• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

|
   ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು | Oneindia Kannada

   ನವದೆಹಲಿ, ಸೆಪ್ಟೆಂಬರ್ 22: ಫ್ರಾನ್ಸ್ ಜತೆಗಿನ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ದೇಶದಾದ್ಯಂತ ತೀವ್ರ ವಿವಾದ ಸೃಷ್ಟಿಸಿದೆ.

   ಇದು ಯುಪಿಎ ಸರ್ಕಾರದ ಅವಧಿಯಲ್ಲಿ ರೂಪುಗೊಂಡು ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ಚಾಲನೆ ಪಡೆದ ಒಪ್ಪಂದವಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.

   ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

   ಅದರ ಕುರಿತು 'ಎಕನಾಮಿಕ್ ಟೈಮ್ಸ್' ಪತ್ರಿಕೆಯಲ್ಲಿ ರಕ್ಷಣಾ ಪರಿಣತ ಅಭಿಜಿತ್ ಅಯ್ಯರ್ ಮಿತ್ರ ಬರೆದ ಲೇಖನದ ಅವತರಣಿಕೆ ಇಲ್ಲಿದೆ.

   ಮೂರು ಅಂಶಗಳು, ಏಳು ಪ್ರಶ್ನೆಗಳು

   ಮೂರು ಅಂಶಗಳು, ಏಳು ಪ್ರಶ್ನೆಗಳು

   ರಫೇಲ್ ವಿವಾದವು ಸುತ್ತುತ್ತಿರುವುದು ಬೆಲೆ, ಅದರ ಯೋಗ್ಯತೆ ಮತ್ತು ಕೆಲಸದ ಹಂಚಿಕೆಯ ಮೂರು ಅಂಶಗಳ ಸುತ್ತ.

   ಬೆಲೆ ವಿಚಾರದಲ್ಲಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಒಂದನೆಯದು, ಅಂತಿಮವಾಗಿ ಒಪ್ಪಿಕೊಂಡ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿರುವುದರ ಬಗ್ಗೆ. ಮತ್ತೊಂದು, ಅಂತಿಮ ಬೆಲೆಯು ತೆರಿಗೆದಾರನಿಗೆ ಸ್ವಲ್ಪ ಹಣ ಉಳಿಸುತ್ತದೆ ಎಂಬ ಭಾರತ ಸರ್ಕಾರದ ಹೇಳಿಕೆ ಬಗ್ಗೆ.

   ಒಪ್ಪಂದ ಯುಕ್ತತೆ ವಿಚಾರದಲ್ಲಿ ಪ್ರಕ್ರಿಯೆ ಉಲ್ಲಂಘನೆ ವಿಚಾರದಲ್ಲಿ ಮೂರು ಸಂಗತಿಗಳ ಮೇಲೆ ಆರೋಪಿಸಲಾಗಿದೆ. ಒಂದು, ರಫೇಲ್ ಬದಲು ಯೂರೋಫೈಟರ್‌ಅನ್ನು ಏಕೆ ಪರಿಗಣಿಸಲಿಲ್ಲ? ಎರಡನೆಯದು, ಇಡೀ ಒಪ್ಪಂದವನ್ನು ಏಕೆ ಹಠಾತ್ತನೆ ಕೈಬಿಡಲಾಯಿತು? ಮೂರನೆಯದು, ಯಾವುದೇ ಸ್ಪರ್ಧೆ ಇಲ್ಲದ ಮತ್ತು ಸಂಖ್ಯೆಗಳನ್ನು ಕಡಿತಗೊಳಿಸಿದ ಹೊಸ ಒಪ್ಪಂದದ ಸಂಪುಟ ಅನುಮೋದನೆಗೆ ಏಕೆ ಮುಂದಾಗಲಿಲ್ಲ?

   ಕೆಲಸ ಹಂಚಿಕೆ ವಿಚಾರದಲ್ಲಿಯೂ ಎರಡು ಪ್ರಶ್ನೆಗಳಿವೆ. ಒಂದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಅನ್ನು ಏಕೆ ಪರಿಗಣಿಸಲಿಲ್ಲ? ಮತ್ತು ರಿಲಯನ್ಸ್‌ಅನ್ನು ಏಕೆ ಆಯ್ದುಕೊಂಡಿದ್ದು?

