ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ಎಕ್ಸ್ ಸಮೀಕ್ಷೆ : ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಪ್ರಥಮ ಬಾರಿಗೆ ಕೇಸರಿ

By Prasad
|
Google Oneindia Kannada News

ನವದೆಹಲಿ, ಫೆಬ್ರವರಿ 27 : ಕಳೆದ 25 ವರ್ಷಗಳಿಂದ ಕೆಂಪು ಬಾವುಟ ಹಾರಾಡುತ್ತಿರುವ ತ್ರಿಪುರಾದಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷ ತನ್ನ ಕೇಸರಿ ಬಾವುಟವನ್ನು ಹಾರಿಸುವುದೆ?

ನ್ಯೂಸ್ಎಕ್ಸ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಬಿಜೆಪಿ ಇಲ್ಲಿ ಇತಿಹಾಸ ನಿರ್ಮಿಸಲಿದ್ದು, ಭಾರತೀಯ ಜನತಾ ಪಕ್ಷ ಐಪಿಎಫ್‌ಟಿಯೊಂದಿಗೆ ಸರಕಾರ ರಚಿಸುವುದು ಖಚಿತ.

ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟ 35-45 ಕ್ಷೇತ್ರಗಳನ್ನು ಕಬಳಿಸಲಿದ್ದು, ಸಿಪಿಐ(ಎಂ) ಸೀಟುಗಳ ಲೆಕ್ಕ 50ರಿಂದ ಇಳಿದು 14-23ಕ್ಕೆ ತಲುಪಲಿದೆ ಎಂದು ನ್ಯೂಸ್ಎಕ್ಸ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.

Tripura, Nagaland, Meghalaya assembly elections - exit poll survey

ಆಕ್ಸಿಸ್ ಮೈಇಂಡಿಯಾ ನಡೆಸಿದ ಸಮೀಕ್ಷೆ ಕೂಡ ಬಿಜೆಪಿಗೆ ಥಂಬ್ಸ್ ಅಪ್ ಹೇಳಿದ್ದು, ಬಿಜೆಪಿಗೆ ಇನ್ನೂ ಹೆಚ್ಚಿನ ಸ್ಥಾನಗಳು ಸಿಗಲಿದೆ ಎಂದು ಹೇಳಿದೆ. 60ರಲ್ಲಿ 45ರಿಂದ 50 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ. ಉಳಿದಂತೆ ಎಡ ಪಕ್ಷಗಳು 9-10ರಿಂದ ಸ್ಥಾನ ಪಡೆದು ಸೋಲುಣ್ಣಲಿದೆ.

ನಾಗಾಲ್ಯಾಂಡ್ ನಲ್ಲಿ ಕೂಡ, ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಬಿಜೆಪಿ ಜಯಭೇರಿ ಬಾರಿಸಲಿದೆ. ನೀಫು ರಿಯೋ ನೇತೃತ್ವದ ಎನ್‌ಡಿಪಿಪಿ ಜೊತೆ ಮೈತ್ರಿ ಬೆಳೆಸಿರುವ ಬಿಜೆಪಿ, 27ರಿಂದ 32 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಎನ್‌ಪಿಎಫ್‌ಗೆ 20-25, ಕಾಂಗ್ರೆಸ್ಸಿಗೆ 0-2 ಸ್ಥಾನಗಳು ಲಭಿಸಲಿವೆ.

ಮೇಘಾಲಯದಲ್ಲಿ, ಆಕ್ಸಿಸ್ ಮೈಇಂಡಿಯಾ ಸಮೀಕ್ಷೆ ಪ್ರಕಾರ, 60 ಸೀಟುಗಳಲ್ಲಿ ಬಿಜೆಪಿ ಅರ್ಧ ದಾರಿಯನ್ನು ಕ್ರಮಿಸಲಿದೆ. ಕಾಂಗ್ರೆಸ್ಸಿಗೆ 20 ಸೀಟು ಸಿಕ್ಕರೆ ಹೆಚ್ಚು. ನ್ಯೂಸ್ಎಕ್ಸ್ ಸಮೀಕ್ಷೆ ಪ್ರಕಾರ, ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ 23ರಿಂದ 27 ಸೀಟುಗಳನ್ನು ಗೆದ್ದು, ಉಳಿದ ಪಕ್ಷಗಳಿಗೆ ಸೆಡ್ಡು ಹೊಡೆಯಲಿದೆ.

English summary
Tripura, Nagaland, Meghalaya assembly elections - exit poll survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X