ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನ ಮಂತ್ರಿಯಾಗಿ ಸಮರ್ಥವಾಗಿ ಕೆಲಸ

|
Google Oneindia Kannada News

ನೆಹರೂ ನಂತರ ಯಾರು? ಎಂಬ ಪ್ರಶ್ನೆ ದೇಶದ ಮುಂದಿದ್ದಾಗ 1964ರ ಜೂನ್ 9ರಂದು ದೇಶದ ಪ್ರಧಾನ ಮಂತ್ರಿ ಪದವಿ ಸ್ವೀಕರಿಸಿದ ಶಾಸ್ತ್ರಿಯವರು ತಮ್ಮ ಸಮರ್ಥ ಕಾರ್ಯದ ಮೂಲಕ ಆ ಪ್ರಶ್ನೆಗೆ ಉತ್ತರ ನೀಡಿದರು. 1965ರ ಪಾಕಿಸ್ತಾನದ ವಿರುದ್ಧದ 33 ದಿನಗಳ ಯುದ್ಧದಲ್ಲಿ ಇವರು ಸಮರ್ಥ ರೀತಿಯಲ್ಲಿ ದೇಶದ ಸೇನಾಪಡೆಗಳನ್ನು ಮುನ್ನಡೆಸಿದರು.

ರಷ್ಯಾದ ತಾಷ್ಕೆಂಟ್‍ನಲ್ಲಿ 1966ರ ಜನವರಿ 3 ರಿಂದ 10ವರೆಗೆ ಭಾರತ-ಪಾಕ್ ನಡುವೆ ನಡೆದ ಮಾತುಕತೆಯ ನಂತರ ಶಾಂತಿ ಒಪ್ಪಂದ ಜಾರಿಗೆ ಬಂತು. ಈ ಒಪ್ಪಂದದ ವೇಳೆಯು ಶಾಸ್ತ್ರಿಜಿ ಅವರು ತೋರಿದ ಜಾಣ್ಮೆ ಅನನ್ಯವಾಗಿತ್ತು. ಶಾಂತಿ ಒಪ್ಪಂದಕ್ಕೆ ಸಹಿಯಾದ ದಿನವೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಾಷ್ಕೆಂಟ್‍ನಲ್ಲಿ ನಿಧನರಾದುದು ಭಾರತೀಯರ ತೀವ್ರ ನೋವಿಗೆ ಕಾರಣವಾಯಿತು. ಭಾರತ ಸರ್ಕಾರವು ಅವರ ನಿಧನಾನಂತರ 1966ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿತು.

ದೇಶದ ರೈತರು ಮತ್ತು ಸೇನೆಯ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿದ್ದ ಶಾಸ್ತ್ರಿ ಅವರು 'ಜೈ ಜವಾನ್ ಜೈ ಕಿಸಾನ್' ಘೋಷಣೆ ಮಾಡಿದರು. ರೈತರಿಗಾಗಿ ಹಲವು ಯೋಜನೆಗಳನ್ನು ಆರಂಭಿಸಿದರು. ಪ್ರಧಾನ ಮಂತ್ರಿ ಆದರೂ ಸರಳತೆಯಿಂದಲೇ ಬದುಕಿ ಭಾರತೀಯರಿಗೆ ದಾರಿ ದೀಪವಾಗಿದ್ದರು.

india

ತಮ್ಮ ಆಡಳಿತ ವೈಖರಿ ಮತ್ತು ಸರಳ ನಡೆ-ನುಡಿಯಿಂದ ವಿರೋಧ ಪಕ್ಷದ ಪ್ರೀತಿಯನ್ನೂ ಗಳಿಸಿದರು. ದೇಶದಲ್ಲಿ ಆಹಾರದ ಕೊರತೆ ಸಂಭವಿಸಬಹುದಾದ ಹಿನ್ನೆಲೆಯಲ್ಲಿ ದೇಶದ ಜನತೆ ವಾರಕ್ಕ ಒಮ್ಮೆ ಒಂದು ಹೊತ್ತಿನ ಊಟ ತ್ಯಜಿಸುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ಕರೆಕೊಟ್ಟು, ಅವರು ತಾವೂ ಅದನ್ನು ಅನುಸರಿಸಿದರು.

ಮಹಾತ್ಮಾ ಗಾಂಧೀಜಿ ಅವರ ರಾಜಕೀಯ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಲಾಲ್ ಬಹದ್ದೂರ ಶಾಸ್ತ್ರಿ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ತೋರಿದ ಸರಳ ನಡೆನುಡಿಗಳು ಧೈರ್ಯ-ಆತ್ಮ ಸ್ಥೈರ್ಯಗಳು ನಮಗೆ ಮಾರ್ಗದರ್ಶಕವಾಗಿದೆ.

ಬರಹ : ಟಿ.ಸಿ. ಮಂಜುನಾಥ ಬಾಬು,
ಸಹಾಯಕ ನಿರ್ದೇಶಕರು

English summary
Jai Jawan Jai Kisan : Remembering former PM Lal Bahadur Shastri on his 111th birth anniversary. Tribute to a proud son of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X