ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್; ಏ.15 ರಿಂದ ರೈಲು ಸೇವೆ ಆರಂಭವಾಗುವುದಿಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 09 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್ ಡೌನ್ ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿದೆ. ಏಪ್ರಿಲ್ 15ರಿಂದಲೇ ರೈಲು ಸೇವೆ ಆರಂಭವಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಆದರೆ, ಕೇಂದ್ರ ಸರ್ಕಾರದ ಮುಂದೆ ರೈಲು ಸೇವೆಯನ್ನು ತಕ್ಷಣ ಆರಂಭಿಸುವ ಪ್ರಸ್ತಾವನೆ ಇಲ್ಲ.

ಲಾಕ್ ಡೌನ್ ಮುಂದುವರೆಸುವ ಬಗ್ಗೆ ದೇಶಾದ್ಯಂತ ಚರ್ಚೆಗಳು ಆರಂಭವಾಗಿವೆ. ವಿವಿಧ ರಾಜ್ಯಗಳು ಲಾಕ್ ಡೌನ್‌ ಏಪ್ರಿಲ್ 30ರ ತನಕ ಮುಂದುವರೆಸಬೇಕು ಎಂಬ ಬೇಡಿಕೆ ಇಟ್ಟಿವೆ. ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ

ಏಪ್ರಿಲ್ 12ರಂದು ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಅಂತಿಮ ಆದೇಶ ಹೊರಡಿಸುವ ಸಾಧ್ಯತೆ ಇದೆ. ಏಪ್ರಿಲ್ 14ರಂದು ಲಾಕ್ ಡೌನ್ ಮುಗಿದರೂ ಏಪ್ರಿಲ್ 15ರಂದು ರೈಲು ಸೇವೆಗಳು ಆರಂಭವಾಗುವುದಿಲ್ಲ.

ಬೆಂಗಳೂರು ರೈಲು ನಿಲ್ದಾಣದಲ್ಲಿ 40 ಕ್ವಾರಂಟೈನ್ ಕೋಚ್ ಸಿದ್ಧ ಬೆಂಗಳೂರು ರೈಲು ನಿಲ್ದಾಣದಲ್ಲಿ 40 ಕ್ವಾರಂಟೈನ್ ಕೋಚ್ ಸಿದ್ಧ

Train Service Will Not Resume Immediately After April 15

ವಿವಿಧ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಆದ್ದರಿಂದ, ರೈಲು ಸೇವೆ ಆರಂಭವಾದರೆ ಜನರ ಸಂಚಾರ ಆರಂಭವಾಗಿ ಕೊರೊನಾ ಹರಡಬಹುದು. ಅದರಲ್ಲೂ ಅಲ್ಲಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಒಂದೇ ಬಾರಿಗೆ ತವರಿನತ್ತ ಪ್ರಯಾಣಿಸಬಹುದು.

ಲಾಕ್ ಡೌನ್ ; ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ ಲಾಕ್ ಡೌನ್ ; ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ

ಲಾಕ್ ಡೌನ್ ಪರಿಣಾಮ ರೈಲು ಸೇವೆ ಸಂಪೂರ್ಣವಾಗಿ ಸ್ಥಗಿತವಾಗಿದೆ. ಏಪ್ರಿಲ್ 14ರ ಬಳಿಕ ಲಾಕ್ ಡೌನ್ ವಿಸ್ತರಣೆಯಾಗದಿದ್ದರೂ ರೈಲು ಸೇವೆಯನ್ನು ಆರಂಭಿಸದಿರಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಪ್ರಸ್ತುತ ಪ್ರಯಾಣಿಕ ರೈಲು ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಅಗತ್ಯ ವಸ್ತುಗಳ ಸಾಗಾಟಕ್ಕಾಗಿ ಗೂಡ್ಸ್ ರೈಲುಗಳನ್ನು ಓಡಿಸಲಾಗುತ್ತಿದೆ.

English summary
Even as hectic discussions are on about the staggered lifting of the lockdown the Centre is currently not inclined to open up train services from April 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X