ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಸ್ಮಾರಕಗಳ ಮುಂದೆ ಸೆಲ್ಫಿಗೆ ನಿರ್ಬಂಧ!

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 10: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಲ್ಫಿ ವ್ಯಾವೋಹ ಇರಬಹುದು. ಆದರೆ, ಆಗಸ್ಟ್ 12ರಿಂದ ಈ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಹುಷಾರಾಗಿರಿ. ಪ್ರವಾಸೋದ್ಯಮ ಇಲಾಖೆ ಬುಧವಾರ ಎಚ್ಚರಿಕೆಯ ಗಂಟೆ ಬಾರಿಸಿದ್ದು, ರಾಷ್ಟ್ರೀಯ ಸ್ಮಾರಕಗಳ ಬಳಿ ಕೆಲ ದಿನಗಳ ಮಟ್ಟಿಗೆ ನಿರ್ಬಂಧ ಹೇರಲಾಗಿದೆ.

ಆಗಸ್ಟ್ 12 ರಿಂದ 18ರ ತನಕ ರಾಷ್ಟ್ರೀಯ ಸ್ಮಾರಕಗಳ ಮುಂದೆ ಸೆಲ್ಫಿ ಫೋಟೋ ತೆಗೆದುಕೊಳ್ಳುವುದನ್ನು ಸುರಕ್ಷತಾ ದೃಷ್ಟಿಯಿಂದ ನಿರ್ಬಂಧಿಸಲಾಗಿದೆ. ಈ ಆದೇಶ ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದೆ. [ಸ್ವತಂತ್ರ ದಿನಾಚರಣೆ ದಿನ ಮೋದಿ ಜೀವಕ್ಕೆ ಕಂಟಕ]

Tourism Ministry issues advisory against selfies from Aug 12-18

ಪ್ರವಾಸಿಗರ ಸೋಗಿನಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಸ್ಮಾರಕಗಳ ಬಳಿ ಪ್ರವಾಸಿಗರಿಗೆ ನಿಯಂತ್ರಣ ಹೇರುವಂತೆ ಪ್ರವಾಸೋದ್ಯಮ ಸಚಿವಾಲಯ ತನ್ನ ಪತ್ರದಲ್ಲಿ ತಿಳಿಸಿದೆ. [ಬಿಜೆಪಿ ಮಿಡ್ ನೈಟ್ ಫ್ರೀಡಂ ರನ್‌ನಲ್ಲಿ ಪಾಲ್ಗೊಳ್ಳಿ]

ಸ್ವಾತಂತ್ಯೋತ್ಸವಕ್ಕಾಗಿ ಭರದಿಂದ ಸಿದ್ಧತೆ ಸಾಗಿದ್ದು, ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷತಾ ನಿಯಮಗಳನ್ನು ರೂಪಿಸಲಾಗುತ್ತಿದೆ. ಕೆಂಪುಕೋಟೆಯ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಬುಲೆಟ್ ಪ್ರೂಫ್ ಪರದೆಯೊಂದಿಗೆ ಭಾಷಣ ಮಾಡಲು ಸೂಚಿಸಲಾಗಿದೆ.

ಐಎಸ್ ಐಎಸ್ ಮುಂತಾದ ಉಗ್ರ ಸಂಘಟನೆಗಳು ಕಾಶ್ಮೀರದಿಂದ ನುಸುಳಿ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

English summary
No selfies in front of national memorials of India between August 12 and 18, read an advisory by the Tourism Ministry of India. The Ministry on Wednesday issued an advisory barring people from clicking photographs and selfies in front of national memorials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X