ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗದ ರೈಲುಗಳಲ್ಲಿ ಇನ್ನೂ ಕೇವಲ ಎಸಿ ಬೋಗಿ ಮಾತ್ರ

|
Google Oneindia Kannada News

ನವದೆಹಲಿ, ಅಕ್ಟೋಬರ್ 12 : ಭಾರತೀಯ ರೈಲ್ವೆ ನಿಗದಿತ ಮಾರ್ಗದಲ್ಲಿ ಸಂಚಾರ ನಡೆಸುವ ರೈಲುಗಳಲ್ಲಿ ಹವಾನಿಯಂತ್ರಿತ ಬೋಗಿಗಳನ್ನು ಮಾತ್ರ ಅಳವಡಿಕೆ ಮಾಡಲು ತೀರ್ಮಾನ ಕೈಗೊಂಡಿದೆ.

ನಿಗದಿತ ಮಾರ್ಗದಲ್ಲಿ ಗಂಟೆಗೆ 130 ಮತ್ತು ಅದಕ್ಕಿಂತ ಹೆಚ್ಚು ವೇಗದಲ್ಲಿ ಸಂಚಾರ ನಡೆಸುವ ರೈಲುಗಳಲ್ಲಿ ಇನ್ನು ಮುಂದೆ ಎಸಿ ಬೋಗಿಗಳು ಮಾತ್ರ ಇರಲಿವೆ. ಈಗಿರುವ ಎಲ್ಲಾ ಹವಾನಿಯಂತ್ರಣ ರಹಿತ ಬೋಗಿಗಳಲ್ಲು ಎಸಿ ಬೋಗಿಯಾಗಿ ಪರಿವರ್ತನೆ ಮಾಡಲಾಗುತ್ತದೆ.

ರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳುರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳು

ಪ್ರಸ್ತುತ ಹಲವು ಮಾರ್ಗದಲ್ಲಿ ಮೇಲ್/ಎಕ್ಸ್‌ಪ್ರೆಸ್ ರೈಲುಗಳ ವೇಗ ಪ್ರತಿ ಗಂಟೆಗೆ 110 ಕಿ. ಮೀ. ಇದೆ. ರಾಜಧಾನಿ, ಶತಾಬ್ದಿ ಸೇರಿದಂತೆ ಕೆಲವು ರೈಲುಗಳು ಮಾತ್ರ ಗಂಟೆಗೆ 120 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲು ಒಪ್ಪಿಗೆ ನೀಡಲಾಗಿದೆ.

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ

Train Which Run 130 KM Per Hour Only Air Conditioned Coaches

ಈ ರೈಲುಗಳ ಬೋಗಿಗಳು 130 ಕಿ. ಮೀ. ವೇಗಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ರೈಲಿನ ವೇಗ 130 ಕಿ. ಮೀ. ಮೀರಿದರೆ ಎಸಿ ಬೋಗಿಗಳು ಅತ್ಯಗತ್ಯವಾಗಿವೆ. ರೈಲ್ವೆ ಈಗ ವೇಗವನ್ನು ಹೆಚ್ಚಿಸಲು ಗಮನಹರಿಸಿದ್ದು, ಇದಕ್ಕಾಗಿ ಎಸಿ ಬೋಗಿಗಳನ್ನು ಅಳವಡಿಕೆ ಮಾಡಲಾಗುತ್ತದೆ.

ರೈಲ್ವೆ ಅಭಿವೃದ್ಧಿಗೆ ಪ್ರಯಾಣಿಕರಿಂದಲೇ ಬಳಕೆ ದರ ವಸೂಲಿ, ಟಿಕೆಟ್ ಬೆಲೆ ಏರಿಕೆ ಸಾಧ್ಯತೆರೈಲ್ವೆ ಅಭಿವೃದ್ಧಿಗೆ ಪ್ರಯಾಣಿಕರಿಂದಲೇ ಬಳಕೆ ದರ ವಸೂಲಿ, ಟಿಕೆಟ್ ಬೆಲೆ ಏರಿಕೆ ಸಾಧ್ಯತೆ

ಗಂಟೆಗೆ 130 ರಿಂದ 160 ಕಿ. ಮೀ. ವೇಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ನಾನ್ ಎಸಿ ಸ್ಲೀಪರ್ ಕೋಚ್‌ಗಳನ್ನು ಎಸಿ ಕೋಚ್‌ಗಳಾಗಿ ಪರಿವರ್ತನೆ ಮಾಡಲಾಗುತ್ತದೆ. 110 ಕಿ. ಮೀ.ಗಿಂತ ಕಡಿಮೆ ವೇಗದಲ್ಲಿ ಸಂಚಾರ ನಡೆಸುವ ರೈಲುಗಳಲ್ಲಿ ನಾನ್ ಎಸಿ ಕೋಚ್‌ಗಳು ಇರಲಿವೆ.

ದರ ಹೆಚ್ಚಳವಾಗಲಿದೆಯೇ? : ರೈಲುಗಳಿಗೆ ಎಸಿ ಬೋಗಿಗಳನ್ನು ಅಳವಡಿಕೆ ಮಾಡಿದರೆ ದರಗಳು ಹೆಚ್ಚಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಆದರೆ, ದರ ದುಬಾರಿಯಾಗಿರುವುದಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮೊದಲ ಹಂತದಲ್ಲಿ 83 ಕೋಚ್‌ಗಳನ್ನು ಅಳವಡಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ 100 ರೈಲುಗಳಿಗೆ ಸಂಪೂರ್ಣವಾಗಿ ಎಸಿ ಬೋಗಿ ಅಳವಡಿಕೆ ಮಾಡಲಾಗುತ್ತದೆ.

ನಾನ್ ಎಸಿ ಸ್ಲೀಪರ್ ಬೋಗಿಯಲ್ಲಿ 72 ಸೀಟುಗಳು ಲಭ್ಯವಿದ್ದರೆ ಎಸಿ ಕೋಚ್‌ನಲ್ಲಿ 83 ಸೀಟು ಇರಲಿದೆ. ಬೋಗಿಗಳನ್ನು ವರ್ಕ್‌ಶಾಪ್‌ಗಳಿಗೆ ಕಳಿಸಿ, ಮರು ವಿನ್ಯಾಸ ಮಾಡುವ ಕಾರ್ಯ ಈಗಾಗಲೇ ಆರಂಭವಾಗಿದೆ.

English summary
Indian railways decided attach only air-conditioned coaches to the trains on identified routes which will run in a speed of 130 km per hour or above.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X