿವ

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ನಂದನ್ ಐಟಿ ಬಿಟಿ ಸಚಿವ ಆಗುವುದಂತೂ ಗ್ಯಾರಂಟಿ

ಆನಂತ್ ಕಥೆ ಏನು?

ನಂದನ್ ಸ್ಪರ್ಧೆಗಿಳಿದರೆ ಅನಂತ್ ಕುಮಾರ್ ಸುರಕ್ಷಿತವಾದ ಕ್ಷೇತ್ರ ಹುಡುಕಬೇಕಾಗುತ್ತದೆ

ತಪ್ಪು ದಾರಿ ಎಳೆಯುತ್ತಿದ್ದಾರೆ

ಕಾಂಗ್ರೆಸ್ ಪರ ನಿಲ್ಲುವ ಮೂಲಕ ಸಚಿನ್, ನಂದನ್ ಯುವ ಪೀಳಿಗೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ.

English summary
Micro-blogging site Twitter was abuzzed with news on Nilekani contesting poll on Congress ticket. Many people turned up to Twitter and expressed the opinions and suggestions. Here are some instances how the tweeples reacted over the news
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X