ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಭಯೋತ್ಪಾದನೆ ತಡೆಗೆ 42 ಸಂಘಟನೆಗಳ ಮೇಲೆ ನಿರ್ಬಂಧ

|
Google Oneindia Kannada News

ನವದೆಹಲಿ, ಫೆಬ್ರವರಿ 3: ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, 1967 ಅಡಿಯ ಮೊದಲ ಪಟ್ಟಿಯಲ್ಲಿ ಭಯೋತ್ಪಾದಕ ಸಂಘಟನೆಗಳ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಯುಎಪಿಎ ಅಡಿ ಕಾನೂನುಬಾಹಿರ ಸಂಘಗಳು ಎಂದು 13 ಸಂಘಟನೆಗಳನ್ನು ಘೋಷಿಸಲಾಗಿದೆ.

121 ಮಂದಿ ಬಂಧನ, 182 ಮದ್ರಸಾಗಳು ಬಂದ್: ಉಗ್ರರ ವಿರುದ್ಧ ಪಾಕ್‌ ಕಾರ್ಯಾಚರಣೆ121 ಮಂದಿ ಬಂಧನ, 182 ಮದ್ರಸಾಗಳು ಬಂದ್: ಉಗ್ರರ ವಿರುದ್ಧ ಪಾಕ್‌ ಕಾರ್ಯಾಚರಣೆ

ದೇಶದಲ್ಲಿ ಇದುವರೆಗೆ ಕಾಯಿದೆಯ ಅಡಿಯಲ್ಲಿ ಪಟ್ಟಿ ಮಾಡಲಾಗಿರುವ ಭಯೋತ್ಪಾದಕರ ಪಟ್ಟಿಯಲ್ಲಿ 31 ಸಂಘಟನೆಗಳನ್ನು ಗುರುತಿಸಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ಕಾನೂನು ಜಾರಿ ಸಂಸ್ಥೆಗಳು ಈ ಎಲ್ಲಾ ಸಂಘಟನೆಗಳು ಮತ್ತು ಅದಕ್ಕೆ ಸೇರಿದ ವ್ಯಕ್ತಿಗಳ ಮೇಲೆ ನಿರಂತರ ನಿಗಾ ಇರಿಸುತ್ತವೆ. ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತವೆ ಎಂಬುದರ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

Total 42 Terrorist Organisation in First Schedule under Unlawful Activities Prevention Act 1967

ಕಾನೂನುಬಾಹಿರ ಚಟುವಟಿಕೆಗಳ ತಡೆ ತಿದ್ದುಪಡಿ ಕಾಯಿದೆ 2019ರ ಅಡಿಯಲ್ಲಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಕರೆಯುವ ನಿಬಂಧನೆಯನ್ನು ಸೇರಿಸಲಾಗಿತ್ತು. ಆ ಮೂಲಕ ನಿಷೇಧಿತ ಸಂಘಟನೆಗಳಲ್ಲಿನ ವ್ಯಕ್ತಿಗಳನ್ನು ಮತ್ತು ಸದಸ್ಯರನ್ನು ಗುರುತಿಸುವುದಕ್ಕೆ ಮತ್ತು ಹೆಸರಿಸುವುದಕ್ಕೆ ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳಲಾಗಿತ್ತು. ಹಾಗಿದ್ದಲ್ಲಿ ಕೇಂದ್ರ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, 1967 ಅಡಿಯಲ್ಲಿ ಗುರುತಿಸಿದ ನಿಷೇಧಿತ ಸಂಘಟನೆಗಳು ಯಾವುವು ಎಂಬುದನ್ನು ಮುಂದೆ ಓದಿ.

English summary
Total 42 Terrorist Organisation in First Schedule under Unlawful Activities Prevention Act 1967.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X