ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲಾಖ್ ಪದ್ಧತಿ ಅಸಾಂವಿಧಾನಿಕ : ಅಲಹಾಬಾದ್ ಕೋರ್ಟ್

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 08 : ಮೂರು ಬಾರಿ ತಲಾಖ್ ಅಂತ ಹೇಳಿ ಮುಸ್ಲಿಂ ಮಹಿಳೆಗೆ ವಿಚ್ಛೇದನ ನೀಡುವ ಸಂಪ್ರದಾಯ ಅಸಂವಿಧಾನಕವಾದದ್ದು ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಐತಿಹಾಸಿಕ ತೀರ್ಮಾನ ನೀಡಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಇರುವ ತಲಾಖ್ ತಲಾಖ್ ತಲಾಖ್ ಪದ್ಧತಿ ಅಸಂವಿಧಾನಕ ಮಾತ್ರವಲ್ಲ, ಮುಸ್ಲಿಂ ಮಹಿಳೆಯರ ಹಕ್ಕುಗಳ ನಿಯಮಗಳನ್ನು ಕೂಡ ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿಗಳು ನುಡಿದಿದ್ದಾರೆ.

Triple talaq unconstitutional : Allahabad High Court

ಸಂವಿಧಾನಕ್ಕಿಂತ ಯಾವ ವೈಯಕ್ತಿಕ ಕಾನೂನು ಕೂಡ ಮೇಲಿನದಲ್ಲ. ಹೀಗಾಗಿ, ಮೂರು ಬಾರಿ ತಲಾಖ್ ನೀಡಿ ಮಹಿಳೆಗೆ ವಿಚ್ಛೇದನ ನೀಡುವ ಪದ್ಧತಿಗೆ ಇತಿಶ್ರೀ ಹಾಡಲೇಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಮೂರು ಬಾರಿ ತಲಾಖ್ ನೀಡುವ ಪದ್ಧತಿಯನ್ನು ಕಿತ್ತುಹಾಕಬೇಕು ಎಂದು ಹಲವಾರು ಮಹಿಳೆಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅಸಹ್ಯಕರ ಪದ್ಧತಿಯಿಂದ ಲಿಂಗ ತಾರತಮ್ಯವಾಗುತ್ತಿದ್ದು, ಮುಸ್ಲಿಂ ಪುರುಷ ಹಾಗು ಮಹಿಳೆಯರ ನಡುವಿನ ಸಮಾನತೆಯ ವಿರುದ್ಧವಾಗಿದೆ ಎಂದು ಕೇಂದ್ರ ಸಹ ಕೋರ್ಟಿಗೆ ತಿಳಿಸಿದೆ.

ಆದರೆ, ಈ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದ್ದು, ಬಲವಂತದ ಮದುವೆಯಿಂದ ಮಹಿಳೆಯನ್ನು ನರಕಕ್ಕೆ ತಳ್ಳುವ ಬದಲು ತಲಾಖ್ ನೀಡುವುದೇ ಉತ್ತಮ ಎಂದು ಅಭಿಪ್ರಾಯ ಮಂಡಿಸಿದೆ. ಧಾರ್ಮಿಕವಾಗಿ ನೀಡಲಾಗಿರುವ ಹಕ್ಕುಗಳನ್ನು ಪ್ರಶ್ನಿಸುವ ಹಕ್ಕು ಕಾನೂನಿಗೆ ಇಲ್ಲ ಎಂದೂ ಹೇಳಿದೆ.

ಇಂಥ ತೀರ್ಪು ಎಂದೋ ಆಗಬೇಕಿತ್ತು. ಈಗಲಾದರೂ ಮುಸ್ಲಿಂ ಸಹೋದರಿಯರಿಗೆ ಹೆಚ್ಚಿನ ಹಕ್ಕು, ಹೆಚ್ಚು ಭದ್ರತೆ, ಅವರ ಜೀವಕ್ಕೆ ಹೆಚ್ಚು ಗೌರವ ದೊರೆತಂತಾಗುತ್ತದೆ ಎಂದು ಕೇಂದ್ರದ ಮಾಜಿ ಸಚಿವೆ, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಸಂತಸ ವ್ಯಕ್ತಪಡಿಸಿದ್ದಾರೆ.

English summary
The Allahabad High Court on Thursday termed the Islamic practice of divorcing a woman by uttering the word 'talaq' thrice as unconstitutional. It has also observed that such practice violates rights of muslim women and does not ensure security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X