ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರಾ ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ

|
Google Oneindia Kannada News

ಅಗರ್ತಲಾ, ನವೆಂಬರ್ 28: ತ್ರಿಪುರಾ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ ಅಧಿಕ ಸ್ಥಾನಗಳಲ್ಲಿ ಜಯ ಸಾಧಿಸಿದೆ. ನವೆಂಬರ್ 25 ರಂದು ನಡೆದ ಚುನಾವಣೆಯಲ್ಲಿ 14 ನಗರ ಸ್ಥಳೀಯ ಸಂಸ್ಥೆಗಳ 222 ಸ್ಥಾನಗಳ ಪೈಕಿ 217 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ತನ್ನ ಸ್ಥಾನವನ್ನು ಬಿಜೆಪಿ ಭದ್ರಪಡಿಸಿಕೊಂಡಿದೆ. ತೃಣಮೂಲ ಕಾಂಗ್ರೆಸ್‌ನೊಂದಿಗಿನ ಹಗೆತನದ ನಡುವೆ ನಡೆದ ತ್ರಿಪುರಾ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಉಳಿದಂತೆ ಸಿಪಿಎಂ ಮೂರು ಸ್ಥಾನಗಳನ್ನು ಗೆದ್ದರೆ, ತೃಣಮೂಲ ಕಾಂಗ್ರೆಸ್ ಮತ್ತು ಟಿಐಪಿಆರ್‌ಎ ಮೊಹ್ತಾ ತಲಾ ಒಂದು ಸ್ಥಾನವನ್ನು ಗೆದ್ದಿದೆ. ತ್ರಿಪುರಾದಲ್ಲಿ ಬಿಜೆಪಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಕಳೆದ ಚುನಾವಣೆಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದ್ದ ಸಿಪಿಐ ಈ ಬಾರಿ ಕೇವಲ ಮೂರು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಕೈಲಾಶ್‌ ಶಹರ್ ಮತ್ತು ಅಂಬಾಸ್ಸಾ ಪುರಸಭೆಗಳು ಮತ್ತು ಪಣಿಸಾಗರ ಪಂಚಾಯ್ತಿ ಸ್ಥಾನಗಳನ್ನು ಸಿಪಿಐಎಂ ಗೆದ್ದಕೊಂಡಿದೆ. ಅಗರ್ತಲ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಳಿಕ ಎರಡನೇ ಗರಿಷ್ಠ ಮತಗಳನ್ನು ಗಳಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್, ಅಂಬಾಸಾ ನಗರ ಪಂಚಾಯ್ತಿಯಲ್ಲಿ ಒಂದು ಸ್ಥಾನವನ್ನಷ್ಟೇ ಗಳಿಸಿಕೊಂಡಿದೆ. ತ್ರಿಪುರಾ ರಾಜ ಸಿಯೋನ್ ಪ್ರದ್ಯೋತ್ ಕಿಶೋರ್ ನೇತೃತ್ವದ ಟಿಐಪಿಆರ್‌ಎ ಮೊಹ್ತಾ ಒಂದು ಸ್ಥಾನವನ್ನು ಗೆದ್ದಿದೆ.

ತ್ರಿಪುರಾ ಪಾಲಿಕೆ ಚುನಾವಣೆಯ ಮತಎಣಿಕೆ ಆರಂಭ: ಬಿಗಿ ಭದ್ರತೆತ್ರಿಪುರಾ ಪಾಲಿಕೆ ಚುನಾವಣೆಯ ಮತಎಣಿಕೆ ಆರಂಭ: ಬಿಗಿ ಭದ್ರತೆ

ಈ ಐತಿಹಾಸಿಕ ಗೆಲುವಿಗಾಗಿ ರಾಜಕೀಯ ಗಣ್ಯರು ಶುಭಾಶಯ ತಿಳಿಸಿದ್ದಾರೆ. ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್, ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರನ್ನು ನಾನು ಅಭಿನಂದಿಸಿದ್ದಾರೆ. ಜೊತೆಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ 'ಇದು ಪ್ರಜಾಪ್ರಭುತ್ವದ ಗೆಲುವು' ಎಂದು ಕರೆದಿದ್ದಾರೆ.

Tripura civic polls: BJP wins in most seats


2018 ರಲ್ಲಿ ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸ್ಪರ್ಧಿಸಿದ ಮೊದಲ ಪಾಲಿಕೆ ಚುನಾವಣೆ ಇದಾಗಿದೆ. ಮುಖ್ಯವಾಗಿ ಬಿಜೆಪಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ನಡುವಿನ ಸ್ಪರ್ಧೆ ಇದಾಗಿದೆ. ಕಾಂಗ್ರೆಸ್ ಈ ಚುನಾವಣೆಗಳನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದೆ. ಆಡಳಿತಾರೂಢ ಬಿಜೆಪಿಯಿಂದ ಚುನಾವಣೆ ವೇಳೆ ದಾಳಿ ಹಾಗೂ ಮತಕ್ಕಾಗಿ ಜನರ ಮೇಲೆ ಒತ್ತಾಯ ಮಾಡಿದ ಆರೋಪ ಕಾಂಗ್ರೆಸ್ ಮಾಡಿತ್ತು.

