ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯಿಂದ ರೈಲು ರದ್ದು: ಮದ್ರಾಸ್ ಐಐಟಿ ವಿದ್ಯಾರ್ಥಿಗೆ ಭಾರತೀಯ ರೈಲ್ವೇ ಮಾಡಿದ ಸಹಾಯವೇನು?

|
Google Oneindia Kannada News

ಭಾರೀ ಮಳೆಯಿಂದಾಗಿ ರೈಲು ರದ್ದುಗೊಳ್ಳುತ್ತಿರುವ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ. ಮದ್ರಾಸ್ ಐಐಟಿ ವಿದ್ಯಾರ್ಥಿಯೊಬ್ಬರು ತಮ್ಮ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗದೆ ಭಾರತೀಯ ರೈಲ್ವೆಯ ಅಧಿಕಾರಿಗಳು ಅವರಿಗೆ ಸಹಾಯ ಮಾಡಿರುವುದು ವಿಡಿಯೋ ಮೂಲಕ ತಿಳಿದು ಬಂದಿದೆ. ಇತ್ತೀಚೆಗಷ್ಟೇ ಭಾರತೀಯ ರೈಲ್ವೇಯ ಅಧಿಕಾರಿಗಳು ಮದ್ರಾಸ್ ಐಐಟಿ ಅವರು ಸ್ಥಳಕ್ಕೆ ತಲುಪಲು ಹೇಗೆ ಸಹಾಯ ಮಾಡಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮದ್ರಾಸ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಸತ್ಯಂ ಗಧ್ವಿ ಅವರ ರೈಲು ಕೊನೆಯ ಕ್ಷಣದಲ್ಲಿ ರದ್ದುಗೊಂಡ ನಂತರ ಏಕ್ತಾ ನಗರ ರೈಲು ನಿಲ್ದಾಣದಲ್ಲಿ ಸಿಲುಕಿಕೊಂಡರು.

ಸತ್ಯಂ ಅವರು ವಡೋದರಾ ರೈಲು ನಿಲ್ದಾಣಕ್ಕೆ ಹೋಗಬೇಕಿತ್ತು. ಅಲ್ಲಿಂದ ಅವರು ಚೆನ್ನೈಗೆ ಕರೆದೊಯ್ಯುವ ಮತ್ತೊಂದು ರೈಲನ್ನು ಅನ್ನು ಹತ್ತಬೇಕಿತ್ತು. ಭಾರಿ ಮಳೆಗೆ ಹಳಿಗಳು ಕೊಚ್ಚಿ ಹೋಗಿದ್ದರಿಂದ ಏಕ್ತಾ ನಗರ ರೈಲು ನಿಲ್ದಾಣದಿಂದ ಹೊರಡಲು ಅವರಿಗೆ ಸಾಧ್ಯವಾಗಲಿಲ್ಲ. ಏಕ್ತಾದಿಂದ ವಡೋದರಾ ರೈಲು ನಿಲ್ದಾಣಕ್ಕೆ ತಲುಪಲು ಇದು ಎರಡು ಗಂಟೆಗಳ ದೀರ್ಘ ಪ್ರಯಾಣವನ್ನು ಒಳಗೊಂಡಿತ್ತು. ಈ ವೇಳೆ ಏಕ್ತಾ ನಗರ ರೈಲು ನಿಲ್ದಾಣದಲ್ಲಿ ರೈಲ್ವೇ ಅಧಿಕಾರಿಗಳು ಸತ್ಯಂ ಅವರ ಸಹಾಯಕ್ಕೆ ಮುಂದಾಗಿದ್ದಾರೆ.

