ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರ: ಮಾಣಿಕ್ ಅಧಿಪತ್ಯಕ್ಕೆ ಅಂತ್ಯ ಹಾಡಲು ಮೋದಿ ಕರೆ

By Mahesh
|
Google Oneindia Kannada News

ಅಗರ್ತಲ, ಫೆಬ್ರವರಿ 08: ಈಶಾನ್ಯ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪ್ರಚಾರ ಕಾರ್ಯ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಂದು ಸೋನಮುರಾದಲ್ಲಿ ಪ್ರಚಾರ ಭಾಷಣ ಮಾಡಿದ್ದು, ಮಾಣಿಕ್ ಸರ್ಕಾರ್ ಯುಗ ಅಂತ್ಯಗೊಳ್ಳಲಿದೆ ಎಂದರು.

ಫೆಬ್ರವರಿ 18 ರಂದು ತ್ರಿಪುರದಲ್ಲಿ ನಡೆಯಲಿರುವ ಚುನಾವಣೆಗಾಗಿ ಪ್ರಚಾರ ನಡೆಸಲು ಬಂದಿರುವ ಮೋದಿ ಅವರು ತಮ್ಮ ಭಾಷಣದಲ್ಲಿ ಉದ್ಯೋಗ ನೇಮಕಾತಿ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದು ಗಮನಾರ್ಹವಾಗಿತ್ತು.

ಚುನಾವಣಾ ಸಮೀಕ್ಷೆ: ತ್ರಿಪುರಾದಲ್ಲಿ ಸಿಪಿಐ (ಎಂ) ಪತನ ಚುನಾವಣಾ ಸಮೀಕ್ಷೆ: ತ್ರಿಪುರಾದಲ್ಲಿ ಸಿಪಿಐ (ಎಂ) ಪತನ

ಈ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ತ್ರಿಪುರದ ಜನತೆ ಸ್ಪರ್ಧಿಸುತ್ತಿದೆ. 8 ಲಕ್ಷಕ್ಕೂ ಅಧಿಕ ನಿರುದ್ಯೋಗಿ ಯುವ ಜನಾಂಗ ಹಾಗೂ ಸರ್ಕಾರಿ ನೌಕರರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದಾರೆ ಎಂದರು.

Tripura doesn't deserve any 'Manik', says PM Modi

ಮಾಣಿಕ್ ಸರ್ಕಾರದ ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದ ಬಗ್ಗೆ ಮಾತನಾಡಿದ ಮೋದಿ, ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣವನ್ನು ಈ ಹಗರಣದಿಂದ ಉಳ್ಳವರು ದೋಚಿದ್ದಾರೆ. ಸುಮಾರು 14 ಲಕ್ಷಕ್ಕೂ ಅಧಿಕ ಸಂತ್ರಸ್ತರು ಇದರಲ್ಲಿ ಹಣ ಕಳೆದುಕೊಂಡಿದ್ದಾರೆ. ಬಡವರನ್ನು ದೋಚಿದವರಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಹವಾ: ತಿಳಿಯಬೇಕಾದ 8 ಸಂಗತಿ ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಹವಾ: ತಿಳಿಯಬೇಕಾದ 8 ಸಂಗತಿ

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 2014ರ ನಂತರ ಇದೇ ಮೊದಲ ಬಾರಿಗೆ ತ್ರಿಪುರದಲ್ಲಿ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದು ವಿಶೇಷ. ಫೆಬ್ರವರಿ 15ರಂದು ಮತ್ತೊಂದು ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ.

ಮೊಬೈಲ್ ಕೂಡ ಬಳಸದ ಈ ಮುಖ್ಯಮಂತ್ರಿ ಬ್ಯಾಂಕ್ ಬ್ಯಾಲೆನ್ಸ್ ರು. 2410 ! ಮೊಬೈಲ್ ಕೂಡ ಬಳಸದ ಈ ಮುಖ್ಯಮಂತ್ರಿ ಬ್ಯಾಂಕ್ ಬ್ಯಾಲೆನ್ಸ್ ರು. 2410 !

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ದಶಕಗಳ ಕಾಲ ಅಧಿಪತ್ಯ ನಡೆಸಿದ ಸಿಪಿಐ ಎಂ ಸರ್ಕಾರ ನೆಲಕಚ್ಚಲಿದ್ದು, ಬಿಜೆಪಿ- ಐಪಿಎಫ್ ಟಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಲಭಿಸಲಿದೆ ಎನ್ನಲಾಗಿದೆ. ಮಾರ್ಚ್ 03ರಂದು ಫಲಿತಾಂಶ ಪ್ರಕಟವಾಗಲಿದೆ.

English summary
Prime Minister Narendra Modi on Thursday begins addressing in Tripura's Sonamura ahead of assembly elections in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X