ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಚೀನಾಗೆ ಪ್ರವಾಸಿ ವೀಸಾ ನೀಡಲು ಸೂಕ್ತ ಸಮಯವಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 28; "ಚೀನಾದ ವಿವಿಧ ನಗರದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಅರಿವು ಇದೆ. ಪ್ರವಾಸಿ ವೀಸಾವನ್ನು ಮತ್ತೆ ನೀಡಲು ಇದು ಸೂಕ್ತವಾದ ಸಮಯವಲ್ಲ" ಎಂದು ಅರಿಂದಮ್ ಬಾಗ್ಚಿ ಹೇಳಿದರು.

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ, "ಚೀನಾ ತಾನಾಗಿಯೇ ನಮಗೆ ವೀಸಾ ನೀಡಲಿಲ್ಲ. 2020ರಿಂದಲೇ ಭಾರತಕ್ಕೆ ವೀಸಾ ನೀಡುವುದು ನಿಲ್ಲಿಸಿದೆ" ಎಂದರು.

ಸಾಲದ ಸುಳಿಯಲ್ಲಿ ಲಂಕಾ, ಪಾಕ್; ಸಹಾಯಕ್ಕೆ ಚೀನಾ ಯಾಕೆ ಹಿಂದೇಟು? ಸಾಲದ ಸುಳಿಯಲ್ಲಿ ಲಂಕಾ, ಪಾಕ್; ಸಹಾಯಕ್ಕೆ ಚೀನಾ ಯಾಕೆ ಹಿಂದೇಟು?

"ಶಾಂಘೈ ಸೇರಿದಂತೆ ಚೀನಾದ ವಿವಿಧ ನಗರಗಳ ಕೋವಿಡ್ ಪರಿಸ್ಥಿತಿ ಬಗ್ಗೆ ಅರಿವು ಇದೆ. ವೀಸಾ ನೀಡುವ ಬಗ್ಗೆ ಚರ್ಚೆ ಮಾಡಲು ಇದು ಸರಿಯಾದ ಸಮಯವಲ್ಲ" ಎಂದು ಅರಿಂದಮ್ ಬಾಗ್ಚಿ ಹೇಳಿದರು.

Recommended Video

ರಾಜಕೀಯಕ್ಕೆ ಬರೋದು ಬಿಡೋದು ಅವನಿಗೆ ಬಿಟ್ಟಿದ್ದು ! | Oneindia Kannada

 ಚೀನಾದ ನಾಗರಿಕರಿಗೆ ಟೂರಿಸ್ಟ್ ವೀಸಾ ನಿರಾಕರಿಸಿದ ಭಾರತ- ಕಾರಣವೇನು? ಚೀನಾದ ನಾಗರಿಕರಿಗೆ ಟೂರಿಸ್ಟ್ ವೀಸಾ ನಿರಾಕರಿಸಿದ ಭಾರತ- ಕಾರಣವೇನು?

Tourist Visas For China MEA Clarification

ಕೆಲವು ದಿನಗಳ ಹಿಂದೆ ಭಾರತ ಚೀನಾ ರಾಷ್ಟ್ರೀಯರಿಗೆ ನೀಡಿರುವ ಪ್ರವಾಸಿ ವೀಸಾಗಳನ್ನು ಅಮಾನತು ಮಾಡಿತ್ತು. ಐಎಟಿಎ ಈ ಕುರಿತು ತನ್ನ ಸದಸ್ಯ ವಿಮಾನಯಾನ ಕಂಪನಿಗಳಿಗೆ ಈ ಬಗ್ಗೆ ಮಾಹಿತಿ ನೀಡಿತ್ತು.

ಚೀನಾ ಹೆಸರು ಹೇಳಿ ಭಾರತಕ್ಕೆ ಎಚ್ಚರಿಕೆ ನೀಡಿದ ಯುಎಸ್ಎ ಚೀನಾ ಹೆಸರು ಹೇಳಿ ಭಾರತಕ್ಕೆ ಎಚ್ಚರಿಕೆ ನೀಡಿದ ಯುಎಸ್ಎ

ಚೀನಾ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಪಡೆದು ದೈಹಿಕ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಸುಮಾರು 22 ಸಾವಿರ ಭಾರತೀಯ ವಿದ್ಯಾರ್ಥಿಗಳ ಪರವಾಗಿ ಭಾರತ ಮಾಡಿದ್ದ ಮನವಿಯನ್ನು ಬೀಜಿಂಗ್‌ ತಿರಸ್ಕರಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಚೀನಾದ ಪ್ರವಾಸಿ ವೀಸಾಗಳ ಮಾನ್ಯತೆ ರದ್ದುಗೊಳಿಸಿತ್ತು.

10 ವರ್ಷಗಳ ಮಾನ್ಯತೆ ಇರುವ ಪ್ರವಾಸಿ ವೀಸಾಗಳಿಗೆ ಇನ್ನು ಮುಂದೆ ಮಾನ್ಯತೆ ಇಲ್ಲ ಎಂದು ಏಪ್ರಿಲ್‌ 20ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿತ್ತು.

English summary
MEA spokesperson Arindam Bagchi said that Not the opportune time for resumption of issuance of tourist visas for China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X