ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟವರ್ ಹಾನಿ ಪ್ರಕರಣ: ರಿಲಯನ್ಸ್‌ನ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ ಎಂದ ಎಐಕೆಎಸ್‌ಸಿಸಿ

|
Google Oneindia Kannada News

ಚಂಡೀಗಡ, ಜನವರಿ 04: ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ ಜಿಯೋ ಇನ್ಫೋಕಾಮ್ ಲಿಮಿಟೆಡ್ ಇಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ರಿಲಯನ್ಸ್‌ ಸಂಸ್ಥೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸುಳ್ಳು ಪ್ರತಿಪಾದಿಸಲಾಗಿದೆ ಎಂದು ರೈತ ಸಮೂಹವು ತಿಳಿಸಿದೆ.

ದೇಶದ 250 ರೈತ ಸಂಘಟನೆಗಳನ್ನು ಪ್ರತಿನಿಧಿಸುವ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ನ್ಯಾಯಾಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನೀಡಿದ ಅಫಿಡವಿಟ್ ಕೇವಲ "ತನ್ನ ವ್ಯವಹಾರ ಹಿತಾಸಕ್ತಿಗಳನ್ನು ಪೂರೈಸುವ ತಂತ್ರ" ಎಂದು ಹೇಳಿದೆ.

ಕೃಷಿ ಕಾನೂನಿಗೂ ರಿಲಯನ್ಸ್ ಸಂಸ್ಥೆಗೂ ಸಂಬಂಧವಿಲ್ಲ: RILಕೃಷಿ ಕಾನೂನಿಗೂ ರಿಲಯನ್ಸ್ ಸಂಸ್ಥೆಗೂ ಸಂಬಂಧವಿಲ್ಲ: RIL

ರಿಲಯನ್ಸ್ ತನ್ನ ಸೆಲ್ಯುಲಾರ್ ಮೂಲಸೌಕರ್ಯಕ್ಕೆ ಹಾನಿ ಮತ್ತು ಅದರ ಮಳಿಗೆಗಳನ್ನು ಬಲವಂತವಾಗಿ ಮುಚ್ಚುವುದರ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅನುಮೋದನೆ ನೀಡಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಆಗಿದೆ.

Tower Damage Case: Reliance Affidavit In HC Full Of False Claims; Farmers Body

ರಿಲಯನ್ಸ್ ಇಂತಹ ಹಿಂಸಾತ್ಮಕ ಕೃತ್ಯಗಳಿಂದ ಕಂಪೆನಿಯ ಸಾವಿರಾರು ಉದ್ಯೋಗಿಗಳ ಜೀವ ಅಪಾಯದಲ್ಲಿದೆ. ಮತ್ತು ಈ ಎರಡು ರಾಜ್ಯಗಳಲ್ಲಿ ಇರುವ ತುಂಬ ಮುಖ್ಯವಾದ ಸಂವಹನ ಮೂಲಸೌಕರ್ಯ, ಮಾರಾಟ ಮತ್ತು ಸರ್ವೀಸ್ ಔಟ್ ಲೆಟ್ ಗಳಿಗೆ ಹಾನಿ ಮತ್ತು ಸಮಸ್ಯೆಯಾಗಿದೆ ಎಂದು ಎರಡು ರಾಜ್ಯಗಳ ಹೈಕೋರ್ಟ್‌ ಅರ್ಜಿ ಸಲ್ಲಿಸಿತ್ತು.

ಕೇಂದ್ರ ಸರ್ಕಾರದ ಕೃಷಿ ಕಾನೂನಿಗೂ ರಿಲಯನ್ಸ್‌ಗೂ ಯಾವುದೇ ಸಂಬಂಧವಿಲ್ಲ. ಕಂಪನಿಯ ಹೆಸರನ್ನು ಹಾಳು ಮಾಡಲು ಸುಮ್ಮನೆ ತಳುಕು ಹಾಕಲಾಗಿದೆ ಎಂದು ಆರ್‌ಐಎಲ್ ಸ್ಪಷ್ಟಪಡಿಸಿತ್ತು.

ಆದರೆ ರಿಲಯನ್ಸ್‌ನ ಅಫಿಡವಿಟ್‌ನಲ್ಲಿ ಅದು ಬೆಳೆ ಮಾರುಕಟ್ಟೆಗೆ ಪ್ರವೇಶಿಸುವುದಿಲ್ಲ ಮತ್ತು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂಬ ಸುಳ್ಳು ಹಕ್ಕುಗಳಿಂದ ಕೂಡಿದೆ. ರಾಯಗಢ, ಮಹಾರಾಷ್ಟ್ರ ಮತ್ತು ಇತರ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಂಡಿದೆ ಎಂದು ಎಐಕೆಎಸ್‌ಸಿಸಿ ಆರೋಪಿಸಿದೆ.

English summary
Representing 250 farmers' organisations in the country, said the affidavit given by Reliance Industries in the court is simply a "ploy to serve its business interests"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X