   ಕೂಲಂಕಷ ಪರಿಶೀಲನೆ ನಡೆಸಿದಾಗ ಈ ಮೂರೂ ಪ್ರಶ್ನೆಗಳು ಕೃತಕ ಎನಿಸುತ್ತವೆ. ಮುಖ್ಯವಾಗಿ ತಪ್ಪುಗಳು ಎನಿಸುತ್ತವೆ. ಪ್ರಕ್ರಿಯೆಯ ಸಂಪೂರ್ಣ ಜ್ಞಾನದ ಕೊರತೆಯಿಂದ ಈ ರೀತಿಯ ಪ್ರಶ್ನೆಗಳು ಉದ್ಭವಿಸುತ್ತವೆ.

   ಮೋದಿ ಮೇಲೆ ರಾಹುಲ್ 'ರಫೇಲ್' ಅಟ್ಯಾಕ್! ಟ್ವೀಟ್ ಏಟು!

   ದರ ಹೆಚ್ಚಳ ಮಾಧ್ಯಮಗಳ ಸೃಷ್ಟಿ

   ದರ ಹೆಚ್ಚಳ ಮಾಧ್ಯಮಗಳ ಸೃಷ್ಟಿ

   2012ರ ಏಪ್ರಿಲ್‌ನಲ್ಲಿ ಫ್ರೆಂಚ್ ಸೆನೆಟ್ ಸಿದ್ಧಪಡಿಸಿದ ಅಂಕಿಅಂಶಗಳ ಆಧಾರದಲ್ಲಿ ಒಂದು ವಿಮಾನದ ಅಂತಿಮ ಬೆಲೆ 212 ಮಿಲಿಯನ್ ಡಾಲರ್‌ಗಿಂತ ಕಡಿಮೆ ಇರುವಂತಿಲ್ಲ. ಆದರೂ ಮಾಧ್ಯಮಗಳು 126 ವಿಮಾನಗಳು 10.4 ಬಿಲಿಯನ್ ಡಾಲರ್‌ಗೆ ಅಂದರೆ, ಒಂದು ವಿಮಾನಕ್ಕೆ 82.5 ಮಿಲಿಯನ್ ಡಾಲರ್‌ನಂತೆ ಸಿಗಲಿವೆ ಎಂದು ವರದಿ ಮಾಡಿದವು.

   2013ರ ಏಪ್ರಿಲ್‌ನಲ್ಲಿ ಇದೇ ಮಾಧ್ಯಮಗಳು ಶೇ 50ರಷ್ಟು ಹೆಚ್ಚಿಸಿ, ಪ್ರತಿ ಯುನಿಟ್‌ಗೆ 119 ಮಿಲಿಯನ್ ಡಾಲರ್ ಎಂದು ವರದಿ ಮಾಡಿದವು. 2014ರಲ್ಲಿ ಈ ಬೆಲೆ ಏಕಾಏಕಿ ಶೇ 300ರಷ್ಟು ಹೆಚ್ಚಿಸಿ, ಅಂದರೆ ಯುನಿಟ್‌ಗೆ 238 ಮಿಲಿಯನ್ ಡಾಲರ್ ಎಂದು ವರದಿ ಮಾಡಿದವು.

   ಭಾರತ ಸರ್ಕಾರ ಅಂತಿಮವಾಗಿ ನೀಡಿದ ಬೆಲೆ 36 ವಿಮಾನಗಳಿಗೆ 8.7 ಬಿಲಿಯನ್ ಡಾಲರ್ ( ಪ್ರತಿ ಯುನಿಟ್‌ಗೆ 243 ಮಿಲಿಯನ್ ಡಾಲರ್).

   ಎಚ್‌ಎಎಲ್‌ಗೆ ಸಿಗದ ಅವಕಾಶ: ಸಚಿವೆ ನಿರ್ಮಲಾ ಸುಳ್ಳು ಹೇಳಿದರೇ?

