ಹಾಸ್ಯ : ಸೆಹ್ವಾಗ್ ದಾಖಲೆ ಮುರಿದ ಮೋದಿ, ರಾಹುಲ್ ಕಥೆ ಏನು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 11: ರಾಹುಲ್ ಗಾಂಧಿ ಇದ್ದ ಕಡೆ ಹಾಸ್ಯದ ಭಾಷಣಕ್ಕೇನು ಕೊರತೆ ಇಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ಆಡಿಕೊಂಡು ನಗುವವರ ಮುಂದೆ ಮುಗ್ಗರಿಸಿದಂಥ ಪರಿಸ್ಥಿತಿ ರಾಹುಲ್ ಅವರದ್ದಾಗಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸೋಲಿನ ನಂತರ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಟ್ರಾಲ್, ಮೀಮ್ಸ್, ಜೋಕ್ಸ್ ಅವರ ಸುತ್ತಾ ಸುತ್ತುತ್ತಿವೆ.

ಉತ್ತರಪ್ರದೇಶದಲ್ಲಿ ಸುಮಾರು 15 ವರ್ಷಗಳ ನಂತರ ಬಿಜೆಪಿ ಮತ್ತೊಮ್ಮೆ ಅಧಿಕಾರ ಸ್ಥಾಪಿಸಲು ಮುಂದಾಗಿದೆ. ಶನಿವಾರದದು ಎಲ್ಲೆಡೆ ಮುಂಚಿತವಾಗಿ ಗೆದ್ದವರ ಮುಖದಲ್ಲಿ ಗುಲಾಲ್ ಸೋತರವರ ಮುಖಕ್ಕೆ ಮಸಿ ಮೆತ್ತಿರುವುದು ಕಾಣಬಹುದಾಗಿದೆ. ಕಲ್ಯಾಣ್ ಸಿಂಗ್ ಕಾಲದಲ್ಲಿ ಸ್ಥಾನ ಗೆದ್ದಿದ್ದ ಬೆಜೆಪಿ ಈಗ ಭರ್ಜರಿ ಪ್ರದರ್ಶನ ನೀಡಿ ತ್ರಿಶತಕ ಬಾರಿಸಿದೆ.[ಟ್ವಿಟ್ಟರ್ ಜೋಕ್ಸ್: ರಾಹುಲ್ ಬಿಜೆಪಿಗೆ ವೋಟ್ ಮಾಡಿದ್ದಾರಾ?]

Live :ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ಈ ನಡುವೆ ಬಿಜೆಪಿಯ ಸ್ಟಾರ್ ಪ್ರಚಾರಕರ ಹೆಸರು ಬಹಿರಂಗಗೊಂಡಿದ್ದು, ಅದು ಬೇರೆ ಯಾರು ಅಲ್ಲ ಖುದ್ದು ರಾಹುಲ್ ಗಾಂಧಿ ಎಂಬ ಹಾಸ್ಯಮಯ ಟ್ವೀಟ್ ಗಳು ಹರಿದಾಡುತ್ತಿವೆ. ಮಿಕ್ಕಂತೆ ಅಖಿಲೇಶ್ ಜೊತೆ ದೋಸ್ತಿ ಬೆಳೆಸಿ ಸೈಕಲ್ ಹಳ್ಳಕ್ಕೆ ದೂಡಿದ ರಾಹುಲ್ ಗಾಂಧಿ ಮತ್ತೊಮ್ಮೆ ಹಾಸ್ಯಕ್ಕೀಡಾಗಿದ್ದಾರೆ. ಒಂದಿಷ್ಟು ಹಾಸ್ಯಮಯ ಸಂದೇಶಗಳು ಇಲ್ಲಿವೆ.. ಇವೆಲ್ಲವೂ ಕೇವಲ ತಮಾಷೆಗಾಗಿ

ಕೈ ಇಟ್ಟ ಕಡೆ ಇದೇ ಕಥೆ

ಕೈ ಇಟ್ಟ ಕಡೆ ಇದೇ ಕಥೆ

ಉತ್ತರಪ್ರದೇಶದಲ್ಲಿ 'ಕೈ' ಹಿಡಿದ ಕಾರಣ ಸೈಕಲ್ ಕಥೆ ಏನಾಗಿದೆ ನೋಡಿ

ಪನ್ ಜಾಬ್

ಪನ್ ಜಾಬ್

ರಾಹುಲ್ ಗಾಂಧಿ ಹೆಚ್ಚು ಪ್ರಚಾರ ಮಾಡದಿದ್ದರೂ ಪಂಜಾಬ್ ನಲ್ಲಿ ಒಳ್ಳೆ 'ಪನ್ 'ಜಾಬ್ ಮಾಡಿದ್ದು ವರ್ಕೌಟ್ ಆಗಿದೆ.

