ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?

|
Google Oneindia Kannada News

ನವದೆಹಲಿ, ಜುಲೈ.05: ಜ್ವರ, ಕೆಮ್ಮು, ಉಸಿರಾಟದ ತೊಂದರೆ ಹೀಗೆ ಒಂಭತ್ತು ಲಕ್ಷಣಗಳು ಕೊರೊನಾವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದು ಈಗಾಗಲೇ ಜಗತ್ಜಾಹೀರು ಆಗಿದೆ. ಈ ಸೋಂಕು ಕಂಡು ಬಂದವರು ವೈದ್ಯರನ್ನು ಸಂಪರ್ಕಿಸುವಂತೆ ಸರ್ಕಾರಗಳು ಜಾಗೃತಿ ಮೂಡಿಸುತ್ತಿದೆ. ಇದರ ನಡುವೆ ಮತ್ತೊಂದು ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಭಾರತದ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರೀವೆಂಷನ್ (CDC) ಆಘಾತಕಾರಿ ಅಂಶವೊಂದನ್ನು ಹೊರ ಹಾಕಿದೆ. ಈಗಾಗಲೇ ಗುರುತಿಸಿರುವ ಕೊರೊನಾವೈರಸ್ ಸೋಂಕಿತರ ಲಕ್ಷಣಗಳ ಪಟ್ಟಿಗೆ ಮತ್ತೆ ಮೂವರ ಲಕ್ಷಣಗಳನ್ನು ಸೇರ್ಪಡೆಗೊಳಿಸಲಾಗಿದೆ.

ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!

ಕೊರೊನಾ ವೈರಸ್ ಸೋಂಕಿತರಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಮೂರು ಗುಣಲಕ್ಷಣಗಳು ಕೂಡಾ ಸೋಂಕಿನ ಲಕ್ಷಣ ಎಂದು ಗುರುತಿಸಲಾಗಿದೆ. ಇದರಿಂದ ಕೊವಿಡ್-19 ಸೋಂಕಿತರಲ್ಲಿ ಈ ಎಲ್ಲ ಬಗೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಿಡಿಸಿ ಹೇಳಿದೆ.

ಮೂರು ಹೊಸ ಸೋಂಕಿನ ಲಕ್ಷಣಗಳ ಕುರಿತು ಉಲ್ಲೇಖ

ಮೂರು ಹೊಸ ಸೋಂಕಿನ ಲಕ್ಷಣಗಳ ಕುರಿತು ಉಲ್ಲೇಖ

ಹೈದ್ರಾಬಾದ್ ನಲ್ಲಿರುವ ಕಿಂಗ್ ಕೋತಿ ಆಸ್ಪತ್ರೆಯ ವೈದ್ಯರ ಪ್ರಕಾರ ಕೊರೊನಾವೈರಸ್ ಸೋಂಕಿತರಲ್ಲಿ ಸಿಡಿಸಿ ಪಟ್ಟಿ ಮಾಡಿರುವ ಲಕ್ಷಣಗಳ ಜೊತೆಗೆ ಈ ಮೂರು ಲಕ್ಷಣಗಳು ಕೂಡಾ ಕಾಣಿಸಿಕೊಳ್ಳುತ್ತವೆ. ಕೊೊರನಾವೈರಸ್ ಸೋಂಕಿತರಿಗೆ ಅತಿಸಾರ, ತಲೆನೋವು ಹಾಗೂ ವಾಂತಿ ಹೆಚ್ಚಾಗಿರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಲಕ್ಷಣಗಳನ್ನು ಹೊಂದಿರುವವರನ್ನು ಸಾಮಾನ್ಯ ವೈದ್ಯಕೀಯ ಪರೀಕ್ಷೆ ನಡೆಸಿ ಬಿಡುವುದಲ್ಲ. ಬದಲಿಗೆ ಒಮ್ಮೆ ಕೊರೊನಾವೈರಸ್ ಸೋಂಕು ಪರೀಕ್ಷೆಗೆ ಒಳಪಡಿಸುವುದು ಉತ್ತಮ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಶ್ವಾಸಕೋಶಕ್ಕೆ ಕೊರೊನಾವೈರಸ್ ಅಪಾಯಕಾರಿ

ಶ್ವಾಸಕೋಶಕ್ಕೆ ಕೊರೊನಾವೈರಸ್ ಅಪಾಯಕಾರಿ

ಕೊರೊನಾವೈರಸ್ ಮಹಾಮಾರಿಯು ಪರಿಸರಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಸಾಮರ್ಥ್ಯವಿದೆ ಎಂದು ಕೆಲವು ಹಿರಿಯ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆರಂಭದಲ್ಲಿ ಹೊಟ್ಟೆನೋವಿನ ರೂಪಾದಲ್ಲಿ ಕಾಣಿಸಿಕೊಳ್ಳುವ ವೈರಸ್ ನೇರವಾಗಿ ಶ್ವಾಸಕೋಶದ ಗ್ಯಾಸ್ಟೋ-ಇನ್ ಟೆಸ್ಟಿನಲ್ ಟ್ರ್ಯಾಕ್ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಜೀರ್ಣಕ್ರಿಯೆಯು ನಿಂತು ಹೋಗಿ ಅತಿಸಾರ ಹಾಗೂ ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತದನಂತರದಲ್ಲಿ ವ್ಯಕ್ತಿಯಲ್ಲಿ ನಿಶಕ್ತಿ, ಆಮ್ಲಜನಕ ಪ್ರಮಾಣದಲ್ಲಿ ಇಳಿಕೆ, ರಕ್ತದೊತ್ತಡ ಕಡಿಮೆಯಾಗುವುದು ಹಾಗೂ ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಿಂದ ವ್ಯಕ್ತಿಯು ನಿಂತಲ್ಲೇ ಕುಸಿದು ಬೀಳುತ್ತಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮೊದಲು ಸಿಡಿಸಿಯಿಂದ ಸೋಂಕಿತರಲ್ಲಿ 6 ಲಕ್ಷಣಗಳ ಬಗ್ಗೆ ಪಟ್ಟಿ

