ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ತುಂಬಿದ್ದ ಲಾರಿ ಪಲ್ಟಿ: 'ಉದ್ದೇಶಪೂರ್ವಕ' ಎಂದ ಹಾರ್ದಿಕ್ ಪಟೇಲ್

By Manjunatha
|
Google Oneindia Kannada News

Recommended Video

ಗುಜರಾತ್ ನ ಬರೂಚ್ ನಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಕ್ಕೆ ಆಕ್ಸಿಡೆಂಟ್ | Oneindia Kannada

ಅಹಮದಾಬಾದ್, ಡಿಸೆಂಬರ್ 22: ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಗುಜರಾತ್‌ನ ಬರೂಚ್ ನಲ್ಲಿ ಅಪಘಾತಕ್ಕೀಡಾಗಿ ಮತಯಂತ್ರಗಳಿಗೆ ಹಾನಿಯಾಗಿದೆ. ಮರುಮತಎಣಿಕೆಗೆ ಹಾರ್ದಿಕ್ ಪಟೇಲ್ ಬೆಂಬಲಿಗರು ಮನವಿ ಸಲ್ಲಿಸಿದ ಮರುದಿನವೇ ಈ ರೀತಿ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಹಾರ್ದಿಕ್ ಪಟೇಲ್ ಮೇಲೆ ಮತ್ತೊಂದು ಎಫ್ಐಆರ್ಹಾರ್ದಿಕ್ ಪಟೇಲ್ ಮೇಲೆ ಮತ್ತೊಂದು ಎಫ್ಐಆರ್

ಮತಯಂತ್ರಗಳು, ಮತಗಳನ್ನು ಪರಿಶೀಲಿಸಬಹುದಾಗಿದ್ದ ಪೇಪರ್ ಆಡಿಟ್ ಟ್ರಯಲ್ ಯಂತ್ರಗಳನ್ನು ಸಾಗಿಸುತ್ತಿದ್ದ ಲಾರಿ ಬರೂಚ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಮತಯಂತ್ರಗಳೆಲ್ಲಾ ನೆಲಕ್ಕೆ ಬಿದ್ದು ಕೆಲವಕ್ಕೆ ಹಾನಿಯಾಗಿವೆ.

Truck carrieng EVMs met with an accident in Gujarat's Bharuch

ಗುಜರಾತ್ ಫಲಿತಾಂಶ 'ಫಿಕ್ಸೆಡ್ ಮ್ಯಾಚ್', ಮರು ಮತಎಣಿಕೆಗೆ ಹಾರ್ದಿಕ್ ಆಗ್ರಹಗುಜರಾತ್ ಫಲಿತಾಂಶ 'ಫಿಕ್ಸೆಡ್ ಮ್ಯಾಚ್', ಮರು ಮತಎಣಿಕೆಗೆ ಹಾರ್ದಿಕ್ ಆಗ್ರಹ

ಇದೊಂದು ಉದ್ದೇಶಪೂರ್ವಕ ಅಪಘಾತ ಎಂದಿರುವ ಪಾಟೀದಾರ್ ಅನಾಮತ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಮರುಮತಎಣಿಕೆಗೆ ಅರ್ಜಿ ಸಲ್ಲಿಸುತ್ತಿದ್ದಂತೆ ಮತಯಂತ್ರ ತುಂಬಿದ್ದ ಲಾರಿ ಮುಗುಚಿ ಬಿದ್ದಿದೆ ಈ ಹಗರಣಕ್ಕೆ ಯಾವ ಹೆಸರು ಕೊಡುವುದು?' ಎಂದು ಪ್ರಶ್ನೆ ಮಾಡಿದ್ದಾರೆ.

ಮತಯಂತ್ರ ಮತ್ತು ವಿವಿಪಿಎಟಿ ಯಂತ್ರಗಳನ್ನು ಜಂಬೂಸರ್ ನಿಂದ ಬರೂಚ್‌ನ ದಾಸ್ತಾನು ಕೇಂದ್ರಕ್ಕೆ ಸಾಗಿಸುವುವಾಗ ಅಪಘಾತ ನಡೆದಿದೆ ಎಂದಿರುವ ಸ್ಥಳೀಯ ಜಿಲ್ಲಾಧಿಕಾರಿ ಸಂದೀಪ್ ಸೇಗಲ್ ಉರುಳಿ ಬಿದ್ದ ಲಾರಿಯಲ್ಲಿದ್ದವು ಬಳಸಿದ ಇವಿಎಂಗಳಲ್ಲ, ಯಾವುದಾದರೂ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದರೆ ಬದಲಾಯಿಸಲು ಇಟ್ಟಿದ್ದ ಮೀಸಲು ಮತಯಂತ್ರಗಳಷ್ಟೆ ಎಂದಿದ್ದಾರೆ.

ಲಾರಿಯಲ್ಲಿದ್ದ ಮೂವರು ಕಾರ್ಮಿಕರಿಗೆ ಗಾಯಗಳಾಗಿದೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

English summary
A truck carrying around 100 Electronic Voting Machines met with an accident near Bharuch in Gujarat. Hrdik Patel called this incident as 'Deliberate accident'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X