ಅಲೆಯಲ್ಲ ಇದು ಸುನಾಮಿ

ಅಲೆಯಲ್ಲ ಇದು ಸುನಾಮಿ

ಉತ್ತರಪ್ರದೇಶದಲ್ಲಿ ಮೋದಿ ಅಲೆ ಅಲ್ಲಲ್ಲ ಸುನಾಮಿ ಎದ್ದಿರುವುದು ಹೀಗೆ, ಬಿಜೆಪಿ ಮುನ್ನಡೆ ಸಾಧಿಸಿದ ಸಂದರ್ಭದಲ್ಲಿ ಹುಟ್ಟಿಕೊಂಡ ಟ್ರಾಲ್

ರಾಹುಲ್ ಮುರಿದ ದಾಖಲೆ

ರಾಹುಲ್ ಮುರಿದ ದಾಖಲೆ

ಮೋದಿ ಅವರು 300 ಗಡಿ ದಾಟಿ ಸೆಹ್ವಾಗ್ ದಾಖಲೆ ಮುರಿದರೆ, ರಾಹುಲ್ ಅವರು ತಮ್ಮದೇ ದಾಖಲೆ( ಸತತ ಸೋಲು) ಮುರಿದುಕೊಂಡಿದ್ದಾರೆ

ಬಿಜೆಪಿಯ ತಾರಾ ಪ್ರಚಾರಕ

ಬಿಜೆಪಿಯ ತಾರಾ ಪ್ರಚಾರಕ

ಬಿಜೆಪಿಯ ತಾರಾ ಪ್ರಚಾರಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಚಿನ್ಹೆ ತೋರಿಸುತ್ತಿದ್ದಾರೆ ನೋಡಿ

ಯಾದವರ ಸೋಲು

ಯಾದವರ ಸೋಲು

ನನ್ನನ್ನು ಮೋದಿ ಸೋಲಿಸಿಲ್ಲ, ಸೋಲಿಸಿದ್ದು ಇವನು ಎಂದು ರಾಹುಲ್ ಗಾಂಧಿ ಚಿತ್ರ ತೋರಿಸುವ ಫಲಕ ಹಿಡಿದ ಅಖಿಲೇಶ್ ಯಾದವ್.

ಮನ ಗೆದ್ದ ತ್ರಿಶತಕ

ಮನ ಗೆದ್ದ ತ್ರಿಶತಕ

ಸೆಹ್ವಾಗ್ ತ್ರಿಶತಕ, ಕರುಣ್ ನಾಯರ್ 303ರನ್ ಹಾಗೂ ಯುಪಿಯಲ್ಲಿ ಬಿಜೆಪಿ 300ಪ್ಲಸ್ ಎಲ್ಲವೂ ಹೃದಯ ಗೆದ್ದಿದೆ.

ಕುರ್ಚಿ ಬಿಡಲ್ವಂತೆ

ಸೋತ ಮೇಲೂ ಅಖಿಲೇಶ್ ಯಾದವ್ ಕುರ್ಚಿ ಬಿಡಲ್ವಂತೆ ನೋಡಿ

ಸೋತವರ ಸ್ಥಿತಿ ಗತಿ

ಉತ್ತರಪ್ರದೇಶದಲ್ಲಿ ಸೋತ ಎಸ್ ಪಿ, ಬಿ ಎಪಿ ಹಾಗೂ ಕಾಂಗ್ರೆಸ್ ಸ್ಥಿತಿ ಹೇಗಿದೆ ನೋಡಿ

ಅಖಿಲೇಶ್ ಗೆ ಥ್ಯಾಂಕ್ಸ್

ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ನೀಡಿದ್ದ ಅಖಿಲೇಶ್ ಗೆ ಥ್ಯಾಂಕ್ಸ್

ರಾಗಾ ಮಾಡಿದ್ದಾದರೂ ಏನು?

ಅಖಿಲೇಶ್ ಗೆ ರಾಹುಲ್ ಗಾಂಧಿ ಮೈತ್ರಿ ಮೈತ್ರಿ ಎಂದು ಏನು ಮಾಡಿದ್ದಾರೆ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Trolls Memes Funny Tweets on Uttar Pradesh Assembly Election Results 2017 : BJP victory, SP, Congress defeat
Please Wait while comments are loading...