ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರಾ ವಿಧಾನಸಭೆ ಚುನಾವಣೆ : ಶೇ 74ರಷ್ಟು ಮತದಾನ

|
Google Oneindia Kannada News

ಬೆಂಗಳೂರು, ಫೆಬ್ರವರಿ 18 : ತ್ರಿಪುರ ವಿಧಾನಸಭೆಗೆ ಇಂದು ನಡೆದ ಚುನಾವಣೆಯಲ್ಲಿ ಶೇ 74ರಷ್ಟು ಮತದಾನವಾಗಿದೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಚಾರಿಲಂ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿ ನಿಧನದ ಹಿನ್ನಲೆಯಲ್ಲಿ ಇಂದು ಮತದಾನ ನಡೆದಿಲ್ಲ. ಮಾರ್ಚ್ 12ರಂದು ಚುನಾವಣೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ, ಮತದಾನ ಆರಂಭತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ, ಮತದಾನ ಆರಂಭ

ಭಾನುವಾರ ಸಂಜೆ 4 ಗಂಟೆಯ ತನಕ ಶೇಷ 74ರಷ್ಟು ಮತದಾನವಾಗಿದೆ. ಕೆಲವು ಮತಗಟ್ಟೆಗಳಲ್ಲಿ ಮತದಾನ ಇನ್ನೂ ನಡೆಯುತ್ತಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

Tripura records 74 percent voting

ವಿವಿಪ್ಯಾಟ್ ಯಂತ್ರಗಳನ್ನು ಇದೇ ಮೊದಲ ಬಾರಿಗೆ ಎಲ್ಲಾ ಮತಗಟ್ಟೆಗಳಲ್ಲಿ ಬಳಸಲಾಗಿದೆ. ಕೆಲವು ದೂರುಗಳ ಬಂದ ಹಿನ್ನಲೆಯಲ್ಲಿ 12 ಮತಗಟ್ಟೆಗಳಲ್ಲಿ ಮತಯಂತ್ರವನ್ನು ಬದಲಾವಣೆ ಮಾಡಲಾಗಿದೆ.

ವಿಧಾನಸಭೆ ಚುನಾವಣೆ: ತ್ರಿಪುರದಲ್ಲಿ ಶುರು ಮೋದಿ ಹವಾ!ವಿಧಾನಸಭೆ ಚುನಾವಣೆ: ತ್ರಿಪುರದಲ್ಲಿ ಶುರು ಮೋದಿ ಹವಾ!

60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತ್ರಿಪುರದಲ್ಲಿ 59 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಮಾರ್ಚ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ತ್ರಿಪುರದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿರುವ ಎಡರಂಗ ಮತ್ತು ಬಿಜೆಪಿ ನಡುವೆ ಚುನಾವಣೆಯಲ್ಲಿ ಭಾರೀ ಪೈಪೋಟಿ ಇತ್ತು. ಜನರು ಯಾರನ್ನು ಬೆಂಬಲಿಸಿದ್ದಾರೆ? ಎಂದು ತಿಳಿಯಲು ಮಾರ್ಚ್ 3ರ ತನಕ ಕಾಯುವುದು ಅನಿವಾರ್ಯವಾಗಿದೆ.

English summary
Tripura assembly elections 2018 : Over 70 percent voting was registered in Tripura at close of polling at 4 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X