• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಕೊರೊನಾ ಸೋಂಕಿನ ಸ್ಫೋಟ: ಆರೋಗ್ಯ ಸಂಸ್ಥೆ ಎಚ್ಚರಿಕೆ

|

ನವದೆಹಲಿ, ಜೂನ್ 7: ಭಾರತದಲ್ಲಿ ಈಗಾಗಲೇ ಕೊರೊನಾ ಸೋಂಕಿತ ಪ್ರಕರಣಗಳು

ಹೆಚ್ಚಾಗುತ್ತಿದೆ.ಕಾಲಕ್ರಮೇಣ ಕಡಿಮೆಯಾಗಬಹುದು ಅಂದುಕೊಂಡಿರುವಾಗ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಭಾರತದಲ್ಲಿ ಈವರೆಗೆ ಕೊರೊನಾ ವೈರಸ್ ಸ್ಫೋಟವಾಗದೆ ಇರಬಹುದು ಆದರೆ ಅದು ಸಂಭವಿಸಬಹುದಾದ ಅಪಾಯವನ್ನು ಮಾತ್ರ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮಗಳ ಕಾರ್ಯನಿರ್ವಾಹಕ ನಿರ್ದೇಶಕ ಮೈಕಲ್ ರಾನ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದೂ ಶತಕ ದಾಟಿತು ಕೊರೊನಾ ವೈರಸ್ ಕೇಸ್

ಭಾರತದಲ್ಲಿ 24 ಗಂಟೆಗಳಲ್ಲಿ 91971 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟು 2,46,628 ಮಂದಿ ಕೊರೊನಾ ಸೋಂಕಿತರಿದ್ದಾರೆ.

ಮೂರು ವಾರಗಳ ಕಾಲ ಸೋಂಕು ದ್ವಿಗುಣಗೊಳ್ಳಬಹುದು

ಮೂರು ವಾರಗಳ ಕಾಲ ಸೋಂಕು ದ್ವಿಗುಣಗೊಳ್ಳಬಹುದು

ಭಾರತದಲ್ಲಿ ಲಾಕ್‌ಡೌನ್ ಹಂತ ಹಂತವಾಗಿ ತೆರವುಗೊಳಳ್ಳುತ್ತಿರುವುದರಿಂದ ಈ ಮೂರು ವಾರಗಳ ಕಾಲ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಬಹುದು. ಭಾರತದ ನಗರ ಹಾಗೂ ಹಳ್ಳಿಗಳಲ್ಲಿ ಈ ಸೋಂಕಿನ ಪ್ರಸರಣ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.

ಕೇವಲ ಭಾರತಕ್ಕೆ ಮಾತ್ರ ಈ ತೊಂದರೆಯಲ್ಲ

ಕೇವಲ ಭಾರತಕ್ಕೆ ಮಾತ್ರ ಈ ತೊಂದರೆಯಲ್ಲ

ಕೇವಲ ಭಾರತವಷ್ಟೆ ಅಲ್ಲ ದೊಡ್ಡ ಜನಸಂಖ್ಯೆ ಇರುವ ದಕ್ಷಿಣ ಏಷ್ಯಾದ ದೇಶಗಳಾದ ಬಾಂಗ್ಲಾ, ಪಾಕಿಸ್ತಾನಗಳಲ್ಲಿಯೂ ಸೋಂಕಿತರ ಸಂಖ್ಯೆ ಒಮ್ಮೆಲೆ ಹೆಚ್ಚಾಗುವ ಅಪಾಯವಿದೆ. ಸೋಂಕು ಹೆಚ್ಚಳವಾಗುವುದರ ಹಾಗೂ ಎಷ್ಟು ದಿನಗಳಲ್ಲಿ ಈ ಪ್ರಮಾಣ ದ್ವಿಗುಣವಾಗುತ್ತದೆ ಎಂಬುದರ ಮೇಲೆ ಭಾರತ ನಿಗಾ ಇಡುವುದು ಅವಶ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕಕ್ಕೆ ಆಘಾತ; ಒಂದೇ ದಿನ 378 ಮಂದಿಗೆ ಕೊರೊನಾ ವೈರಸ್!

ಕೊರೊನಾ ಹರಡುವ ಭೀತಿ ಯಾರಲ್ಲಿ ಹೆಚ್ಚಿದೆ?

ಕೊರೊನಾ ಹರಡುವ ಭೀತಿ ಯಾರಲ್ಲಿ ಹೆಚ್ಚಿದೆ?

ಒಂದೆಡೆ ವಿದೇಶದಲ್ಲಿ ಸಿಲುಕಿರುವವರನ್ನು ಕರೆ ತರಲಾಗುತ್ತಿದೆ, ಇನ್ನೊಂದೆಡೆ ವಲಸೆ ಕಾರ್ಮಿಕರನ್ನು ಬೇರೆಡೆಗೆ ಕಳುಹಿಸಿಕೊಡಲಾಗುತ್ತಿದೆ. ಇವರಿಂದಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರೂ ಒಟ್ಟೊಟ್ಟಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಒಬ್ಬರಿಗೆ ಸೋಂಕು ತಗುಲಿದರೆ ಎಲ್ಲರಿಗೂ ತಗುಲುವ ಸಾಧ್ಯತೆ ಇರುತ್ತದೆ.ಶನಿವಾರ ದೇಶದಲ್ಲಿ 294 ಮಂದಿ ಮೃತಪಟ್ಟಿದ್ದಾರೆ. ಒಂದೇ ದಿನ 9887 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ದೇಶದಲ್ಲಿ ಕೊರೊನಾ ಸೋಂಕಿತರೆಷ್ಟು?, ಮೃತರೆಷ್ಟು?

ದೇಶದಲ್ಲಿ ಕೊರೊನಾ ಸೋಂಕಿತರೆಷ್ಟು?, ಮೃತರೆಷ್ಟು?

ದೇಶದಲ್ಲಿ 24 ಗಂಟೆಗಳಲ್ಲಿ 91971 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟು 2,46,628 ಮಂದಿ ಕೊರೊನಾ ಸೋಂಕಿತರಿದ್ದಾರೆ. 6929 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.

English summary
According to WHO expert Michael Ryan, the doubling time of the coronavirus cases in India is about three weeks at this stage. Disease has not "exploded" in India, but the risk of that happening remains as the country moves towards unlocking its lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more