ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ತ್ರಿಪುರಾ ವಿಧಾನಭೆಗೆ ಚುನಾವಣೆ, ಬಿಜೆಪಿ-ಎಡಪಕ್ಷದ ನಡುವೆ ಫೈಟ್

By Sachhidananda Acharya
|
Google Oneindia Kannada News

ಅಗರ್ತಲಾ, ಫೆಬ್ರವರಿ 17: 25 ವರ್ಷಗಳಿಂದ ಎಡಪಕ್ಷಗಳ ಆಳ್ವಿಕೆಯಲ್ಲಿರುವ ತ್ರಿಪುರಾದಲ್ಲಿ ನಾಳೆ ಅಂದರೆ ಫೆಬ್ರವರಿ 18ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಇಲ್ಲಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಎಡಪಕ್ಷಗಳಿಗೆ ಭಾರತೀಯ ಜನತಾ ಪಕ್ಷ ಸವಾಲು ಒಡ್ಡಿದೆ. 60ರಲ್ಲಿ 59 ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಲಿದೆ. ಚಾರಿಲಿಮ್ ಕ್ಷೇತ್ರದ ಸಿಪಿಐಎಂ ಅಬ್ಯರ್ಥಿ ಸಾವಿಗೀಡಾಗಿದ್ದರಿಂದ ಇಲ್ಲಿ ಮಾತ್ರ ಮಾರ್ಚ್ 12ರಂದು ಮತದಾನ ನಡೆಯಲಿದೆ.

ಇಲ್ಲಿ 20 ಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿದೆ. ಈ ಬಾರಿ ತ್ರಿಪುರಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ಪಾಳಯದ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ.

Tripura goes to polls tomorrow, BJP the main challenger

ಎಡಪಕ್ಷಗಳ ಪರವಾಗಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಬರೋಬ್ಬರಿ 50 ಸಮಾವೇಶಗಳಲ್ಲಿ ಭಾಗವಹಿಸಿದ್ದರೆ, ಇವರಿಗೆ ಸೀತಾರಾಮ್ ಯೆಚೂರಿ ಮತ್ತು ಬೃಂದಾ ಕಾರಟ್ ಉತ್ತಮ ಬೆಂಬಲ ನೀಡಿದ್ದಾರೆ. ಇನ್ನು ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ ಕೂಡ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಸಿಪಿಐಎಂ 57 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಮಿತ್ರ ಪಕ್ಷಗಳು ಮೂರು ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಬಿಜೆಪಿ 51 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರೆ, ಅದರ ಮಿತ್ರ ಪಕ್ಷ ಐಪಿಎಫ್ ಟಿ 9 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಇನ್ನು ಕಾಂಗ್ರೆಸ್ 59 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದು ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ. ಒಟ್ಟು 60 ಕ್ಷೇತ್ರಗಳಿಗೆ 307 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತ್ರಿಪುರಾದಲ್ಲಿ ಒಟ್ಟು 25,73,413 ಜನರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಇದರಲ್ಲಿ 13,05,375 ಪುರುಷರು ಮತ್ತು 12,68,027 ಮಹಿಳೆಯರಾಗಿದ್ದಾರೆ. 11 ಜನ ತೃತೀಯ ಲಿಂಗಿಗಳೂ ಮತದಾನದ ಹಕ್ಕು ಹೊಂದಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. 3,214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು ಇವುಗಳಲ್ಲಿ 47 ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ.

ಮತದಾನದ ಹಿನ್ನಲೆಯಲ್ಲಿ ಎಲ್ಲಾ ಅಗತ್ಯ ಏರ್ಪಾಟುಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯದಾದ್ಯಂತ ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಬಿಗಿ ಭದ್ರತೆ ವಹಿಸಲಾಗಿದೆ. ಇದೇ ಮಾರ್ಚ್ 3ರಂದು ಇಲ್ಲಿ ಮತ ಎಣಿಕೆ ನಡೆಯಲಿದೆ.

2013ರ ಫಲಿತಾಂಶ
2013ರಲ್ಲಿ ಇಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಸಿಪಿಐಎಂ 49 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಸಿಪಿಐ 1 ಮತ್ತು ಕಾಂಗ್ರೆಸ್ 10 ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು.

2013ರಲ್ಲಿ ತ್ರಿಪುರಾದಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು. ಮಾತ್ರವಲ್ಲ 60ರಲ್ಲಿ 50 ಕ್ಷೇತ್ರಗಳಲ್ಲಿ ಠೇವಣಿಯನ್ನೇ ಕಳೆದುಕೊಂಡು ಮುಖಭಂಗ ಅನುಭವಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳು ಕೇವಲ ಶೇಕಡಾ 1.5. ಹೀಗಿರುವ ಬಿಜೆಪಿ ಈ ಬಾರಿ ನಾವೇ ಅಧಿಕಾರಕ್ಕೇರುತ್ತೇವೆ ಎಂದು ಹೇಳುತ್ತಿದೆ.

English summary
Tripura would go to polls tomorrow with the BJP emerging as the main challenger to the ruling Left Front, which has been in power in the state for the last 25 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X