ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್ ಫೋನ್ ಖರೀದಿಸಲು ಸರ್ಕಾರದಿಂದಲೇ ಹಣ

|
Google Oneindia Kannada News

ಅಗರ್ತಲಾ, ಮಾರ್ಚ್.04: ಸ್ಮಾರ್ಟ್ ಫೋನ್ ಗಳಿಲ್ಲದೇ ವಿದ್ಯಾರ್ಥಿಗಳು ಕ್ಷಣಕಾಲವೂ ಇರದಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಶೈಕ್ಷಣಿಕ ವಲಯದಲ್ಲಿ ಸ್ಮಾರ್ಟ್ ಫೋನ್ ಕೂಡಾ ಇತ್ತೀಚಿನ ದಿನಗಳಲ್ಲಿ ಅವಿಭಾಜ್ಯ ಅಂಗದಂತೆ ಕೆಲಸ ಮಾಡುತ್ತಿದೆ.

ಕಲಿಕಾ ಹಂತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಫೋನ್ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ತ್ರಿಪುರಾ ಸರ್ಕಾರ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಖರೀದಿಸಲು ಆರ್ಥಿಕ ನೆರವು ನೀಡಲು ಮುಂದಾಗಿದೆ.

ಬೆಲೆ ಏರಿಕೆ ಬಿಸಿ: ಮೊಬೈಲ್ ಫೋನ್‍ಗಳ ಮೇಲಿನ ಜಿಎಸ್‍ಟಿ ದರ ಹೆಚ್ಚಳ? ಬೆಲೆ ಏರಿಕೆ ಬಿಸಿ: ಮೊಬೈಲ್ ಫೋನ್‍ಗಳ ಮೇಲಿನ ಜಿಎಸ್‍ಟಿ ದರ ಹೆಚ್ಚಳ?

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಖರೀದಿಸಲು ಸರ್ಕಾರದಿಂದ ನೆರವು ನೀಡಲಾಗುತ್ತದೆ ಎಂದು ಶಿಕ್ಷಣ ಮತ್ತು ಕಾನೂನು ಸಚಿವ ರತನ್ ಲಾಲ್ ನಾಥ್ ತಿಳಿಸಿದ್ದಾರೆ.

ಸ್ಮಾರ್ಟ್ ಫೋನ್ ನೀಡುವುದಕ್ಕೆ ನೂತನ ಯೋಜನೆ

ಸ್ಮಾರ್ಟ್ ಫೋನ್ ನೀಡುವುದಕ್ಕೆ ನೂತನ ಯೋಜನೆ

ತ್ರಿಪುರಾದಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಖರೀದಿಸುವುದಕ್ಕಾಗಿ ಆರ್ಥಿಕ ನೆರವು ನೀಡಲು ಅಲ್ಲಿನ ಸರ್ಕಾರ ಚೀಫ್ ಮಿನಿಸ್ಟರ್ ಯೂತ್ ಕಮ್ಯುನಿಕೇಷನ್ ಸ್ಕೀಮ್ (ಮುಖ್ಯಮಂತ್ರಿ ಯುಬ್ ಜಗಜೋಗ್ ಯೋಜನೆ) ಜಾರಿಗೊಳಿಸಲಾಗಿದೆ.

ಸ್ಮಾರ್ಟ್ ಫೋನ್ ಯೋಜನೆಗೆ ಸರ್ಕಾರದಿಂದ 7.31 ಕೋಟಿ ಮೀಸಲು

ಸ್ಮಾರ್ಟ್ ಫೋನ್ ಯೋಜನೆಗೆ ಸರ್ಕಾರದಿಂದ 7.31 ಕೋಟಿ ಮೀಸಲು

ಕಳೆದ 2020-2021ನೇ ಸಾಲಿನ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಖರೀದಿಸಲು ಸರ್ಕಾರವು ಹಣವನ್ನು ನೀಡುತ್ತದೆ. ಈ ಯೋಜನೆಗಾಗಿ ತ್ರಿಪುರಾ ಸರ್ಕಾರ ಬರೋಬ್ಬರಿ 7.31 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ. 14,608 ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಈ ಕೋರ್ಸ್ ವಿದ್ಯಾರ್ಥಿಗಳಿಗೆ ಸರ್ಕಾರದ ಸಹಾಯ

ಈ ಕೋರ್ಸ್ ವಿದ್ಯಾರ್ಥಿಗಳಿಗೆ ಸರ್ಕಾರದ ಸಹಾಯ

ತ್ರಿಪುರಾದ 38 ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಯೋಜನೆಯು ಅನ್ವಯವಾಗುತ್ತದೆ. ಮೆಡಿಕಲ್, ಪ್ಯಾರಾ ಮೆಡಿಕಲ್, ನರ್ಸಿಂಗ್, ಇಂಜಿನಿಯರಿಂಗ್, ಸೈನ್ಸ್, ಆರ್ಟ್ಸ್, ಕಾಮರ್ಸ್, ಕಾನೂನು(Law), ಕಲೆ ಮತ್ತು ಸಂಗೀತ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಖರೀದಿಸಲು ಸರ್ಕಾರದಿಂದಲೇ ಹಣವನ್ನು ನೀಡಲು ಯೋಜನೆ ರೂಪಿಸಲಾಗಿದೆ.

2018ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರವಸೆ

2018ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರವಸೆ

ಕಳೆದ 2018ರಲ್ಲಿ ನಡೆದ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಗ್ಗೆ ಭರವಸೆ ನೀಡಿತ್ತು. ತನ್ನ ಚುನಾವಣಾಪೂರ್ವ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಖರೀದಿಸಲು ಸರ್ಕಾರದಿಂದಲೇ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿತ್ತು. ಇದೀಗ ಸರ್ಕಾರ ರಚಿಸಿದ ಎರಡು ವರ್ಷಗಳ ಬಳಿಕ ಬಿಜೆಪಿ ಸರ್ಕಾರವು ಈ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಿದೆ.

English summary
Tripura Governmnet Finacial Aid For Students To Purchase Smart Phone. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X