ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರಾದಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ, ಎಡಪಕ್ಷಗಳ ಆಡಳಿತ ಅಂತ್ಯ

By Sachhidananda Acharya
|
Google Oneindia Kannada News

ಅಗರ್ತಲಾ, ಮಾರ್ಚ್ 3: ಬರೋಬ್ಬರಿ ಕಳೆದ 25 ವರ್ಷಗಳಿಂದ ತ್ರಿಪುರಾದಲ್ಲಿ ಆಡಳಿತ ನಡೆಸುತ್ತಿದ್ದ ಸಿಪಿಐ(ಎಂ) ಈ ಬಾರಿ ಧೂಳಿಪಡವಾಗಿದೆ. ಇಲ್ಲಿ ಬಿಜೆಪಿ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಆಡಳಿತ ಕೊನೆಗೊಂಡಿದೆ.

ಬಿಜೆಪಿ ಮೈತ್ರಿಕೂಟ ತ್ರಿಪುರಾದಲ್ಲಿ 43 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಸಿಪಿಐಎಂ ಕೇವಲ 16 ಸ್ಥಾನಗಳಲ್ಲಿ ಜಯ ಸಾಧಿಸಿ ಸೋಲೊಪ್ಪಿಕೊಂಡಿದೆ.

ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ

ಫೆಬ್ರವರಿ 18ರಂದು ತ್ರಿಪುರಾದ 60ರಲ್ಲಿ 59 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇಂದು ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆಯ ರೋಚಕ, ಕುತೂಹಲಕಾರಿ, ಕ್ಷಣಕ್ಷಣದ ಮಾಹಿತಿಗಳ ಲೈವ್ ಅಪ್ಡೇಟ್ಸ್ ಇಲ್ಲಿದೆ..

Tripura Assembly Elections 2018 Results LIVE Updates

Newest FirstOldest First
12:16 PM, 3 Mar

ಮಧ್ಯಾಹ್ನ 12.15 ರ ವೇಳೆಗೆ ತ್ರಿಪುರಾದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಕೇಸರಿ ಪಕ್ಷ ಇದೇ ಮೊದಲ ಬಾರಿಗೆ ಬರೋಬ್ಬರಿ 40 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಆಡಳಿತರೂಢ ಸಿಪಿಐಎಂ 19 ಸ್ಥಾನಗಳಲ್ಲಷ್ಟೇ ಮುನ್ನಡೆ ಹೊಂದಿದ್ದು ಸೋಲಿನತ್ತ ಮುಖ ಮಾಡಿದೆ.
10:58 AM, 3 Mar

10.55 ರ ಹೊತ್ತಿಗೆ ತ್ರಿಪುರಾದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು 35 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಸ್ಪಷ್ಟ ಬಹುಮತದತ್ತ ಹೆಜ್ಜೆ ಹಾಕಿವೆ. ಸಿಪಿಐಎಂ 24 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಮುಖ್ಯಮಂತ್ರಿ ಮಾಣಿಕ ಸರ್ಕಾರ್ ತಮ್ಮ ತವರು ಧನ್ ಪುರ್ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
10:21 AM, 3 Mar

10.20ರ ವೇಳೆಗೆ ತ್ರಿಪುರಾದಲ್ಲಿ ಬಿಜೆಪಿ ಮತ್ತು ಸಿಪಿಐಎಂ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಮತ್ತು ಸಿಪಿಐಎಂ ತಲಾ 29 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಒಂದು ಕ್ಷೇತ್ರದಲ್ಲಿ ಇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.
9:32 AM, 3 Mar

9.30ರ ವೇಳೆಗೆ ಸಿಪಿಐಎಂ 27, ಬಿಜೆಪಿ 22 ಮತ್ತು ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
9:26 AM, 3 Mar

9.20ರ ವೇಳೆಗೆ ತ್ರಿಪುರಾದಲ್ಲಿ ಸಿಪಿಐಎಂ 26 ಸ್ಥಾನಗಳಲ್ಲಿ ಮತ್ತು ಬಿಜೆಪಿ 23 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
8:00 AM, 3 Mar