   ಹಣ ಉಳಿತಾಯಕ್ಕೆ ಪ್ರಯತ್ನ

   ಹಣ ಉಳಿತಾಯಕ್ಕೆ ಪ್ರಯತ್ನ

   ವೆಚ್ಚದಲ್ಲಿ ಉಳಿತಾಯ ಮಾಡುವ ಸಲುವಾಗಿ ಯುಪಿಎ ಸರ್ಕಾರ 5 ಮಿಲಿಯನ್ ಡಾಲರ್‌ ಅಂತಿಮ ದರಕ್ಕಾಗಿ ಕೊನೆಯ ಸುತ್ತಿನ ಚೌಕಾಸಿ ನಡೆಸಿತ್ತು.

   ಆದರೆ, ಇದು ದೊಡ್ಡ ಮಟ್ಟದ ಉಳಿತಾಯವನ್ನೇನೂ ಮಾಡುತ್ತಿರಲಿಲ್ಲ. ಅಲ್ಲದೆ, ಅದರಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಕನಿಷ್ಠ ಮೂರು ನಿರ್ದಿಷ್ಟ ಮಾರ್ಪಾಡುಗಳು, ತರಬೇತಿ ಮತ್ತು ಐದು ವರ್ಷದ ನಿರ್ವಹಣಾ ಪ್ಯಾಕೇಜ್ಅನ್ನು ಒಳಗೊಂಡಿತ್ತು. ಜತೆಗೆ ಶೇ 50ರಷ್ಟು ಆಫ್‌ಸೆಟ್ ಒಪ್ಪಂದವಿತ್ತು. ಮೇಲ್ನೋಟಕ್ಕೆ ಇವು ಕೂಡ ವಾಸ್ತವ ದರ ಉಳಿತಾಯಕ್ಕೇ ಸೇರಿಕೊಳ್ಳುತ್ತಿದ್ದವು.

   ಬೇರೆ ದೇಶಗಳು ನೀಡಿದ್ದೆಷ್ಟು?

   ಬೇರೆ ದೇಶಗಳು ನೀಡಿದ್ದೆಷ್ಟು?

   ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಹೇಗೆಂದರೆ, ಉಳಿದ ದೇಶಗಳು ಎಷ್ಟು ಹಣ ನೀಡಿದ್ದವು ಎಂಬುದರ ಮೂಲಕ. ಕತಾರ್ ಪ್ರತಿ ಯುನಿಟ್‌ಗೆ 292 ಮಿಲಿಯನ್ ಡಾಲರ್‌ನಂತೆ ರಫೇಲ್‌ಅನ್ನು ಖರೀದಿಸಿತ್ತು. ಅದರ ಜತೆಗೆ ವಿಸ್ತೃತ ತರಬೇತಿ ನಿರ್ವಹಣೆ ಮತ್ತು ಶಸ್ತ್ರಾಸ್ತ್ರ ಪ್ಯಾಕೇಜ್ ಒಳಗೊಂಡಿದ್ದವು, ಆದರೆ, ಅದರಲ್ಲಿ ಆಫ್‌ಸೆಟ್ ಅಥವಾ ಕೆಲಸ ಹಂಚಿಕೆ ಇರಲಿಲ್ಲ.

   ಈಜಿಪ್ಟ್ 246 ಮಿಲಿಯನ್‌ ಡಾಲರ್‌ನಂತೆ ವಿಮಾನ ಖರೀದಿಸಿದ್ದರೆ, ಭಾರತ 243 ಮಿಲಿಯನ್ ಡಾಲರ್ ನೀಡಿದೆ. ಕತಾರ್‌ಗಿಂತ ಕಡಿಮೆ ವೆಚ್ಚದ ಪ್ಯಾಕೇಜ್ ಇದು. ಆದರೆ, ಶೇ 50ರಷ್ಟು ಆಫ್‌ಸೆಟ್ ಮತ್ತು ಭಾರತಕ್ಕೆ ಬೇಕಾದಂತೆ ನಿರ್ದಿಷ್ಟ ಮಾರ್ಪಾಡುಗಳನ್ನು ಒಳಗೊಂಡಿದೆ.

   ಇವುಗಳನ್ನು ನೋಡಿದಾಗ ರಫೇಲ್ ಒಪ್ಪಂದ ಹೆಚ್ಚು ಚೌಕಾಸಿಯೊಂದಿಗೆ ನಡೆಸಿದ ಉತ್ತಮ ಸಮತೋಲಿತ ಒಪ್ಪಂದ ಎನಿಸುತ್ತದೆ.

