ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಂ ಕ್ವಾರಂಟೈನ್‌ಗೆ ಒಳಗಾದ ತ್ರಿಪುರ ಮುಖ್ಯಮಂತ್ರಿ

|
Google Oneindia Kannada News

ಅಗರ್ತಲ, ಆಗಸ್ಟ್ 04 : ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇವ್ ಸ್ವಯಂ ಐಸೊಲೇಷನ್‌ಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 5,520.

ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇವ್ ಕುಟುಂಬ ಸದಸ್ಯರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆದ್ದರಿಂದ, ಮಂಗಳವಾರ ಅವರು ಸ್ವಯಂ ಐಸೋಲೇಷನ್‌ಗೆ ಒಳಪಟ್ಟಿದ್ದಾರೆ. ಅವರ ಕೋವಿಡ್ ವರದಿ ಫಲಿತಾಂಶ ನೆಗೆಟಿವ್ ಬಂದಿದೆ.

ಟ್ಯೂಷನ್ ನಡೆಸುತ್ತಿರುವ ಶಿಕ್ಷಕರ ವಿರುದ್ಧ ತ್ರಿಪುರ ಸರ್ಕಾರ ಕ್ರಮ ಟ್ಯೂಷನ್ ನಡೆಸುತ್ತಿರುವ ಶಿಕ್ಷಕರ ವಿರುದ್ಧ ತ್ರಿಪುರ ಸರ್ಕಾರ ಕ್ರಮ

ಬಿಪ್ಲಬ್‌ ಕುಮಾರ್‌ ದೇವ್ ಕುರಿತು ಟ್ವೀಟ್ ಮಾಡಿದ್ದಾರೆ. "ನನ್ನ ಕೋವಿಡ್ 19 ವರದಿ ನೆಗೆಟಿವ್ ಬಂದಿದೆ. ಆದರೆ, ಮುಂದಿನ 7 ದಿನಗಳ ತನಕ ನಾನು ಹೋಂ ಕ್ವಾರಂಟೈನ್‌ನಲ್ಲಿರುತ್ತೇನೆ. ಮನೆಯಿಂದಲೇ ಕೆಲಸ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.

ಕೊನೆಗೂ ಕ್ಷಮೆ ಯಾಚಿಸಿದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ಕೊನೆಗೂ ಕ್ಷಮೆ ಯಾಚಿಸಿದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್

Tripura CM Biplab Kumar Deb In Self Isolation

"ತ್ರಿಪುರದ ಜನರ ಹಾರೈಕೆ ಮತ್ತು ಪ್ರಾರ್ಥನೆಗಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟ ಮುಂದುವರೆಯಲಿದೆ" ಎಂದು ಬಿಪ್ಲಬ್‌ ಕುಮಾರ್‌ ದೇವ್ ಟ್ವೀಟ್ ಮಾಡಿದ್ದಾರೆ.

ಒಂದು ಕಾಲದ ಕುದುರೆ ಫಾರ್ಮ್‌, ಈಗ ವಿಶ್ವಕ್ಕೆ ಕೊರೊನಾ ಲಸಿಕೆ ಕೇಂದ್ರ: ರೇಸ್‌ನಲ್ಲಿ ಗೆಲ್ತಾರ ಪೂನವಾಲಾಒಂದು ಕಾಲದ ಕುದುರೆ ಫಾರ್ಮ್‌, ಈಗ ವಿಶ್ವಕ್ಕೆ ಕೊರೊನಾ ಲಸಿಕೆ ಕೇಂದ್ರ: ರೇಸ್‌ನಲ್ಲಿ ಗೆಲ್ತಾರ ಪೂನವಾಲಾ

ತ್ರಿಪುರ ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 5,520. ಸೋಮವಾರ ರಾಜ್ಯದಲ್ಲಿ 131 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಇದುವರೆಗೂ ರಾಜ್ಯದಲ್ಲಿ 28 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕೋವಿಡ್ ಸೋಂಕು ತಗುಲಿದೆ.

English summary
Tripura CM Biplab Kumar Deb in self-isolation after family members tested positive for COVID - 19. CM test results came negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X