ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರಾ ಪಾಲಿಕೆ ಚುನಾವಣೆ: ಬೂತ್ ಏಜೆಂಟ್ ಮೇಲೆ ಬಿಜೆಪಿ ದಾಳಿ, ಟಿಎಂಸಿ ಆರೋಪ

|
Google Oneindia Kannada News

ಅಗರ್ತಲಾ, ನವೆಂಬರ್ 25: ಗುರುವಾರ ತ್ರಿಪುರಾ ಮುನ್ಸಿಪಲ್ ಚುನಾವಣೆಯ ಮತದಾನದ ನಡುವೆ, ಟಿಎಂಸಿ "ಬಿಜೆಪಿ ಗೂಂಡಾಗಳು" ತನ್ನ ಬೂತ್ ಏಜೆಂಟ್ ಮತ್ತು ಅಭ್ಯರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ. ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ "ಗುಂಡಾ ರಾಜ್" ಅನ್ನು ಟಿಎಂಸಿ ಟೀಕಿಸಿದೆ.

ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ಮತ್ತು ತ್ರಿಪುರಾದ ಇತರ ನಾಗರಿಕ ಸಂಸ್ಥೆಗಳ 200 ಕ್ಕೂ ಹೆಚ್ಚು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯುತ್ತಿದೆ. 36 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ 785 ಸ್ಪರ್ಧಿಗಳು ಕಣದಲ್ಲಿದ್ದಾರೆ. ಮತದಾನ ಪ್ರಾರಂಭವಾದ ತಕ್ಷಣ, ಟಿಎಂಸಿ ಇವಿಎಂ ಅಸಮರ್ಪಕ ಕಾರ್ಯ ಮತ್ತು ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಯ ಸುಮಾರು 20 ವಿಷಯಗಳನ್ನು ಪ್ರಸ್ತಾಪಿಸಿದೆ. ಇವಿಎಂ ಅಸಮರ್ಪಕ ಕಾರ್ಯದ 20 ನಿದರ್ಶನಗಳಲ್ಲಿ ಇದುವರೆಗೆ ಎರಡನ್ನು ಮಾತ್ರ ಪರಿಹರಿಸಲಾಗಿದೆ ಎಂದು ಪಕ್ಷವು ಗುರುವಾರ ಬೆಳಿಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಹೇಳಿಕೆಯಲ್ಲಿ ತಿಳಿಸಿದೆ.

ತ್ರಿಪುರಾ ಚುನಾವಣೆ: ಅಗರ್ತಲಾ ಪಾಲಿಕೆ ಸೇರಿ 12 ಸ್ಥಳೀಯ ಸಂಸ್ಥೆಗಳಿಗೆ ಮತದಾನತ್ರಿಪುರಾ ಚುನಾವಣೆ: ಅಗರ್ತಲಾ ಪಾಲಿಕೆ ಸೇರಿ 12 ಸ್ಥಳೀಯ ಸಂಸ್ಥೆಗಳಿಗೆ ಮತದಾನ

ಜೊತೆಗೆ ಕೆಲವು "ಬಿಜೆಪಿ ಗೂಂಡಾಗಳು" ತನ್ನ ಕೆಲವು ಅಭ್ಯರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಸರಣಿ ಟ್ವೀಟ್‌ಗಳಲ್ಲಿ ವಿರೂಪಗೊಂಡ ಮುಖವನ್ನು ಹೊಂದಿರುವ ವ್ಯಕ್ತಿಯನ್ನು ತೋರಿಸುವ ವಿಡಿಯೋವನ್ನು ಪಕ್ಷವು ಪೋಸ್ಟ್ ಮಾಡಿದೆ.

Tripura civic polls: accusations of assaulting booth agents

ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ತ್ರಿಪುರಾ ಟಿಎಂಸಿ, "ವಾರ್ಡ್ ಸಂಖ್ಯೆ 51 ರ ನಮ್ಮ ಅಭ್ಯರ್ಥಿಯ ಮೇಲೆ ಕ್ರೂರವಾಗಿ ದಾಳಿ ಮಾಡಲಾಗಿದೆ. ಅವರ ಕಣ್ಣುಗಳು ಊದಿಕೊಂಡಿವೆ ಮತ್ತು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತ್ರಿಪುರ ಗೂಂಡಾಗಳು ಯಾರನ್ನೂ ಉಳಿಸುತ್ತಿಲ್ಲ. ಗೌರವಾನ್ವಿತ ಸುಪ್ರೀಂ ಕೋರ್ಟ್‌ ಮಾರ್ಗದರ್ಶನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ" ಎಂದು ದೂರಲಾಗಿದೆ.

