ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸಿಜನ್ ಕೊರತೆ, ಸಾವು: ರಾಹುಲ್ ಆರೋಪಕ್ಕೆ ಸಂಬಿತ್ ಪಾತ್ರ ಉತ್ತರ

|
Google Oneindia Kannada News

ನವದೆಹಲಿ, ಜುಲೈ 21: ಕೊರೊನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಆಮ್ಲಜನಕ ಕೊರತೆ ವಿಚಾರದಲ್ಲಿ ವಿವಿಧ ರಾಜ್ಯಗಳು ಕೇಂದ್ರ ಸರ್ಕಾರವನ್ನು ಗುರಿಯಾಗಿಸುತ್ತಿದೆ. ಆದರೆ ಇದೇ ಆಮ್ಲಜನಕ ವಿಚಾರ ಹೊಸ ರಾಜಕೀಯ ತಿರುವನ್ನು ಪಡೆದಿದೆ.

ರಾಹುಲ್ ಗಾಂಧಿ ದ್ವಂದ್ವ ಮನೋಭಾವ ಹೊಂದಿದ್ದಾರೆ, ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಹೈಕೋರ್ಟ್‌ನಲ್ಲಿ ಒಂದೇ ರೀತಿಯಲ್ಲಿ ಮಾತನಾಡಿದರೆ, ಟಿವಿ-ಸೋಷಿಯಲ್ ಮೀಡಿಯಾದಲ್ಲಿ ಬೇರೆ ರೀತಿಯೇ ಮಾಡನಾಡುತ್ತಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಮಾತ್ರಾ ಹೇಳಿದ್ದಾರೆ.

ಎಲ್ಲಿದೆಯೋ ಲಸಿಕೆ ಅಣ್ಣ; ಭಾರತದಲ್ಲಿ ಅಂಕಿ-ಸಂಖ್ಯೆಗಳೇ ಬಯಲು ಮಾಡುತ್ತೆ ಸರ್ಕಾರದ ಬಣ್ಣ?ಎಲ್ಲಿದೆಯೋ ಲಸಿಕೆ ಅಣ್ಣ; ಭಾರತದಲ್ಲಿ ಅಂಕಿ-ಸಂಖ್ಯೆಗಳೇ ಬಯಲು ಮಾಡುತ್ತೆ ಸರ್ಕಾರದ ಬಣ್ಣ?

ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವಿನ ಕುರಿತು ಅಂಕಿ-ಅಂಶಗಳನ್ನು ನೀಡುವಂತೆ ವೇಣುಗೋಪಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿವ ಡಾ. ಭಾರ್ತಿ ಪ್ರವೀಣ್ ಕುಮಾರ್ ಆಮ್ಲಜನಕ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದರು.

 Troll Rahul Gandhi Spread Lies, Confusion Over Vaccines, Pandemic: Sambit Patra

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ ಸಚಿವಾಲಯಕ್ಕೆ ನಿಯಮಿತವಾಗಿ ಮಾಹಿತಿ ನೀಡುತ್ತಿದೆ, ಇದರ ಅನ್ವಯ ದೇಶದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಒಂದೇ ಒಂದು ಸಾವು ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಇದೀಗ ಕಾಂಗ್ರೆಸ್ ಆರೋಪದ ವಿಚಾರವಾಗಿ ಮಾತನಾಡಿರುವ ಸಂಬಿತ್ ಪಾತ್ರಾ, ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶವು ಇಂತಹ ಸಾವಿನ ಬಗ್ಗೆ ಮಾಹಿತಿ ಕಳುಹಿಸಿಲ್ಲ ಎಂದು ಹೇಳುತ್ತಿದೆ. ಇದಕ್ಕೆ ಯಾವುದೇ ಅಂಕಿ-ಅಂಶಗಳು ದಾಖಲೆಯಾಗಿ ಸಿಕ್ಕಿಲ್ಲ. ಇದರಿಂದ ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಅವರಿಗೆ ತರಾಟೆ ತೆಗೆದುಕೊಂಡ ಸಂಬಿತ್ ಪಾತ್ರಾ, ಆಮ್ಲಜನಕದ ಕೊರತೆಯಿಂದಾಗಿ ಒಬ್ಬ ರೊಗಿ ಸಾವನ್ನಪ್ಪಿದ್ದಾನೆ ಎಂದು ನಿಮ್ಮ ಸರ್ಕಾರವು ಕೇಂದ್ರಕ್ಕೆ ಕೊಟ್ಟ ದಾಖಲೆಯಲ್ಲಿ ಲಿಖಿತವಾಗಿ ಹೀಳಿದ್ದೀರಾ?, ಇದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಿಷಯ ನಾವು ಕೇವಲ ರಾಜ್ಯ ಡೇಟಾವನ್ನು ಸಂಗ್ರಹಿಸುತ್ತೇವೆ.

ರಾಜ್ಯಗಳು/ ಯುಟಿಗಳು ತಮ್ಮ ಸಾವಿನ ಅಂಕಿ-ಅಂಶಗಳನ್ನು ವರದಿ ಮಾಡುವ ಆಧಾರದ ಮೇಲೆ ನಾವು ಮಾರ್ಗಸೂಚಿಯನ್ನು ಹೊರಡಿಸಿದ್ದೇವೆ ಎಂದು ಹೇಳಿದ್ದಾರೆ.

English summary
A day after the Modi government faced backlash from the opposition over a written reply in Rajya Sabha in which the government claimed that no death was reported by states due to lack of oxygen, the BJP today hit back saying that the Centre is only keeping a record of data sent by the states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X