   ಯೂರೋಫೈಟರ್ ಒಪ್ಪಂದ ಏಕೆ ಆಗಲಿಲ್ಲ?

   ಯೂರೋಫೈಟರ್ ಒಪ್ಪಂದ ಏಕೆ ಆಗಲಿಲ್ಲ?

   ಈ ಒಪ್ಪಂದದ ಯುಕ್ತತೆಯನ್ನು ಪ್ರಶ್ನಿಸುವವರು ಇದು 2013ರಲ್ಲಿ ಯುಪಿಎ ಸರ್ಕಾರದಿಂದ ಡೆಫೆನ್ಸ್ ಪ್ರೊಕ್ಯೂರ್‌ಮೆಂಟ್ ಪಾಲಿಸಿ (ಡಿಪಿಪಿ) ಅಡಿಯಲ್ಲಿ ಸಿದ್ಧವಾಗಿದ್ದು, ಮತ್ತು 2016ರಲ್ಲಿ ಸಹಿ ಹಾಕುವ ಮೂಲಕ ಜಾರಿಗೆ ಬಂದಿದ್ದು ಎಂಬುದನ್ನು ತಿಳಿದುಕೊಳ್ಳಬೇಕು.

   ಎನ್‌ಡಿಎಯ 2016ರ ಡಿಪಿಪಿ 2016-17ರಲ್ಲಿ ಜಾರಿಗೆ ಬಂದಿತು. ಇಷ್ಟೆಲ್ಲಾ ಆರೋಪಗಳನ್ನು ನಡೆಸಿದ್ದರೂ ಯಾವ ಕಡೆ ಡಿಪಿಪಿ ಉಲ್ಲಂಘನೆಯಾಗಿದೆ ಎಂಬುದನ್ನು ಒಬ್ಬರೂ ಉಲ್ಲೇಖಿಸಿಲ್ಲ.

   ಹಾಗೆ ಹೇಳುವುದಾದರೆ ಎಲ್ಲಿಯೂ ಉಲ್ಲಂಘನೆಯಾಗಿಲ್ಲ. 2013ರ ಡಿಪಿಪಿಯಲ್ಲಿ ಉತ್ಪಾದನೆಯ ಹೊರತಾಗಿ ಯೂರೋಫೈಟರ್ (ಎಲ್2) ಅನ್ನು ತರಲು ಅವಕಾಶವಿಲ್ಲ. ಹೀಗಾಗಿ ಮೊದಲು ಹೇಳಿದ ದರದಲ್ಲಿ ವಿಮಾನ ಪೂರೈಸುವುದು ದಸಾಲ್ಟ್‌ಗೆ ಸಾಧ್ಯವಿಲ್ಲದೆ ಹೋದರೆ, ರಫೇಲ್‌ನಲ್ಲಿ ಯೂರೋಫೈಟರ್ ಕೆಲಸ ಹಂಚಿಕೆಯನ್ನು ಪಡೆದುಕೊಳ್ಳಬೇಕು. ಇದೊಂದು ರೀತಿ ತನ್ನ ಕಡು ಸ್ಪರ್ಧಿಯೊಂದಿಗೆ ವ್ಯಾಪಾರ ಮತ್ತು ಉತ್ಪಾದನೆಯ ರಹಸ್ಯಗಳನ್ನು ಹಂಚಿಕೊಳ್ಳುವಂತೆ.

   ನಿಜ. ಯೂರೋಫೈಟರ್ ಕೊನೆಯ ಹಂತದಲ್ಲಿ ಮೊದಲು ಹೇಳಿದ್ದಕ್ಕಿಂತ ಶೇ 20ರಷ್ಟು ಕಡಿಮೆ ಮೌಲ್ಯದ ಪರಿಷ್ಕೃತ ಪ್ರಸ್ತಾವವನ್ನು ಕೊನೆಯ ಕ್ಷಣದಲ್ಲಿ ಮುಂದಿಟ್ಟಿತು. ಆದರೆ, ಡಿಪಿಪಿಯಲ್ಲಿ ನಮೂದಿಸಿರುವಂತೆ ದರ ಸಮರಕ್ಕೆ ಆಸ್ಪದ ಕೊಡುವ ಅವಕಾಶವಿಲ್ಲದ ಕಾರಣ ಯುಪಿಎ ಸರ್ಕಾರ ಅದನ್ನು ತಿರಸ್ಕರಿಸಿತು.

