ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟುಡೇಯಲ್ಲಿ ಸದ್ಯಕ್ಕೆ ರಾಜ್ ದೀಪ್ ಸರ್ದೇಸಾಯಿ ಕಾಣಿಸಲ್ಲವೇಕೆ?

|
Google Oneindia Kannada News

ಮುಂಬೈ, ಜನವರಿ 28: ದೇಶದ ಸೆಲೆಬ್ರಿಟಿ ಮಾಧ್ಯಮ ಪ್ರತಿನಿಧಿ, ಟಿವಿ ನಿರೂಪಕ, ''ವರದಿಗಾರ'' ಇಂಡಿಯಾ ಟುಡೇ ಕನ್ಸಲ್ಟಿಂಗ್ ಸಂಪಾದಕ ರಾಜ್ ದೀಪ್ ಸರ್ದೇಸಾಯಿ ಅವರು ಸುದ್ದಿವಾಹಿನಿಯಲ್ಲಿ ಸದ್ಯಕ್ಕೆ ಕಾಣಿಸುತ್ತಿಲ್ಲ. ಎರಡು ವಾರಗಳ ಕಾಲ ಯಾವುದೇ ಇಂಡಿಯಾ ಟುಡೇ ಸ್ಕ್ರೀನ್ ನಲ್ಲಿ ಕಾಣಿಸದಂತೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಈ ಬೆಳವಣಿಗೆಯಿಂದ ಬೇಸತ್ತು ಸರ್ದೇಸಾಯಿ ಅವರು ಇಂಡಿಯಾ ಟುಡೇ ತೊರೆದಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿಯಿಲ್ಲ.

ಇಂಡಿಯಾ ಟುಡೇ ಸಂಸ್ಥೆಯ ಸಾಮಾಜಿಕ ಜಾಲ ತಾಣ ನೀತಿ ನಿಯಮಗಳನ್ನು ಮೀರಿದ್ದರಿಂದ ರಾಜ್ ದೀಪ್ ಅವರಿಗೆ ಎರಡು ವಾರಗಳ ನಿರ್ಬಂಧ ಶಿಕ್ಷೆ ವಿಧಿಸಲಾಗಿದೆ.

ವರದಿಗಳ ಪ್ರಕಾರ, ಜನವರಿ 26ರಂದು ನವದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಪ್ರತಿಭಟನೆ ವೇಳೆ ಮೃತಪಟ್ಟ ವ್ಯಕ್ತಿಯೊಬ್ಬನ ಬಗ್ಗೆ ಸರ್ದೇಸಾಯಿ ಮಾಡಿದ್ದ ಟ್ವೀಟ್ ಸುಳ್ಳು ಸುದ್ದಿ ಹಬ್ಬಿಸಿದ್ದಂತಾಗಿದೆ ಎಂಬುದನ್ನು ಸಾರ್ವಜನಿಕರು ಎತ್ತಿ ತೋರಿಸಿದ್ದರು.

TV anchor Rajdeep Sardesai taken off air for two weeks: Reports

"One person, 45-year-old Navneet, was killed allegedly in police firing at ITO. Farmers tell me: the 'sacrifice' will not go in vain,"

ಎಂದು ರಾಜದೀಪ್ ಈ ಟ್ವೀಟ್ ಮಾಡಿದ್ದರು ನಂತರ ಟ್ವೀಟ್ ಬಗ್ಗೆ ಆಕ್ಷೇಪ ಬಂದ ಮೇಲೆ ಟ್ವೀಟ್ ಡಿಲೀಟ್ ಮಾಡಿದ್ದರು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ರಾಜ್ ದೀಪ್ ಸರ್ದೇಸಾಯಿ ಟ್ವಿಟ್ಟರ್ ಬಿಟ್ರರಂತೆ, ಹೌದೆ? ಯಾಕೆ?ರಾಜ್ ದೀಪ್ ಸರ್ದೇಸಾಯಿ ಟ್ವಿಟ್ಟರ್ ಬಿಟ್ರರಂತೆ, ಹೌದೆ? ಯಾಕೆ?

ನಂತರ ದೆಹಲಿ ಪೊಲೀಸರು ಟ್ರ್ಯಾಕ್ಟರ್ ಚಾಲಕ ವೇಗವಾಗಿ ಬ್ಯಾರಿಕೇಡ್ ಕಡೆ ಚಲಿಸಿ ಗುದ್ದಿದ್ದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ದೆಹಲಿಯ ಐಟಿಒ ಬಳಿ ನಡೆದ ಈ ಘಟನೆ ರಾಜದೀಪ್ ಅವರು ತಪ್ಪು ರೀತಿಯಲ್ಲಿ ವರದಿ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು.

ಮೃತ ವ್ಯಕ್ತಿಯ ಮೇಲೆ ತ್ರಿವರ್ಣ ಧ್ವಜ ಹೊದೆಸಿದ್ದ ರೈತರು, ವರದಿಗಾರರಾಗಿ ಕಣಕ್ಕಿಳಿದಿದ್ದ ರಾಜದೀಪ್ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಘಟನಾ ಸ್ಥಳಕ್ಕೆ ಬಂದು ವರದಿ ಮಾಡಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದ್ದರು.

ಟ್ರ್ಯಾಕ್ಟರ್ ಸವಾರನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆದರೆ ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆ ನಂತರ ತಿಳಿಯುತ್ತದೆ ಎಂದು ರಾಜದೀಪ್ ಟ್ವೀಟ್ ಮಾಡಿದ್ದು, ಇನ್ನೂ ಹಾಗೆ ಇದೆ

English summary
Rajdeep Sardesai, senior news anchor and consulting editor of India Today, has been taken off the air for two weeks for repeated violation of social media guidelines laid down by the group, suggests reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X