ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಟ್ರಾಯ್

|
Google Oneindia Kannada News

ನವದೆಹಲಿ, ನವೆಂಬರ್ 28: ಭಾರತೀಯ ಮೊಬೈಲ್ ನಿಯಂತ್ರಣ ಪ್ರಾಧಿಕಾರವು ಗ್ರಾಹಕರಿಗೆ ಸಿಹಿಸುದ್ದಿ ನೀಡಲು ಮುಂದಾಗಿದೆ.

ಮೊಬೈಲ್ ಕಡೆ, ಡೇಟಾ ಬಳಕೆ ಹಾಗೂ ದರ ನಿಗದಿಗೆ ಸಂಬಂಧಿಸಿ ಗ್ರಾಹಕ ಸ್ನೇಹಿ ನಿಯಮಗಳನ್ನು ಜಾರಿಗೊಳಿಸಲು ಟ್ರಾಯ್ ಕರಡು ನಿಯಮಗಳನ್ನು ಪ್ರಕಟಿಸಿದೆ.

ಈ ಪ್ರಕಾರ ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಕನಿಷ್ಠ ಮಾಸಿಕ ಶುಲ್ಕವನ್ನು ನಿಗದಿ ಮಾಡುವಂತಿಲ್ಲ, ಗ್ರಾಹಕರ ಮೇಲೆ ಅನಿವಾರ್ಯವಾಗಿ ಇಂತಹ ಒತ್ತಡಗಳನ್ನು ಹೇರಬಾರದು ಎಂದು ಟ್ರಾಯ್ ಹೇಳಿದೆ.

mobile

ಇದರ ಜೊತೆಗೆ ಗ್ರಾಹಕರಿಗೆ ಉತ್ತಮ ಸೇವೆ ಸಿಗುವ ನಿಟ್ಟಿನಲ್ಲಿ ಕರೆ ಹಾಗೂಡೇಟಾ ಬಳಕೆಗೆ ಸಂಬಂಧಿಸಿ ಟೆಲಿಕಾಂ ಸಂಸ್ಥೆಗಳು ನಿಖರವಾಗಿ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

ಆದಾಯದ ಮಾರುಕಟ್ಟೆ ಪಾಲು ಬಲಪಡಿಸಿಕೊಂಡ ಜಿಯೋಆದಾಯದ ಮಾರುಕಟ್ಟೆ ಪಾಲು ಬಲಪಡಿಸಿಕೊಂಡ ಜಿಯೋ

ಮೂರನೆಯದಾಗಿ ಟೆಲಿಕಾಂ ಕಂಪನಿಗಳು ನಿಗದಿ ಮಾಡುವ ಶುಲ್ಕ ಸಂರಚನೆ ನಿಯಮ ತಿಳಿಯಲು ಗ್ರಾಹಕರಿಗೆ ಅನುವು ಮಾಡಿಕೊಡಲಾಗುತ್ತದೆ. ಈ ಪ್ರಕಾರ ಗ್ರಾಹಕರು ತಾವು ಖರೀದಿಸಿದ ಮೊಬೈಲ್‌ ಸಿಮ್‌ನ ಪ್ಲಾನ್ ಹಾಗೂ ಅದರ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಅವಕಾಶವಿದೆ.

ಈ ಅಂಶಗಳನ್ನು ಒಳಗೊಂಡ ಕರಡು ನಿಯಮಗಳನ್ನು ಟ್ರಾಯ್ ಪ್ರಕಟಿಸಿದ್ದು ಗ್ರಾಹಕರು ಹಾಗೂ ಟೆಲಿಕಾಂ ಕಂಪನಿಗಳಿಂದ ಅಭಿಪ್ರಾಯ ಕೇಳಿದೆ. ಭಾರತದಲ್ಲಿ ಟೆಲಿಕಾಂ ಕಂಪನಿಗಳು ನಷ್ಟದ ಕೂಪದಲ್ಲಿರುವಾಗ ಟ್ರಾಯ್ ಇಂತಹ ನೂತನ ಪಾರದರ್ಶಕ ವ್ಯವಸ್ಥೆಯ ಜಾರಿಗೆ ಮುಂದಾಗಿದೆ.

English summary
TRAI released a draft rules for the telecom users and company for the better service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X