   ಮುಖ್ಯವಾಗಿ, ರಫೇಲ್ ತಯಾರಿಕೆಯಲ್ಲಿ ಪಾಲುದಾರನಾಗಿ ಇರಿಸಿಕೊಳ್ಳುವುದರ ಹೊರತಾಗಿ ಯಾವುದೇ ವಿಚಾರದಲ್ಲಿ ಯೂರೋಫೈಟರ್‌ಅನ್ನು ತರುವುದು ಪ್ರಕ್ರಿಯೆಯ ಉಲ್ಲಂಘನೆಯಾಗುತ್ತಿತ್ತು.

   ಯಾವ ಉಲ್ಲಂಘನೆಯೂ ಆಗಿಲ್ಲ

   ಯಾವ ಉಲ್ಲಂಘನೆಯೂ ಆಗಿಲ್ಲ

   126 ವಿಮಾನಗಳಿಗೆ 30 ಬಿಲಿಯನ್ ಡಾಲರ್ ವೆಚ್ಚ ಭಾರತಕ್ಕೆ ಅನೇಕ ವರ್ಷಗಳವರೆಗೆ ಬಹುದೊಡ್ಡ ಬಂಡವಾಳ ಹೂಡಿಕೆಯ ಹೊರೆಯಾಗುತ್ತಿತ್ತು. ಮುಖ್ಯವಾಗಿ ಡಿಪಿಪಿಯಲ್ಲಿ ಇದಕ್ಕೆ ಅವಕಾಶ ನೀಡದೇ ಇದ್ದರೆ ಅದಕ್ಕೆ ಅನುಮೋದನೆಯೇ ದೊರಕುವುದಿಲ್ಲ. ಹೀಗಿರುವಾಗ ಯಾವ ಪ್ರಕ್ರಿಯೆ ಉಲ್ಲಂಘನೆಯಾಗಲು ಸಾಧ್ಯ?

   ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಹೊಸ ಒಪ್ಪಂದಕ್ಕೆ ಸಹಿಹಾಕಿತ್ತು. 2016ರಲ್ಲಿ ರಫೇಲ್ ಖರೀದಿಗಾಗಿ ನಡೆಸಿದ ಅಂತರ್ ಸರ್ಕಾರಿ ಒಪ್ಪಂದಗಳು 2013ರ ಡಿಪಿಪಿಯ ಆರ್ಟಿಕಲ್ 71 ಮತ್ತು 72ರ ಅಡಿಯಲ್ಲಿಯೇ ಇದ್ದವು.

   ಹೀಗಾಗಿ ಆರೋಪಗಳನ್ನು ತೂರುತ್ತಿರುವವರು ಸಂಬಂಧಿತ ಸೆಕ್ಷನ್‌ಗಳನ್ನು ಹೇಗೆ ಓದುವುದು ಎಂಬುದನ್ನು ಮರೆತಿದ್ದಾರೆ. ಈ ವರ್ಗದಲ್ಲಿ ಯಾವುದೇ ಖರೀದಿಗಳನ್ನು ನಡೆಸಲು ಡಿಫೆನ್ಸ್ ಪ್ರೊಕ್ಯೂರ್‌ಮೆಂಟ್ ಬೋರ್ಡ್ (ಡಿಪಿಬಿ), ಡಿಫೆನ್ಸ್ ಅಕ್ಯುಸಿಷನ್ ಕೌನ್ಸಿಲ್ (ಡಿಎಸಿ) ಅಥವಾ ಸಿಸಿಎಸ್‌ನ ಅನುಮೋದನೆಯನ್ನು ಪಡೆದುಕೊಳ್ಳಲೇಬೇಕು.

   ಇವೆಲ್ಲವೂ ಕಾಂಪಿಟೆಂಟ್ ಫೈನಾನ್ಷಿಯಲ್ ಅಥಾರಿಟಿಯ (ಸಿಎಫ್‌ಎ) ಒಪ್ಪಿಗೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯ.

