ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಹಿರಿಯ ನಾಗರಿಕ ಟಿಕೆಟ್ ರಿಯಾಯಿತಿ ಇಲ್ಲ, ರೈಲ್ವೆ

|
Google Oneindia Kannada News

ನವದೆಹಲಿ, ಜುಲೈ 22; ರೈಲು ಪ್ರಯಾಣದ ವೇಳೆ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಟಿಕೆಟ್ ರಿಯಾಯಿತಿಯನ್ನು ಸದ್ಯಕ್ಕೆ ಮರುಜಾರಿಗೊಳಿಸುವುದಿಲ್ಲ. ಅದರಂತೆ ಕ್ರೀಡಾಪಟುಗಳಿಗೂ ನೀಡುತ್ತಿದ್ದ ರಿಯಾಯಿತಿ ಲಭ್ಯವಿರುವುದಿಲ್ಲ.

ಮುಂಗಾರು ಅಧಿವೇಶನದ ಲೋಕಸಭೆ ಕಲಾಪದ ವೇಳೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಸದ್ಯ ಇಲಾಖೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಹಿರಿಯ ನಾಗರಿಕರಿಗೆ ಪ್ರಯಾಣದರ ರಿಯಾಯಿತಿ ಮರುಜಾಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಹೊಸ ರೈಲು, ಎಲ್ಲಿಂದ ಎಲ್ಲಿಗೆ ಪಯಣ? ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಹೊಸ ರೈಲು, ಎಲ್ಲಿಂದ ಎಲ್ಲಿಗೆ ಪಯಣ?

ಕಡಿಮೆ ಪ್ರಯಾಣ ದರ, ರಿಯಾಯಿತಿಗಳ ಕಾರಣ ಇಲಾಖೆ ಈಗಾಗಲೇ ಬಹಳಷ್ಟು ನಷ್ಟ ಅನುಭವಿಸಿದೆ. ವಿವಿಧ ದರ್ಜಗಳಲ್ಲಿನ ಪ್ರಯಾಣದರಗಳು ಕಡಿಮೆ ಇದೆ ಎಂದು ಸಚಿವರು ವಿವರಣೆ ನೀಡಿದರು.

ಆಲಮಟ್ಟಿ-ಚಿತ್ರದುರ್ಗ ಹೊಸ ರೈಲು ಮಾರ್ಗ; ಶೀಘ್ರ ವರದಿ ಸಲ್ಲಿಕೆ ಆಲಮಟ್ಟಿ-ಚಿತ್ರದುರ್ಗ ಹೊಸ ರೈಲು ಮಾರ್ಗ; ಶೀಘ್ರ ವರದಿ ಸಲ್ಲಿಕೆ

Train Fare Discount For Senior Citizens Will Not Bring Back

ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಟಿಕೆಟ್‌ಗಳ ಆದಾಯ ಕಡಿಮೆಯಾಗಿದೆ. 2019-20ಕ್ಕೆ ಹೋಲಿಕೆ ಮಾಡಿದರೆ ಆರ್ಥಿಕ ನಷ್ಟವಾಗುತ್ತಿದೆ. ರಿಯಾಯಿತಿ ನೀಡುವುದರಿಂದ ಹೆಚ್ಚಿನ ಹೊರೆಯಾಗಲಿದೆ ಎಂದು ಸಚಿವರು ತಿಳಿಸಿದರು.

ಸಚಿವರ ಜೊತೆ ಭಾರತ್ ಗೌರವ್ ರೈಲು ಬೋಗಿ ಪರಿಶೀಲಿಸಿದ ರೋಹಿಣಿ ಸಿಂಧೂರಿ ಸಚಿವರ ಜೊತೆ ಭಾರತ್ ಗೌರವ್ ರೈಲು ಬೋಗಿ ಪರಿಶೀಲಿಸಿದ ರೋಹಿಣಿ ಸಿಂಧೂರಿ

ಹಿರಿಯ ನಾಗರಿಕರು, ಕ್ರೀಡಾಪಟುಗಳಿಗೆ ರೈಲ್ವೆ ಟಿಕೆಟ್‌ನಲ್ಲಿ ರಿಯಾಯಿತಿ ನೀಡುವ ಯೋಜನೆಯನ್ನು ಸದ್ಯಕ್ಕೆ ಮರುಜಾರಿಗೊಳಿಸುವುದಿಲ್ಲ ಎಂದು ರೈಲ್ವೆ ಸಚಿವರು ತಮ್ಮ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

2017-18ರಲ್ಲಿ 1491 ಕೋಟಿ, 2018-19ರಲ್ಲಿ 1636 ಕೋಟಿ, 2019-20ರಲ್ಲಿ 1667ಕೋಟಿ ಆದಾಯ ರೈಲ್ವೆ ಇಲಾಖೆಗೆ ಬಂದಿದೆ ಎಂದು ಲೋಕಸಭೆಯಲ್ಲಿ ಮಾಹಿತಿ ನೀಡಲಾಗಿದೆ.

2019-20 6.18 ಕೋಟಿ, 2020-21ರಲ್ಲಿ 1.90 ಕೋಟಿ ಮತ್ತು 2021-22ರಲ್ಲಿ 5.55 ಕೋಟಿ ಹಿರಿಯ ನಾಗರಿಕರು ಕಾಯ್ದಿರಿಸಿದ ಸೀಟುಗಳಲ್ಲಿ ಪ್ರಯಾಣ ಮಾಡಿದ್ದಾರೆ. 2021-22ರಲ್ಲಿ ಹಿರಿಯ ನಾಗರಿಕರ ಪ್ರಯಾಣದ ಸಂಖ್ಯೆ ಕಡಿಮೆಯಾಗಲು ಕೋವಿಡ್ ಕಾರಣ ಎಂದು ಅಂದಾಜಿಸಲಾಗಿದೆ.

2019-20ರಲ್ಲಿ 22.62 ಲಕ್ಷ ಹಿರಿಯ ನಾಗರಿಕರು ಹಿರಿಯ ನಾಗರಿಕರಿಗೆ ನೀಡುವ ಟಿಕೆಟ್ ರಿಯಾಯಿತಿಯನ್ನು ತಿರಸ್ಕರಿಸಿದ್ದಾರೆ. ರೈಲ್ವೆ ವಲಯದ ಅಭಿವೃದ್ಧಿಗಾಗಿ ವಿನಾಯಿತಿ ರದ್ದುಗೊಳಿಸಿ ಎಂದು ಅವರು ಹೇಳಿದ್ದಾರೆ.

ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಮಾತ್ರ ಇಲಾಖೆ ಓಡಿಸುತ್ತಿತ್ತು. ಆಗ ಹಿರಿಯ ನಾಗರಿಕರ ಪ್ರಯಾಣಕ್ಕೆ ಇದ್ದ ವಿನಾಯಿತಿಯನ್ನು ಮುಂದಿನ ಆದೇಶದ ತನಕ ಹಿಂಪಡೆಯಲಾಗಿತ್ತು. ಆದರೆ ಅದನ್ನು ಮತ್ತೆ ಜಾರಿಗೊಳಿಸಿಲ್ಲ.

Recommended Video

Basavaraj Bommai ನನ್ನ ಅಣ್ಣ ಇದ್ದಂಗೆ...ನನ್ಮೇಲೆ ಸಿಡುಕೋ ಹಕ್ಕು ಅವರಿಗಿದೆ ಎಂದ ಪ್ರತಾಪ್ ಸಿಂಹ | Oneindia

English summary
In a monsoon session railways department informed lok sabha that department has no intention of bringing back concessions on tickets for senior citizens or sports persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X