• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Bharat Bandh : ಫೆ.26ಕ್ಕೆ ಭಾರತ್ ಬಂದ್; ಸಾರಿಗೆ ಸಂಘಟನೆಗಳಿಂದ ಪ್ರತಿಭಟನೆ

|

ನವದೆಹಲಿ, ಫೆಬ್ರವರಿ 25: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಇ-ವೇ ಬಿಲ್ ಹಾಗೂ ಇಂಧನ ಬೆಲೆ ಏರಿಕೆ ಖಂಡಿಸಿ ಫೆಬ್ರವರಿ 26ಕ್ಕೆ ಅಖಿಲ ಭಾರತ ವರ್ತಕರ ಒಕ್ಕೂಟ (CAIT) ಭಾರತ್ ಬಂದ್‌ಗೆ ಕರೆ ಕೊಟ್ಟಿದೆ.

ಅಖಿಲ ಭಾರತ ಸಾರಿಗೆ ಸಂಘ CAIT ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಚಕ್ಕಾ ಜಾಮ್ ನಡೆಸುವುದಾಗಿ ತಿಳಿದುಬಂದಿದೆ. ಎಲ್ಲಾ ರಾಜ್ಯ ಸಾರಿಗೆ ಸಂಘಟನೆಗಳು ತಮ್ಮ ಬೆಂಬಲವನ್ನು ಖಚಿತಪಡಿಸಿದ್ದು, ಅಂದು ಸಾರಿಗೆ ವಾಹನಗಳು ರಸ್ತೆಗಿಳಿಯುವುದಿಲ್ಲ ಎನ್ನಲಾಗಿದೆ. ಸುಮಾರು 40 ಲಕ್ಷ ಟ್ರಕ್‌ಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿದುಬಂದಿದೆ. ಮುಂದೆ ಓದಿ...

 ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಸರಕು ವಾಹನ ನಿಲುಗಡೆ

ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಸರಕು ವಾಹನ ನಿಲುಗಡೆ

ಇಂಧನ ದರ ಏರಿಕೆ, ಸರಕು ಹಾಗೂ ಸೇವಾ ತೆರಿಗೆ- ಜಿಎಸ್‌ಟಿ ಹಾಗೂ ಹೊಸ ಇ-ವೇ ಬಿಲ್ ನೀತಿ ವಿರುದ್ಧ ಭಾರತ್ ಬಂದ್ ನಡೆಸಲಾಗುವುದು ಎಂದು ಸಾರಿಗೆ ಸಂಘಟನೆ ಮಾಹಿತಿ ನೀಡಿದೆ. ಈ ಹೊಸ ಇ-ವೇ ಬಿಲ್ ನೀತಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನೆ ಮೂಲಕ ಒತ್ತಾಯಿಸಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ. ಎಲ್ಲಾ ಸಾರಿಗೆ ಸಂಸ್ಥೆಗಳು ವಾಹನಗಳನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ಗಟೆವರೆಗೆ ನಿಲ್ಲಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ.

ಫೆ.26ರಂದು ಭಾರತ್ ಬಂದ್; ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆಗಳು ಸ್ಥಗಿತಫೆ.26ರಂದು ಭಾರತ್ ಬಂದ್; ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆಗಳು ಸ್ಥಗಿತ

 ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ

ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ

ಅಂದು ಬಹುಪಾಲು ಸಾರಿಗೆ ವಾಹನಗಳು ರಸ್ತೆಗಿಳಿಯದ ಕಾರಣ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ ಎನ್ನಲಾಗಿದೆ. ಎಲ್ಲಾ ಸಾರಿಗೆ ಗೋಡೌನ್‌ಗಳ ಬಳಿ ಪ್ರತಿಭಟನಾ ಬ್ಯಾನರ್‌ಗಳನ್ನು ಹಾಕಲಿದ್ದು, ಒಂದು ದಿನದ ಬುಕಿಂಗ್ ತಿರಸ್ಕರಿಸುವುದಾಗಿ AITWA ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ತಿಳಿಸಿದ್ದಾರೆ. ಸುಮಾರು 40 ಲಕ್ಷ ಟ್ರಕ್‌ಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿದುಬಂದಿದೆ.

"ಇ-ವೇ ಬಿಲ್ ದುಬಾರಿ; ವಹಿವಾಟಿಗೇ ಧಕ್ಕೆ"

ಈಗಿನ ಇ-ವೇ ಬಿಲ್‌ ನೀತಿಯಿಂದ ಅನನುಕೂಲ ಉಂಟಾಗಿದೆ. ಜೊತೆಗೆ ಇ-ವೇ ಬಿಲ್‌ ದಂಡದ ಮೊತ್ತವೂ ದುಬಾರಿಯಾಗಿದೆ. ಸಣ್ಣ ಹಾಗೂ ಮಧ್ಯಮ ಸರಕು ಸಾಗಣೆದಾರರು, ಅದರಲ್ಲೂ ಚಿಲ್ಲರೆ ಸಾಗಣೆದಾರರಿಗೆ ಇದು ದುಬಾರಿ ಹೊರೆ ಎನಿಸಿದೆ. ಲಕ್ಷಗಟ್ಟಲೆ ದಂಡದ ಮೊತ್ತವನ್ನು ಪಾವತಿಸಬೇಕಾಗಿದ್ದು, ವಹಿವಾಟಿಗೇ ಧಕ್ಕೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.

 ಅಖಿಲ ಭಾರತ ಸಾರಿಗೆ ಸಂಘದಿಂದ ಪತ್ರ

ಅಖಿಲ ಭಾರತ ಸಾರಿಗೆ ಸಂಘದಿಂದ ಪತ್ರ

ಈ ಸಂಬಂಧ ಅಖಿಲ ಭಾರತ ಸಾರಿಗೆ ಸಂಘ ಕೇಂದ್ರಕ್ಕೆ ಪತ್ರ ಬರೆಯಲಿದ್ದು, ಸಾರಿಗೆ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳನ್ನು ಉಲ್ಲೇಖಿಸಲಾಗುವುದು. ಅದರಲ್ಲೂ ಜಿಎಸ್‌ಟಿ ಅಡಿಯಲ್ಲಿನ ಇ-ವೇ ಬಿಲ್ ನೀತಿ ಹಾಗೂ ಇಂಧನ ಬೆಲೆ ಏರಿಕೆ ಕುರಿತು ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದೆ. ಇ-ಇನ್‌ವಾಯ್ಸ್‌ ಉತ್ತಮವಾಗಿದ್ದು, ಫಾಸ್ಟ್‌ಟ್ಯಾಗ್ ಮೂಲಕ ಸರ್ಕಾರ ವಾಹನಗಳ ಟ್ರ್ಯಾಕ್ ಮಾಡಬಹುದಾಗಿದೆ ಎಂದು ಸಂಘಟನೆ ತಿಳಿಸಿದೆ.

English summary
All India Transporters Welfare Association has extended support to Bharat Bandh call by CAIT on 26 February against GST, new e way bill and fuel price hike
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X