   ಎಚ್‌ಎಎಲ್‌ ಏಕಿಲ್ಲ? ರಿಲಯನ್ಸ್ ಏಕೆ?

   ಎಚ್‌ಎಎಲ್‌ ಏಕಿಲ್ಲ? ರಿಲಯನ್ಸ್ ಏಕೆ?

   ಏಕೆಂದರೆ ಅಂತಿಮ ವ್ಯಾವಹಾರಿಕ ಒಪ್ಪಂದ ನಡೆದಿರುವುದು ಕೈಗಾರಿಕಾ ರಕ್ಷಣಾ ಸರಕುಗಳ ಬಿಡಿಭಾಗಗಳಿಗಾಗಿ. ಇದು ಪಾಲುದಾರ ವಿಮಾನ ತಯಾರಿಕೆಗಾಗಿ ನಡೆದ ಒಪ್ಪಂದವಲ್ಲ. ಎಚ್‌ಎಎಲ್ ವಿಮಾನ ತಯಾರಿಕೆಯ ಕಾರ್ಯವನ್ನು ಮಾತ್ರ ನಿರ್ವಹಿಸುತ್ತದೆ.

   ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದಸಾಲ್ಟ್ ಡಿಫೆನ್ಸ್ ಸಂಸ್ಥೆಯಿಂದ 9 ಸಾವಿರ ಕೋಟಿ ವೆಚ್ಚದ ಆಫ್‌ಸೆಟ್ಸ್‌ ಕೆಲಸವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ರಿಲಯನ್ಸ್ ಉಳಿದ 21 ಸಾವಿರ ಕೋಟಿಯ ಕೆಲಸದ ಲಾಭ ಪಡೆದುಕೊಂಡಿದೆ.

   ಇದ್ದದ್ದು ರಿಲಯನ್ಸ್ ಮಾತ್ರ

   ಇದ್ದದ್ದು ರಿಲಯನ್ಸ್ ಮಾತ್ರ

   ಎಲ್‌ ಆಂಡ್ ಟಿ, ಕಲ್ಯಾಣಿ, ಟಾಟಾ ಮತ್ತು ಭಾರತ್ ಫೋರ್ಜ್ ಕಂಪೆನಿಗಳ ಮಧ್ಯೆ ರಕ್ಷಣಾ ಸಾಧನಗಳ ತಯಾರಿಕೆಯಲ್ಲಿನ ಪ್ರಸ್ತುತ ತೊಡಗಿರುವ ಏಕೈಕ ಕಂಪೆನಿಯೆಂದರೆ ರಿಲಯನ್ಸ್ ಎಡಿಎಜಿ. ತನ್ನ ಕೈಗಾರಿಕಾ ಪಾಲುದಾರರನ್ನು ಆಯ್ಕೆ ಮಾಡುವುದು ದಸಾಲ್ಟ್‌ಗೆ ಬಿಟ್ಟ ವಿಚಾರವಾಗಿತ್ತು.

   ಆದರೆ, ಇದು ಸ್ವಜನಪಕ್ಷಪಾತದ ಆರೋಪಕ್ಕೆ ಉತ್ತರವಾಗಲಾರದು. 2012ರಲ್ಲಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಸಮೂಹದ ಜತೆ ಕೈಜೋಡಿಸಿ ಬಳಿಕ ಯುಪಿಎ ಆಡಳಿತದಲ್ಲಿ ಒಪ್ಪಂದ ಪಡೆದುಕೊಂಡಿರಬಹುದೇ? ಹಾಗಾಗಿದ್ದರೆ, ಅಂತಹ ಸ್ವಜನ ಪಕ್ಷಪಾತದ ವಿರುದ್ಧದ ಸಾಂಸ್ಥಿಕ ಸುರಕ್ಷತೆ ಏನು?

   -ಅಭಿಜಿತ್ ಅಯ್ಯರ್ ಮಿತ್ರ

   ಲೇಖಕರು ರಕ್ಷಣಾ ತಜ್ಞ ಮತ್ತು ಬರಹಗಾರ

   (ಕೃಪೆ- ಎಕನಾಮಿಕ್ ಟೈಮ್ಸ್)

   English summary
   There were many questions around Rafale deal controversy. But the truth is no government had violated the DPP agreement, defence expert writer abhijit iyer mitra writes.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X