ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನು ಮಾರಿ ಟ್ರೋಲ್ ಆದ ಹುಡುಗಿ ಈಗ ramp ಮೇಲೆ!

|
Google Oneindia Kannada News

ತಿರುವನಂತಪುರಂ, ಆಗಸ್ಟ್ 02: ಕೇರಳದ ತಿರುವನಂತಪುರಂನಲ್ಲಿ ಯೂನಿಫಾರ್ಮ್ ತೊಟ್ಟು ಮೀನು ಮಾರುತ್ತಿದ್ದ ಹುಡುಗಿಯೊಬ್ಬಳ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿತ್ತು. ಆ ಹುಡುಗಿ ಇದೀಗ ramp ವಾಕ್ ಮಾಡುವ ಮೂಲಕ ಟ್ರೋಲಿಗರಿಗೆ ಚಾಟಿ ಏಟು ಕೊಟ್ಟಿದ್ದಾರೆ.

ಟ್ರೋಲಿಗೆ ಕಡಿವಾಣ ಹಾಕಿ: ಅತ್ಯಾಚಾರದ ಬೆದರಿಕೆಗೆ ಟ್ವಿಟ್ಟಿಗರ ಆಕ್ರೋಶಟ್ರೋಲಿಗೆ ಕಡಿವಾಣ ಹಾಕಿ: ಅತ್ಯಾಚಾರದ ಬೆದರಿಕೆಗೆ ಟ್ವಿಟ್ಟಿಗರ ಆಕ್ರೋಶ

ತನ್ನ ದೈನಂದಿನ ಖರ್ಚಿಗಾಗಿ ದುಡಿಯುತ್ತಿದ್ದ ಹುಡುಗಿಯ ಚಿತ್ರವನ್ನು ಟ್ರೋಲ್ ಮಾಡಿ, ಹಾಸ್ಯ ಮಾಡಿಕೊಂಡು ನಕ್ಕವರಿಗೆಲ್ಲ ಟ್ವಿಟ್ಟಿಗರು ತಪರಾಕಿ ಕೊಟ್ಟಿದ್ದರು. ಈ ವಿಷಯ ಅದೆಷ್ಟು ಗಂಭೀರ ಸ್ವರೂಪ ಪಡೆಯಿತು ಅಂದ್ರೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ಇದು ತಲುಪಿತು. ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಟ್ರೋಲ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಮುಖ್ಯಮಂತ್ರಿ ಆದೇಶಿಸಿದ್ದರು.

ಹನಾನ್ ಹಮಿದ್ ಎಂಬ 21 ವರ್ಷದ ಈಕೆ ತನ್ನ ಜೀವನಕ್ಕಾಗಿ ಮೀನು ಮಾರಿದ್ದರಲ್ಲಿ ಹಾಸ್ಯಾಸ್ಪದ ಎನ್ನುವಂಥದ್ದು ಏನಿದೆ? ಈ ವಯಸ್ಸಿನಲ್ಲಿಯೇ ತನ್ನ ಆಹಾರವನ್ನು ತಾನೇ ದುಡಿದುಕೊಳ್ಳುತ್ತಿರುವ ಆಕೆಯ ಸ್ವಾಭಿಮಾನಕ್ಕೆ ಗೌರವ ನೀಡಿ ಎಂದು ಟ್ರೋಲಿಗರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು.

Trolled Hanan Hamid walks ramp at Kerala Khadi Mela

ಕೆಲವರು ಇವೆಲ್ಲ ಆಕೆಯ ಪಬ್ಲಿಸಿಟಿ ಸ್ಟಂಟ್ ಎಂದಿದ್ದರು! ಹನಾನ್ ಹಮಿದ್ ಇದೀಗ ತಿರುವನಂತಪುರಂನ ಓಣಮ್ ಬಕ್ರಿದ್ ಖಾದಿ ಎಕ್ಸ್ ಪೋ ನಲ್ಲಿ ramp ವಾಕ್ ಮಾಡುವ ಮೂಲಕ ತಾನು ಟ್ರೋಲಿಗರಿಗೆ ಕ್ಯಾರೇ ಎನ್ನೋಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

English summary
21-year-old college student, Hanan Hamid, who was trolled on social media for selling fish in uniform after college, walked the ramp at Onam Bakrid Khadi Expo in Thiruvananthapuram on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X