ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ:ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗೆ ಹೊಡೆದ ತ್ರಿಪುರ ಕಾಂಗ್ರೆಸ್ ಅಧ್ಯಕ್ಷ

|
Google Oneindia Kannada News

ಅಗರ್ತಲಾ, ಏಪ್ರಿಲ್ 19: ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಸಿಬ್ಬಂದಿ ಎದುರಲ್ಲೆ ತ್ರಿಪುರಾದ ಕಾಂಗ್ರೆಸ್ ಅಧ್ಯಕ್ಷ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಹೊಡೆದು ಬೆದರಿದ ಘಟನೆ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತ್ರಿಪುರ ಕಾಂಗ್ರೆಸ್ ಅಧ್ಯಕ್ಷ ಪ್ರಾದ್ಯೋತ್ ಕಿಶೋರ್ ದೇಬ್ ಬರ್ಮನ್ ಅವರು ನಿನ್ನೆ ಕೋವಾಯ್ ಠಾಣೆಗೆ ಬೆಂಬಲಿಗರೊಂದಿಗೆ ನುಗ್ಗಿ, ತಮ್ಮ ತಂಗಿಯ ವಾಹನದ ಮೇಲೆ ಕಲ್ಲು ತೂರಿದ ವ್ಯಕ್ತಿಯ ಕಪಾಳಕ್ಕೆ ಹೊಡೆದಿದ್ದಾರೆ.

ಮೋದಿ ಎದುರಲ್ಲೇ ಅಗರ್ತಲಾದಲ್ಲಿ ಮಂತ್ರಿಯಿಂದ ಕಂತ್ರಿ ಕೆಲಸಮೋದಿ ಎದುರಲ್ಲೇ ಅಗರ್ತಲಾದಲ್ಲಿ ಮಂತ್ರಿಯಿಂದ ಕಂತ್ರಿ ಕೆಲಸ

ಪ್ರಾದ್ಯೋತ್ ಕಿಶೋರ್ ದೇಬ್ ಬರ್ಮನ್ ಅವರ ತಂಗಿ ಪ್ರಜ್ಞಾ ದೇವ್ ಬರ್ಮನ್ ಅವರು ಪೂರ್ವ ತ್ರಿಪುರಾ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ನಿನ್ನೆ ಕಾರಿನಲ್ಲಿ ರೋಡ್ ಶೋ ನಡೆಸಬೇಕಾದರೆ ವ್ಯಕ್ತಿಯೊಬ್ಬ ಕಲ್ಲು ತೂರಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು, ಈಗ ಆತನ ಮೇಲೆಯೇ ಹಲ್ಲೆ ಆಗಿದೆ.

Tripura congress president slaps a man inside the police station

ಆ ವ್ಯಕ್ತಿಯು ಐಪಿಎಫ್‌ಟಿ ಪಕ್ಷಕ್ಕೆ ಸೇರಿದವನನು ಎನ್ನಲಾಗಿದೆ. ಆತ ಮತ್ತು ಕೆಲವು ಸಂಗಡಿಗರು ಪ್ರಜ್ಞಾ ದೇವ್ ಬರ್ಮನ್ ಅವರ ಕಾರಿನ ಮೇಲೆ ಕಲ್ಲು ಎಸೆದಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಮುಖಂಡ ರತನ್ ಲಾಲ್ ನಾತ್, ವಿಡಿಯೋ ನೋಡಿದರೆ ಅರ್ಥವಾಗುತ್ತದೆ, ಪ್ರಾದ್ಯೋತ್ ಕಿಶೋರ್ ದೇವ್ ಬರ್ಮನ್ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂದು, ಪೊಲೀಸ್ ಠಾಣೆಗೆ ನುಗ್ಗಿ ಒಬ್ಬ ವ್ಯಕ್ತಿಯನ್ನು ಹೊಡೆಯಬಲ್ಲವರಾದರೆ, ಅವರು ಎಲ್ಲಿ ಬೇಕಾದರೂ, ಯಾರನ್ನು ಬೇಕಾದರು ಕೊಲ್ಲಬಲ್ಲರು, ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈಶಾನ್ಯದಲ್ಲಿ ಬಿಜೆಪಿಗೆ ಆಘಾತ: ಟಿಕೆಟ್ ಕೈತಪ್ಪುತ್ತಿದ್ದಂತೆ ಪಕ್ಷ ತೊರೆದ ನಾಯಕರುಈಶಾನ್ಯದಲ್ಲಿ ಬಿಜೆಪಿಗೆ ಆಘಾತ: ಟಿಕೆಟ್ ಕೈತಪ್ಪುತ್ತಿದ್ದಂತೆ ಪಕ್ಷ ತೊರೆದ ನಾಯಕರು

ವ್ಯಕ್ತಿಯ ಮೇಲೆ ಠಾಣೆ ಒಳಗೆ ಹಲ್ಲೆ ಮಾಡಿರುವ ಪ್ರಾದ್ಯೋತ್ ಕಿಶೋರ್ ದೇವ್ ಬರ್ಮನ್ ಅವರ ಮೇಲೆ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

English summary
Tripura Congress president Pradyot Kishore Deb Burman slaps a man inside Khowai police station in Tripura. the man was arrested for attacking a convoy of Pragya Deb Burman, Tripura Congress candidate & Pradyot's elder sister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X