ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಬಲ್ ಟಿವಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಟ್ರಾಯ್

|
Google Oneindia Kannada News

ನವದೆಹಲಿ, ಜನವರಿ 13 : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಎನ್‌ಟಿಒ ಆದೇಶಕ್ಕೆ ತಿದ್ದುಪಡಿ ತಂದಿದೆ. ದೇಶದ ಪ್ರಮುಖ ಪ್ರಸಾರ ಕಂಪನಿಗಳು ಟ್ರಾಯ್ ತಂದಿರುವ ತಿದ್ದುಪಡಿಯನ್ನು ವಿರೋಧಿಸಿವೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಟ್ರಾಯ್ ಅಧ್ಯಕ್ಷ ಆರ್. ಎಸ್. ಶರ್ಮಾ, "ನಾವು ಗ್ರಾಹಕರಿಗೆ ಹೆಚ್ಚಿನ ಚಾನಲ್‌ಗಳನ್ನು ಒದಗಿಸುವ ಹೊಸ ಸುಂಕದ ಆದೇಶ (ಎನ್‌ಟಿಒ) ನಿಬಂಧನೆಗಳಿಗೆ ತಿದ್ದುಪಡಿ ತರುತ್ತಿದ್ದೇವೆ" ಎಂದು ಹೇಳಿದರು.

ಟ್ರಾಯ್ ತಂದಿರುವ ತಿದ್ದುಪಡಿ ನಿಯಮದಿಂದಾಗಿ ಡಿಟಿಎಚ್ ಮತ್ತು ಕೇಬಲ್ ಬಿಲ್‌ಗಳು ಈಗಿನ ದರಕ್ಕೆ ಹೋಲಿಕೆ ಮಾಡಿದರೆ ಶೇ 14ರಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಕಡಿಮೆ ಶುಲ್ಕಕ್ಕೆ ಹೆಚ್ಚಿನ ಚಾನೆಲ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಜೀ, ಸೋನಿ ಪಿಕ್ಚರ್, ವಯಾಕಾಮ್ 18 ಸೇರಿದಂತೆ ಪ್ರಮುಖ ದೇಶದ ಪ್ರಮುಖ ಪ್ರಸಾರ ಕಂಪನಿಗಳು ಟ್ರಾಯ್ ತಂದಿರುವ ತಿದ್ದುಪಡಿಯನ್ನು ವಿರೋಧಿಸಿವೆ. ಮಾರ್ಚ್‌ 1ರಿಂದ ನೂತನ ದರಗಳು ಜಾರಿಗೆ ಬರಲಿದ್ದು, ದರ ಎಷ್ಟು ಕಡಿಮೆಯಾಗಲಿದೆ? ಎಂದು ಕಾದು ನೋಡಬೇಕಿದೆ.

19 ರಿಂದ 12 ರೂ. ಗೆ ಇಳಿಕೆ

19 ರಿಂದ 12 ರೂ. ಗೆ ಇಳಿಕೆ

ಟ್ರಾಯ್ ಅಧ್ಯಕ್ಷ ಆರ್. ಎಸ್. ಶರ್ಮಾ, "ಯಾವುದೇ ಚಾನೆಲ್‌ಗೆ ಗುಚ್ಛದಲ್ಲಿನ ಬೆಲೆಗಿಂತ ಹೆಚ್ಚಿನ ಬೆಲೆ ಇರಬಾರದು. ಚಾನೆಲ್‌ಗಳ ಗುಚ್ಛಕ್ಕೆ ಇದ್ದ ದರವನ್ನು ರೂ.19 ರಿಂದ 12ಕ್ಕೆ ಇಳಿಕೆ ಮಾಡಲಾಗಿದೆ. ಗುಚ್ಛವನ್ನು ರೂಪಿಸುವ ಚಾನೆಲ್‌ಗಳ ಎ-ಲಾ-ಕಾರ್ಟೆ ಬೆಲೆಯ ಮೊತ್ತವು ಗುಚ್ಛದ ಬೆಲೆಗಿಂತ 1.5 ಪಟ್ಟು ಹೆಚ್ಚಾಗಬಾರದು" ಎಂದರು.

200 ಚಾನೆಲ್‌ಗಳನ್ನು ಪಡೆಯಲಿದ್ದಾರೆ

200 ಚಾನೆಲ್‌ಗಳನ್ನು ಪಡೆಯಲಿದ್ದಾರೆ

ಇದುವರೆಗೂ 130 ರೂ.ಗಳಿಗೆ 100 ಚಾನೆಲ್ ನೀಡಲಾಗುತ್ತಿತ್ತು. ಇದು ಪ್ರಸಾರ ಭಾರತಿ ಕಡ್ಡಾಯಗೊಳಿಸಿದ ಚಾನೆಲ್‌ಗಳನ್ನು ಒಳಗೊಂಡಿತ್ತು. ಈಗ ಪ್ರಸಾರ ಭಾರತಿ ಚಾನೆಲ್‌ಗಳನ್ನು ಹೊರತುಪಡಿಸಿ 130 ರೂ.ಗಳಲ್ಲಿ 200 ಚಾನೆಲ್‌ಗಳನ್ನು ಗ್ರಾಹಕರಿಗೆ ನೀಡಬೇಕಿದೆ.

ಎನ್‌ಸಿಎಫ್ ಶುಲ್ಕ

ಎನ್‌ಸಿಎಫ್ ಶುಲ್ಕ

ಟ್ರಾಯ್ ತಿದ್ದುಪಡಿ ಮಾಡಿರುವ ನಿಯಮಗಳ ಪ್ರಕಾರ ಒಬ್ಬ ಬಳಕೆದಾರನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕವಿದ್ದರೆ ಆತನಿಗೆ 2 ಮತ್ತು ಆ ನಂತರ ಪಡೆಯುವ ಪ್ರತಿ ಮೊದಲ ಸಂಪರ್ಕಕ್ಕೆ ಶೇ 40ರಷ್ಟು ಮಾತ್ರ ಎನ್‌ಸಿಎಫ್ ಶುಲ್ಕವನ್ನು ವಿಧಿಸಲು ಅವಕಾಶವಿದೆ.

ಮಾರ್ಚ್‌ನಿಂದ ದರ ಜಾರಿ

ಮಾರ್ಚ್‌ನಿಂದ ದರ ಜಾರಿ

ಕೇಬಲ್ ಮತ್ತು ಬ್ರಾಡ್ ಕಾಸ್ಟಿಂಗ್ ಸೇವೆಗಳಿಗೆ ಸಂಬಂಧಿಸಿದಂತೆ ಟ್ರಾಯ್ ತಿದ್ದುಪಡಿ ತಂದಿದೆ. ಇದರ ಅನ್ವಯ ಕೇಬಲ್ ಆಪರೇಟರ್‌ಗಳು ಬದಲಾವಣೆ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ನೂತನ ದರಗಳು ಮಾರ್ಚ್‌ನಿಂದ ಜಾರಿಗೆ ಬರಲಿವೆ.

English summary
Telecom Regulatory Authority of India (TRAI) has reduced the prize of channels forming the part of bouquets from Rs 19 to Rs 12. New price may come to effect from March 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X