ಸರಿಯಾಗಿ 8 ಗಂಟೆಗೆ ಬಿಗಿಭದ್ರತೆ ನಡುವೆ ಮತಎಣಿಕೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಲಿದ್ದು ನಂತರ ಇವಿಎಂಗಳ ಮತಎಣಿಕೆ ಆರಂಭವಾಗಲಿದೆ.
7:58 AM, 3 Mar

ಚಾರಿಲಂ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿ ನಿಧನದ ಹಿನ್ನಲೆಯಲ್ಲಿ ಫೆಬ್ರವರಿ 18ರಂದು ಮತದಾನ ನಡೆದಿಲ್ಲ. ಮಾರ್ಚ್ 12ರಂದು ಇಲ್ಲಿ ಚುನಾವಣೆ ನಡೆಸಲಾಗುತ್ತದೆ. ಇದನ್ನು ಹೊರತುಪಡಿಸಿ ಉಳಿದ 59 ಕ್ಷೇತ್ರಗಳ ಫಲಿತಾಂಶ ಇಂದು ಹೊರ ಬೀಳಲಿದೆ.
Advertisement
7:57 AM, 3 Mar

ಫೆಬ್ರವರಿ 18ರಂದು ತ್ರಿಪುರಾ ವಿಧಾನಸಭೆಯ 59 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ದಾಖಲೆಯ ಶೇಕಡಾ 89.8 ರಷ್ಟು ಜನರು ಮತ ಚಲಾಯಿಸಿದ್ದಾರೆ. 1967ರಲ್ಲಿ ತ್ರಿಪುರಾ ವಿಧಾನಸಭೆಗೆ ನಡೆದ ಮೊದಲ ಚುನಾವಣೆಯಿಂದ ಇಲ್ಲಿಯವರೆಗೆ ನಡೆದ ಅಷ್ಟೂ ಚುನಾವಣೆಗಳಲ್ಲಿ ದಾಖಲಾದ ಮೂರನೇ ಅತೀ ಹೆಚ್ಚಿನ ಮತದಾನ ಇದಾಗಿದೆ.
7:55 AM, 3 Mar

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಹೇಳಿದಷ್ಟು ಸುಲಭವಲ್ಲ. ಏಕೆಂದರೆ 2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿಲ್ಲ. ಮಾತ್ರವಲ್ಲ 60ರಲ್ಲಿ 50 ಕ್ಷೇತ್ರಗಳಲ್ಲಿ ಠೇವಣಿಯನ್ನೇ ಕಳೆದುಕೊಂಡು ಮುಖಭಂಗ ಅನುಭವಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳ ಸಂಖ್ಯೆಯೂ ಕೇವಲ ಶೇಕಡಾ 1.5. ಹೀಗಿರುವಾಗ ಈ ಬಾರಿ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಅದಕ್ಕಿಂತ ದೊಡ್ಡ ಪವಾಡ ಮತ್ತೊಂದಿಲ್ಲ.
7:54 AM, 3 Mar

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಭಾರೀ ಪ್ರಚಾರವನ್ನೇ ನಡೆಸಿದ್ದಾರೆ.
7:48 AM, 3 Mar

ಈ ಹಿಂದಿನ ಬಲಾಬಲಗಳನ್ನು ನೋಡುವುದಾದರೆ 2013ರಲ್ಲಿ ಇಲ್ಲಿ ಸಿಪಿಐಎಂ ಬರೋಬ್ಬರಿ 60ರಲ್ಲಿ 49 ಸ್ಥಾನಗಳನ್ನು ಗೆದ್ದಿತ್ತು. ಒಂದು ಸ್ಥಾನ ಸಿಪಿಐ ಪಾಲಾಗಿತ್ತು. ಉಳಿದ 10 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಕೇವಲ ಶೂನ್ಯ.
7:45 AM, 3 Mar

ತ್ರಿಪುರಾದಲ್ಲಿ ಹೊರ ಬಿದ್ದಿರುವ ಮೂರು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎರಡು ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ. ಇನ್ನೊಂದು ಸಮೀಕ್ಷೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಮತ್ತು ಸಿಪಿಐಎಂ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ ಎಂದು ಹೇಳಿದೆ.
Advertisement

English summary
Tripura Assembly Elections 2018 LIVE: In Tripura, BJP has emerged as a strong contender and two exit polls have predicted that the party would dethrone the 25-year-old Left Front government in Tripura.However, a third exit poll predicts a close contest between the CPM and the BJP in the 60-member assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X