ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಲ್ಲಿದ್ದಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಕೇಶಮುಂಡನ ಮಾಡಿಸಿಕೊಂಡ ತ್ರಿಪುರ ಶಾಸಕ

|
Google Oneindia Kannada News

ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿರುವ ತ್ರಿಪುರ ಶಾಸಕ ಆಶಿಷ್ ದಾಸ್ ಕೋಲ್ಕತ್ತಾ ತಲುಪಿದ್ದಾರೆ. ಟಿಎಂಸಿ ಸೇರ್ಪಡೆಗೂ ಮುನ್ನ ಕೇಶಮುಂಡನ ಮಾಡಿಸಿಕೊಂಡಿದ್ದಾರೆ.

ಹೋಮ ಹವನ ನಡೆಸಿರುವ ಆಶಿಷ್ ಬಳಿಕ ತಲೆ ಬೋಳಿಸಿಕೊಂಡಿದ್ದಾರೆ. ಇದಾದ ಬಳಿಕ ಆದಿ ಗಂಗಾದಲ್ಲಿ ತೀರ್ಥಸ್ನಾನ ಮಾಡಿದ್ದಾರೆ. ಇಷ್ಟು ವರ್ಷಗಳ ಕಾಲ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ ಕಾರಣಕ್ಕೆ ಪ್ರಾಯಶ್ಚಿತ್ತವಾಗಿ ತಾವು ಈ ಧಾರ್ಮಿಕ ಕಾರ್ಯ ಮಾಡಿರುವುದಾಗಿ ತಿಳಿಸಿದ್ದಾರೆ. ಹೋಮ-ಹವನ , ಕೇಶ ಮುಂಡನ ಹಾಗೂ ತೀರ್ಥಸ್ನಾನದ ಮೂಲಕ ತಮ್ಮನ್ನು ತಾವು ಶುದ್ಧಗೊಳಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಪ್ರಸ್ತುತ ಕೋಲ್ಕತ್ತಾದಲ್ಲಿರುವ ತ್ರಿಪುರ ಬಿಜೆಪಿ ಶಾಸಕ ಆಶಿಷ್ ದಾಸ್ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟಿಎಂಸಿ ನಾಯಕರ ಜತೆ ಚರ್ಚೆ ನಡೆಸುತ್ತಿರುವ ಆಶಿಷ್ ದಾಸ್ ಮಮತಾ ಪಕ್ಷಕ್ಕೆ ಸೇರಲಿದ್ದಾರೆ.

Tripura BJP MLA Ashis Das Gets Kesh Mundan As Prayaschit Before Joining TMC

ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಜತೆ ಕೋಲ್ಕತ್ತಾದ ಕಚೇರಿಯಲ್ಲಿ ಶಾಸಕ ಆಶಿಷ್ ದಾಸ್ ಮಾತುಕತೆ ನಡೆಸಿದ್ದಾರೆ.
ಆಶಿಷ್ ದಾಸ್ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಭವಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ಸೆಪ್ಟೆಂಬರ್ 30ರಂದು ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಕ್ಟೋಬರ್ 07ರಂದು ವಿಧಾನಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಈ ಕುರಿತು ಮಾಹಿತಿ ನೀಡಿದ್ದು, ಉಪ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಇಬ್ಬರು ಟಿಎಂಸಿ ಶಾಸಕರೂ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದರು.,

ಮಮತಾ ಬ್ಯಾನರ್ಜಿ ಅವರು ಭವಾನಿಪುರ ಉಪ ಚುನಾವಣೆಯಲ್ಲಿ 58,835 ಮತಗಳಿಂದ ಜಲಗಳಿಸಿದ್ದರು. ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಗೆಲ್ಲುವುದು ಅವರಿಗೆ ಅನಿವಾರ್ಯವಾಗಿತ್ತು. ಭಾನುವಾರ ಉಪ ಚುನಾವಣಾ ಫಲಿತಾಂಶ ಘೋಷಣೆಯಾಗಿತ್ತು.

ಜಾಕಿರ್ ಹುಸೇನ್ ಜಂಗೀಪುರ ಕ್ಷೇತ್ರ ಹಾಗೂ ಅಮಿರುಲ್ ಇಸ್ಲಾಂ ಅವರು ಸಂಸರ್‌ಗಂಜ್ ಕ್ಷೇತ್ರಗಳಿಂದ ಜಯ ಸಾಧಿಸಿದ್ದಾರೆ. ಚುನಾಯಿತ ಸದಸ್ಯರಾದ ಮಮತಾ ಬ್ಯಾನರ್ಜಿ, ಜಾಕಿರ್ ಹುಸೇನ್ , ಅಮಿರುಲ್ ಇಸ್ಲಾಂ ಅವರು ಅಕ್ಟೋಬರ್ 7 ರಂದು ಬೆಳಗ್ಗೆ 11.45ಕ್ಕೆ ಪ್ರಮಾಣವಚನ ಬೋಧಿಸಲಾಗುವುದು ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.

ಕೋಲ್ಕತ್ತಾದ ಟಿಎಂಸಿ ಕಚೇರಿ ಮುಂದೆ ಮತ್ತು ಸಿಎಂ ಮಮತಾ ನಿವಾಸದ ಹೊರಗೆ ಸಂಭ್ರಮ ಮನೆಮಾಡಿದೆ. ಕಳೆದ ಬಾರಿ ಪಶ್ಚಿಮ ಬಂಗಾಳಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಂಡಿದ್ದರು. ಆದರೂ ಟಿಎಂಸಿಗೆ ಬಹುಮತ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾದರು.

ಅದಾಗಿ ಆರು ತಿಂಗಳ ಬಳಿಕ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಗೆಲುವು ಮಮತಾ ಬ್ಯಾನರ್ಜಿಗೆ ಸಿಎಂ ಖುರ್ಚಿ ಉಳಿಸಿಕೊಳ್ಳಲು ಅನಿವಾರ್ಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲದ ಹಿನ್ನೆಲೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಉಪ ಚುನಾವಣೆ ನಡೆದಿತ್ತು.

English summary
BJP MLA from Tripura’s Surma Ashis Das on Tuesday (October 5) reached Kolkata to join Mamata Banerjee’s TMC, but not before performing an elaborate purification ritual to cleanse himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X