ಎಣಿಕೆ ಕೇಂದ್ರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ತ್ರಿಪುರಾ ಪೊಲೀಸ್ ಮತ್ತು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್) ಸಿಬ್ಬಂದಿಯೊಂದಿಗೆ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಇತ್ತೀಚಿನ ವರದಿಗಳಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಗುರುವಾರ ನಡೆದ ಮತದಾನದಲ್ಲಿಯೇ ಟಿಎಂಸಿ ಮತ್ತು ಸಿಪಿಐ(ಎಂ)ಯಿಂದ ಮತ ದುರುಪಯೋಗದ ಆರೋಪಗಳಿದ್ದು, ಇಬ್ಬರೂ ವಿವಿಧ ಪುರಸಭೆಗಳಲ್ಲಿ ಮರು ಮತದಾನಕ್ಕೆ ಒತ್ತಾಯಿಸಿದ್ದರು. ಆದರೆ ಆಡಳಿತಾರೂಢ ಬಿಜೆಪಿ ಈ ಆರೋಪಗಳನ್ನು ತಳ್ಳಿ ಹಾಕಿತ್ತು. ತ್ರಿಪುರಾದಲ್ಲಿ ಮುನ್ಸಿಪಲ್ ಚುನಾವಣೆಯ ಸಂದರ್ಭದಲ್ಲಿ ನಡೆದ ದೊಡ್ಡ ಪ್ರಮಾಣದ ಹಿಂಸಾಚಾರದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ಸಮಿತಿಯಿಂದ ತನಿಖೆ ನಡೆಸುವಂತೆ ಕೋರಿ ಟಿಎಂಸಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ತ್ರಿಪುರಾ ಪಾಲಿಕೆ ಚುನಾವಣೆ: ಬೂತ್ ಏಜೆಂಟ್ ಮೇಲೆ ಬಿಜೆಪಿ ದಾಳಿ, ಟಿಎಂಸಿ ಆರೋಪತ್ರಿಪುರಾ ಪಾಲಿಕೆ ಚುನಾವಣೆ: ಬೂತ್ ಏಜೆಂಟ್ ಮೇಲೆ ಬಿಜೆಪಿ ದಾಳಿ, ಟಿಎಂಸಿ ಆರೋಪ

ಗುರುವಾರ ತ್ರಿಪುರಾ ಮುನ್ಸಿಪಲ್ ಚುನಾವಣೆಯ ಮತದಾನದ ವೇಳೆ, ಟಿಎಂಸಿ "ಬಿಜೆಪಿ ಗೂಂಡಾಗಳು" ತನ್ನ ಬೂತ್ ಏಜೆಂಟ್ ಮತ್ತು ಅಭ್ಯರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ. ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ "ಗುಂಡಾ ರಾಜ್" ಅನ್ನು ಟಿಎಂಸಿ ಟೀಕಿಸಿದೆ.

ಮತದಾನ ಪ್ರಾರಂಭವಾದ ತಕ್ಷಣ, ಟಿಎಂಸಿ ಇವಿಎಂ ಅಸಮರ್ಪಕ ಕಾರ್ಯ ಮತ್ತು ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಯ ಸುಮಾರು 20 ವಿಷಯಗಳನ್ನು ಪ್ರಸ್ತಾಪಿಸಿದೆ. ಇವಿಎಂ ಅಸಮರ್ಪಕ ಕಾರ್ಯದ 20 ನಿದರ್ಶನಗಳಲ್ಲಿ ಇದುವರೆಗೆ ಎರಡನ್ನು ಮಾತ್ರ ಪರಿಹರಿಸಲಾಗಿದೆ ಎಂದು ಪಕ್ಷವು ಗುರುವಾರ ಬೆಳಿಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಕೆಲವು "ಬಿಜೆಪಿ ಗೂಂಡಾಗಳು" ತನ್ನ ಕೆಲವು ಅಭ್ಯರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಸರಣಿ ಟ್ವೀಟ್‌ಗಳಲ್ಲಿ ವಿರೂಪಗೊಂಡ ಮುಖವನ್ನು ಹೊಂದಿರುವ ವ್ಯಕ್ತಿಯನ್ನು ತೋರಿಸುವ ವಿಡಿಯೋವನ್ನು ಪಕ್ಷವು ಪೋಸ್ಟ್ ಮಾಡಿದೆ.

ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ತ್ರಿಪುರಾ ಟಿಎಂಸಿ, "ವಾರ್ಡ್ ಸಂಖ್ಯೆ 51 ರ ನಮ್ಮ ಅಭ್ಯರ್ಥಿಯ ಮೇಲೆ ಕ್ರೂರವಾಗಿ ದಾಳಿ ಮಾಡಲಾಗಿದೆ. ಅವರ ಕಣ್ಣುಗಳು ಊದಿಕೊಂಡಿವೆ ಮತ್ತು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತ್ರಿಪುರ ಗೂಂಡಾಗಳು ಯಾರನ್ನೂ ಉಳಿಸುತ್ತಿಲ್ಲ. ಗೌರವಾನ್ವಿತ ಸುಪ್ರೀಂ ಕೋರ್ಟ್‌ ಮಾರ್ಗದರ್ಶನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ" ಎಂದು ದೂರಲಾಗಿದೆ. ಆರೋಪಗಳೇನೇ ಇದ್ದರೂ ಇಂದು ತ್ರಿಪುರಾ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದು ವಿಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ.

English summary
The BJP has won the Tripura poll polls in the midst of political rivalry with the Trinamool Congress. The BJP is celebrating in Tripura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X