ಈ ಮೊದಲು ಸಿಡಿಸಿಯಿಂದ ಸೋಂಕಿತರಲ್ಲಿ 6 ಲಕ್ಷಣಗಳ ಬಗ್ಗೆ ಪಟ್ಟಿ

ಕೊರೊನಾ ವೈರಸ್ ಸೋಂಕಿತರಲ್ಲಿ ಮೊದಲು ಪ್ರಮುಖವಾಗಿ ಮೂರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಪಟ್ಟಿ ಮಾಡಲಾಗಿತ್ತು. ಈ ಲಿಸ್ಟ್ ಗೆ ಹೊಸದಾಗಿ ಆರು ಲಕ್ಷಣಗಳನ್ನು ಸೇರಿಸಲಾಗಿತ್ತು. ಒಟ್ಟು 9 ಲಕ್ಷಣಗಳ ಬಗ್ಗೆ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರೀವೆಂಷನ್ (CDC) ಉಲ್ಲೇಖಿಸಿತ್ತು.

- ಜ್ವರ

- ಕೆಮ್ಮು

- ಉಸಿರಾಟ ತೊಂದರೆ

- ಶೀತ

- ಶೀತದ ಪುನರಾವರ್ತನೆ

- ಮೂಳೆಗಳಲ್ಲಿ ನೋವು

- ತಲೆನೋವು

- ಗಂಟಲು ಕೆರೆತ,

- ರುಚಿ ಮತ್ತು ವಾಸನೆ ಗುರುತಿಸಲು ಆಗುವುದಿಲ್ಲ

11 ಲಕ್ಷಣಗಳು ಕಾಣಿಸಿಕೊಂಡರೆ ಕೊರೊನಾವೈರಸ್ ಸೋಂಕು

11 ಲಕ್ಷಣಗಳು ಕಾಣಿಸಿಕೊಂಡರೆ ಕೊರೊನಾವೈರಸ್ ಸೋಂಕು

ಇನ್ನು, ಕೊರೊನಾವೈರಸ್ ಸೋಂಕಿತರಲ್ಲಿ ಒಟ್ಟು 11 ಬಗೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಪಟ್ಟಿ ಮಾಡಲಾಗುತ್ತದೆ. ಈ ಲಕ್ಷಣಗಳನ್ನು ಹೊಂದಿರುವವರು ಕೊಂಚ ಮುಂಜಾಗ್ರತೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

- ಜ್ವರ

- ಕೆಮ್ಮು

- ಉಸಿರಾಟ ತೊಂದರೆ

- ಶೀತ

- ಶೀತದ ಪುನರಾವರ್ತನೆ

- ಮೂಳೆಗಳಲ್ಲಿ ನೋವು

- ತಲೆನೋವು

- ಗಂಟಲು ಕೆರೆತ,

- ರುಚಿ ಮತ್ತು ವಾಸನೆ ಗುರುತಿಸಲು ಆಗುವುದಿಲ್ಲ

- ಅತಿಸಾರ

- ವಾಂತಿ

ಕೊರೊನಾ ಲಕ್ಷಣವಿಲ್ಲದಿದ್ದರೂ ಕೆಲವೊಮ್ಮೆ ಸೋಂಕು ಕನ್ಫರ್ಮ್

ಕೊರೊನಾ ಲಕ್ಷಣವಿಲ್ಲದಿದ್ದರೂ ಕೆಲವೊಮ್ಮೆ ಸೋಂಕು ಕನ್ಫರ್ಮ್

ಕೊರೊನಾ ವೈರಸ್ ಸೋಂಕು ಮತ್ತು ಸೋಂಕಿತರ ಬಗ್ಗೆ ಗೊಂದಲ ಬೇಕಾಗಿಲ್ಲ. ವಿಶ್ವದಾದ್ಯಂತ ಹಲವು ಪ್ರಕರಣಗಳಲ್ಲಿ ಕೆಮ್ಮು, ಶೀತ, ಜ್ವರ ಹಾಗೂ ಉಸಿರಾಟ ತೊಂದರೆ ಕಾಣಿಸಿಕೊಳ್ಳದಿರುವ ವ್ಯಕ್ತಿಗಳಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಎಂದು ತಿಳಿದು ಬಂದಿದೆ. ಏಕೆಂದರೆ ನೊವೆಲ್ ಕೊರೊನಾ ವೈರಸ್ ಉಳಿದ ಕೊರೊನಾ ವೈರಸ್ ಗಳಂತೆ ಅಲ್ಲ. ವಿಭಿನ್ನ ಸೋಂಕಿನ ಲಕ್ಷಣಗಳನ್ನು ಸಾರ್ಸ್ ಕೊರೊನಾ ವೈರಸ್-2 ಹೊಂದಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

English summary
Not Only Fever, Cough, And Shortness Of Breath. Here Details Of Total 11 Symptoms Of Novel Coronavirus: CDC Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X