ಅವರು ಸತ್ಯಂ ಅವರಿಗೆ ಒಂದು ಕಾರನ್ನು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸಿಬ್ಬಂದಿ ವ್ಯವಸ್ಥೆ ಮೂಲಕ ವಡೋದರಾ ನಿಲ್ದಾಣಕ್ಕೆ ಸತ್ಯಂ ತಲುಪಿದ್ದಾರೆ. ಬಳಿಕ ರೈಲ್ವೆ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದ ಸತ್ಯಂ, ಅವರ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಡಿಆರ್‌ಎಂ ವಡೋದರ ಇಡೀ ಘಟನೆಯನ್ನು ವಿವರಿಸಿದ್ದಾರೆ.

Train canceled due to rain: Indian Railways lends helping hand to IIT Madras student

"ನಾನು ಬುಕ್ ಮಾಡಿದ ರೈಲು ಏಕ್ತಾ ನಗರದಿಂದ ಹೊರಡಬೇಕಿತ್ತು. ಆದರೆ ಭಾರೀ ಮಳೆಯಿಂದಾಗಿ ಹಳಿಗಳು ಕೊಚ್ಚಿಹೋಗಿದ್ದರಿಂದ ಕೊನೆಯ ಕ್ಷಣದಲ್ಲಿ ರೈಲನ್ನು ರದ್ದುಗೊಳಿಸಲಾಯಿತು" ಎಂದು ಸತ್ಯಂ ಹೇಳುವುದನ್ನು ವೀಡಿಯೊದಲ್ಲಿ ಕೇಳಲಾಗುತ್ತದೆ. "ಏಕ್ತಾ ನಗರದ ಬೆಂಬಲಿಗ ಸಿಬ್ಬಂದಿ" ಅವರಿಗೆ ಕಾರನ್ನು ಬಾಡಿಗೆಗೆ ನೀಡಿದರು ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. "ರೈಲ್ವೆಯ ಪ್ರತಿಯೊಬ್ಬ ಪ್ರಯಾಣಿಕರಿಗೆ ಅವರು ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ" ಎಂದು ಅವರು ಹೇಳಿಕೊಂಡಿದ್ದಾರೆ.

ಇಲ್ಲಿ ವಿಡಿಯೊವನ್ನು ನೋಡಿ:

ಕಾರ್ ಪ್ರಯಾಣ ಉತ್ತಮವಾಗಿತ್ತು ಎಂದು ಸತ್ಯಂ ಹೇಳಿಕೊಂಡಿದ್ದಾರೆ. ವಡೋದರ ನಿಲ್ದಾಣದಲ್ಲಿ ರೈಲನ್ನು ಹಿಡಿಯಲು ಸತ್ಯಂ ಸರಿಯಾದ ಸಮಯಕ್ಕೆ ತಲುಪುವಂತೆ ಚಾಲಕ ಸರಿಯಾದ ಸಮಯಕ್ಕೆ ತಲುಪಿಸಿರುವುದು ತಿಳಿದು ಬಂದಿದೆ. ಅವರು ವಡೋದರಾ ನಿಲ್ದಾಣವನ್ನು ತಲುಪುತ್ತಿದ್ದಂತೆ, ನಿಲ್ದಾಣದಲ್ಲಿ ನೇಮಕಗೊಂಡ ಅಧಿಕಾರಿಗಳು ಅವರಿಗೆ ಸರಿಯಾದ ಪ್ಲಾಟ್‌ಫಾರ್ಮ್ ಅನ್ನು ಹುಡುಕಲು ಮತ್ತು ರೈಲು ಹತ್ತಲು ಸಹಾಯ ಮಾಡಿದರು. ಅವರು ಸತ್ಯಂಗೆ ಅವರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಸಹ ಸಹಾಯ ಮಾಡಿದರು. ಒಬ್ಬ ಪ್ರಯಾಣಿಕನಿಗೆ ಭಾರತೀಯ ರೈಲ್ವೇ ಮಾಡಿದ ಪ್ರಯತ್ನಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಗಳಿಸಿದೆ.

English summary
Video: An IIT Madras student was helped by the officials of the Indian Railways after he was unable to visit his place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X