ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತ್ಯಂತ ವೇಗದ ರೈಲಿನ ಹೆಸರು ವಂದೇ ಭಾರತ್ ಎಕ್ಸ್ ಪ್ರೆಸ್

|
Google Oneindia Kannada News

ಸ್ವದೇಶಿ ನಿರ್ಮಿತ ಟ್ರೇನ್ 18 ಅನ್ನು ವಂದೇ ಭಾರತ್ ಎಕ್ಸ್ ಪ್ರೆಸ್ ಎಂದು ಹೆಸರಿಸಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ. ಈ ರೈಲು ಪ್ರತಿ ಗಂಟೆಗೆ 160 ಕಿಲೋಮೀಟರ್ ‌ಗರಿಷ್ಠ ವೇಗದಲ್ಲಿ ದೆಹಲಿ-ವಾರಾಣಸಿ ಮಧ್ಯೆ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಈ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

16 ಬೋಗಿಗಳುಳ್ಳ ಈ ರೈಲು ನಿರ್ಮಾಣಕ್ಕೆ 18 ತಿಂಗಳು ಸಮಯ ಹಿಡಿದಿದೆ. ಇನ್ನು 97 ಕೋಟಿ ರುಪಾಯಿ ವೆಚ್ಚವಾಗಿದೆ. ರಾಯ್ ಬರೇಲಿಯಲ್ಲಿ ಇರುವ ಇಂಟಿಗ್ರಲ್ ಬೋಗಿ ಕಾರ್ಖಾನೆಯಲ್ಲಿ ಇದರ ನಿರ್ಮಾಣವಾಗಿದೆ. 30 ವರ್ಷಗಳ ಹಿಂದಿನ ಶತಾಬ್ದಿ ಎಕ್ಸ್ ಪ್ರೆಸ್ ನ ಮುಂದಿನ ಹಂತದ ರೈಲು ಇದೆ ಎನ್ನಲಾಗುತ್ತಿದೆ. ದೇಶದ ಮೊದಲ ಲೋಕೋಮೋಟಿವ್ ರಹಿತ ರೈಲು ಇದಾಗಿದೆ.

ರೈಲ್ವೆ ಇಲಾಖೆಯಲ್ಲಿ 2 ವರ್ಷದಲ್ಲಿ 4 ಲಕ್ಷ ಹುದ್ದೆಗೆ ನೇಮಕಾತಿರೈಲ್ವೆ ಇಲಾಖೆಯಲ್ಲಿ 2 ವರ್ಷದಲ್ಲಿ 4 ಲಕ್ಷ ಹುದ್ದೆಗೆ ನೇಮಕಾತಿ

ಪೂರ್ತಿ ಹವಾನಿಯಂತ್ರಿತ ರೈಲಾದ ಇದು ಕಾನ್ಪುರ ಹಾಗೂ ಅಲಹಾಬಾದ್ ನಲ್ಲಿ ನಿಲುಗಡೆ ನೀಡಲಿದೆ. ರೈಲಿನಲ್ಲಿ ಎರಡು ಎಕ್ಸ್ ಕ್ಯುಟಿವ್ ಚೇರ್ ಕಾರ್ಸ್ ಇರಲಿದೆ.

Train 18 named Vande Bharat Express, says railway minister Piyush Goyal

ಬಜೆಟ್‌ಗೂ ಮುನ್ನ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ ಬಜೆಟ್‌ಗೂ ಮುನ್ನ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ

"ಇದು ಸಂಪೂರ್ಣವಾಗಿ ಭಾರತದಲ್ಲೇ ಮಾಡಲಾಗಿದೆ. ಈ ರೈಲಿಗೆ ಸಾರ್ವಜನಿಕರು ಹಲವು ಹೆಸರು ಸೂಚಿಸಿದ್ದರು. ವಂದೇ ಭಾರತ್ ಎಕ್ಸ್ ಪ್ರೆಸ್ ಎಂದು ಹೆಸರಿಡಲು ನಿರ್ಧರಿಸಿದ್ದೇವೆ. ಗಣರಾಜ್ಯೋತ್ಸವ ದಿನಕ್ಕೆ ದೇಶದ ಜನರಿಗೆ ಇದು ಕೊಡುಗೆ. ಈ ರೈಲು ಕಾರ್ಯಾರಂಭಿಸಲು ಚಾಲನೆ ನೀಡುವಂತೆ ಪ್ರಧಾನಿಗಳನ್ನು ಮನವಿ ಮಾಡಲಾಗುವುದು" ಎಂದು ಗೋಯಲ್ ಹೇಳಿದ್ದಾರೆ.

English summary
Indian Railways has named the indigenously manufactured Train 18 as Vande Bharat Express, Railway Minister Piyush Goyal said Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X