ಮತ್ತೊಂದು ಟ್ವೀಟ್‌ನಲ್ಲಿ, ತ್ರಿಪುರಾ ಟಿಎಂಸಿ, "ವಯಸ್ಸಾದವರಿಗೆ ಬಿಜೆಪಿ ಗೂಂಡಾಗಳು ತಮಗೆ ಮತ ಚಲಾಯಿಸುವಂತೆ ಒತ್ತಾಯಿಸಿ ಥಳಿಸುತ್ತಿದ್ದಾರೆ. ಮತ ಹಾಕಲು ಹೋದ ಕಾರಣ ಬಿಜೆಪಿ ಗೂಂಡಾಗಳು ಹೊಡೆದಿದ್ದರಿಂದ ಈ ಮಹಿಳೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಹೇಳಿದೆ.

ಸಿಎಂ ಬಿಪ್ಲಬ್ ದೇಬ್ ಅವರ 'ಗುಂಡಾ ರಾಜ್' ಬಗ್ಗೆ ಮತ್ತು ತ್ರಿಪುರಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದನ್ನು ಇಡೀ ರಾಷ್ಟ್ರವೇ ನೋಡುತ್ತಿದೆ. ಸಿಎಂ ಬಿಪ್ಲಬ್ ದೇಬ್ ರಾಜ್ಯವನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ತ್ರಿಪುರಾ BJP ಗೂಂಡಾಗಳು ನಮ್ಮ ಅಭ್ಯರ್ಥಿಗಳು ಮತ್ತು ನಮ್ಮ ಬೂತ್ ಏಜೆಂಟ್‌ಗಳು ಮಾತ್ರವಲ್ಲದೆ ಸಾಮಾನ್ಯ ಜನರ ಮೇಲೆ ದಯೆಯಿಲ್ಲದ ದಾಳಿ ನಡೆಸಿದ್ದಾರೆ. ಬಿಜೆಪಿಗೆ ನಾಚಿಕೆಯಾಗಬೇಕು. ಇದು ಪ್ರಜಾಪ್ರಭುತ್ವನಾ? ಅಥವಾ ಗುಂಡಾ ರಾಜ್‌? Bjp ದೇಶದ ಸರ್ವೋಚ್ಚ ನ್ಯಾಯಾಲಯವನ್ನು ಅಪಹಾಸ್ಯ ಮಾಡುತ್ತಿದೆ" ಎಂದು ಟಿಎಂಸಿ ಹೇಳಿದೆ.

ನಾಗರಿಕ ಸಂಸ್ಥೆ ಚುನಾವಣೆಗೆ ಭದ್ರತೆ ಸರಿಯಾಗಿದೆಯೇ?: ತ್ರಿಪುರಾ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆನಾಗರಿಕ ಸಂಸ್ಥೆ ಚುನಾವಣೆಗೆ ಭದ್ರತೆ ಸರಿಯಾಗಿದೆಯೇ?: ತ್ರಿಪುರಾ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

ಜೊತೆಗೆ ಜನರ ಪರವಾಗಿ ಬಿಜೆಪಿ ಕಾರ್ಯಕರ್ತರು ಮತ ಹಾಕುತ್ತಿದ್ದಾರೆ. ಪ್ರಜಾಪ್ರಭುತ್ವದ ಹಕ್ಕುಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಸೋಲಿನ ಭಯದಿಂದ ಅವರ ಗೂಂಡಾಗಳು ಈಗ ಜನರ ಪರವಾಗಿ ಮತ ಹಾಕುತ್ತಿದ್ದಾರೆ. 30-40 ಜನರು ಮತಗಟ್ಟೆಗಳಿಗೆ ಬಂದಾಗ, ಅವರ ಮತಗಳು ಈಗಾಗಲೇ ಚಲಾವಣೆಯಾಗಿವೆ ಎಂದು ಹೇಳಿ ಅವರಿಗೂ ಬೆದರಿಕೆ ಹಾಕಲಾಗಿದೆ ಎಂದು ಟಿಎಂಸಿ ಆರೋಪಿಸಿದೆ.

"ಬಿಪ್ಲಬ್ ಅವರ ಗುಂಡಾಗಳು ಮತದಾರರನ್ನು ಮತಗಟ್ಟೆಗಳಿಂದ ದೂರ ಓಡಿಸಲಾಗುತ್ತಿದ್ದಾರೆ. ಅವರನ್ನು ಮನೆಯಲ್ಲಿಯೇ ಇರುವಂತೆ ಒತ್ತಾಯಿಸಲಾಗುತ್ತಿದೆ. ಜೊತೆಗೆ ಬಿಜೆಪಿ ಪರವಾಗಿ ಮಾತ್ರ ಮತ ಚಲಾಯಿಸುವಂತೆ ಒತ್ತಾಯಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಪದೇ ಪದೇ ಕತ್ತು ಹಿಸುಕಿದರೂ ರಾಜ್ಯ ಚುನಾವಣಾ ಆಯೋಗ ಮೌನವಾಗಿದೆ. ಇದು ಖಂಡನೀಯ" ಎಂದು ಪಕ್ಷ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.

English summary
Amid the voting for the Tripura municipal elections on Thursday, the TMC accused "BJP goons" of attacking its booth agents and candidates. The TMC also slammed Tripura Chief Minister Biplab Deb's "gunda raaj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X